ಪಾಕಿಸ್ತಾನಿ ಉಗ್ರರಿಂದ ಜಯಲಲಿತಾ ವೆಬ್‌ಸೈಟ್‌ ಹ್ಯಾಕ್.!

ಶನಿವಾರ, 2 ನವೆಂಬರ್ 2013 (16:53 IST)
PTI
PTI
ಅಮ್ಮ ಎಂದೇ ಖ್ಯಾತಿಯಾಗಿರುವ ಜಯಲಲಿತ ಅವರ ಪಕ್ಷದ ಅಧಿಕೃತ ವೆಬ್‌ ಸೈಟ್‌ ಅನ್ನು ಪಾಕಿಸ್ತಾನಿ ಉಗ್ರರು ಹ್ಯಾಕ್ ಮಾಡಿದ್ದಾರೆ. ಭಾರತದ ಮೇಲೆ ಸೈಬರ್‌ ದಾಳಿಗೆ ಮುನ್ನುಡಿ ಹಾಡಿದ ಪಾಕಿಸ್ತಾನಿ ಉಗ್ರರು ಎಐಎಡಿಎಂಕೆ ಪಕ್ಷದ ಅಧಿಕೃತ ವೆಬ್‌ ಸೈಟ್‌ ಅನ್ನು ಹ್ಯಾಕ್ ಮಾಡಿದೆ. ಹ್ಯಾಕ್ ಮಾಡಿದ 24 ಗಂಟೆಗಳು ಕಳೆದರೂ, ಅದನ್ನು ರಿಕವರಿ ಮಾಡಲು ಇದುವರೆಗೂ ಸಾಧ್ಯವೇ ಆಗಿಲ್ಲ..!

ಎಐಎಡಿಎಂಕೆ ಪಕ್ಷದ ಅಧಿಕೃತ ವೆಬ್‌ಸೈಟ್‌ www.aiadmkallindia.org ಮೂಲಕ ಪಕ್ಷದ ಎಲ್ಲಾ ಕಾರ್ಯ ಚಟುವಟಿಕೆಗಳನ್ನು ಮತ್ತು ಕಾರ್ಯಕ್ರಮಗಳನ್ನು ಜನರಿಗೆ ತಲುಪಿಸುವ ಕಾರ್ಯ ಎಐಎಡಿಎಂಕೆ ಪಕ್ಷ ಮಾಡ್ತಾ ಇತ್ತು. ಈ ವೆಬ್‌ ಸೈಟ್‌ ಆಗಿಂದಾಗೆ ಅಪ್‌ಡೇಟ್‌ ಆಗುತ್ತಲೇ ಇತ್ತು. ಆದ್ರೆ ಇದೀಗ ಸ್ಥಬ್ಧವಾಗಿಬಿಟ್ಟಿದೆ. ನೀವು ಈ ವೆಬ್‌ಸೈಟಿಗೆ ಭೆಟಿ ನೀಡಿದ್ರೆ 'HACKED BY H4$N4!N H4XOR' ಎಂಬ ಎರರ್‌ ತೋರಿಸುತ್ತಿದೆ. ಅಷ್ಟೇ ಅಲ್ಲ, 'Islam Zindabad, Long Live Muslims, Pakistan Zindabad.' ಎಂಬ ಬರಹಗಳು ಕಾಣಿಸುತ್ತವೆ.

ಜಯಾ ಟಿವಿಯ ವೆಬ್‌ ಸೈಟನ್ನು ಕೂಡ ಪಾಕಿಸ್ತಾನಿ ಉಗ್ರರು ಹ್ಯಾಕ್ ಮಾಡಿದ್ದು, ಅದನ್ನು ಈಗ ಸರಿಪಡಿಸಲಾಗಿದೆ. ಆದ್ರೆ ಎಐಎಡಿಎಂಕೆ ಪಕ್ಷದ ಅಧಿಕೃತ ವೆಬ್‌ ಸೈಟ್‌ ಅನ್ನು ಸರಿಪಡಿಸಲು ಸಾಧ್ಯವಾಗಿಲ್ಲ.

ವೆಬ್ದುನಿಯಾವನ್ನು ಓದಿ