ಪಾಟ್ನಾ ಸ್ಫೋಟದ ಬಂಧಿತ ಶಂಕಿತ ಉಗ್ರ ಮಹರೆ ಆಲಂ ಪರಾರಿ

ಗುರುವಾರ, 31 ಅಕ್ಟೋಬರ್ 2013 (17:57 IST)
PTI
ಪಾಟ್ನಾ ಸರಣಿ ಸ್ಫೋಟದ ಶಂಕಿತ ಉಗ್ರ ಮಹರೆ ಆಲಂ ಎನ್‍ಐಎ ಅಧಿಕಾರಿಗಳ ವಶದಿಂದ ಪರಾರಿಯಾಗಿದ್ದಾನೆ.

ದರ್ಬಾಂಗ್‌ ನಗರದಿಂದ ನಿನ್ನೆಯಷ್ಟೆ ಆರೋಪಿ ಆಲಂ ನನ್ನು ಬಂಧಿಸಲಾಗಿತ್ತು, ವಿಚಾರಣೆಗಾಗಿ ಕರೆದೊಯ್ಯಿವಾಗ ಎನ್‌ಐಎ ಅಧಿಕಾರಿಗಳಿಗೆ ಚಳ್ಳೆಹಣ್ಣು ತಿನ್ನಿಸಿ ಪರಾರಿಯಾಗಿದ್ದಾನೆ.

ಪಾಟ್ನಾದಿಂದ 70 ಕಿ.ಮೀ ದೂರದಲ್ಲಿರುವ ಮುಜಾಫರ್‌ಪುರ್ ನಗರಕ್ಕೆ ವಿಚಾರಣೆಗಾಗಿ ಕರೆತಂದಾಗ ಶಂಕಿತ ಉಗ್ರ ಪರಾರಿಯಾಗಿದ್ದಾನೆ. ಇಂಡಿಯನ್ ಮುಜಾಹಿದಿನ್ ಉನ್ನತ ಕಮಾಂಡರ್‌ ತಹಸೀನ್ ಅಖ್ತರ್ ಸಹಚರನಾಗಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ನಡೆಸಿದ ಐತಿಹಾಸಿಕ ಹೂಂಕಾರ ಸಭೆಯಲ್ಲಿ ಸರಣಿ ಬಾಂಬ್ ಸ್ಫೋಟಗಳು ನಡೆದಿರುವುದನ್ನು ಸ್ಮರಿಸಬಹುದು.

ವೆಬ್ದುನಿಯಾವನ್ನು ಓದಿ