ಪಾರ್ಸೆಲ್ ಬಿಚ್ಚಿದಾಗ ಬುಸುಗುಟ್ಟಿದ ಹಾವು, ಬೆಚ್ಚಿ ಬಿದ್ದ ಉದ್ಯಮಿ

ಗುರುವಾರ, 19 ಡಿಸೆಂಬರ್ 2013 (19:03 IST)
PR
PR
ನವದೆಹಲಿ: ನವದೆಹಲಿಯ ದರ್ಯಾಗಂಜ್ ಪ್ರದೇಶದಲ್ಲಿ ಉದ್ಯಮಿಯೊಬ್ಬರ ಮನೆಗೆ ಮಂಗಳವಾರ ಒಂದು ಪಾರ್ಸೆಲ್ ರವಾನೆ ಮಾಡಲಾಗಿತ್ತು. ಆ ಪಾರ್ಸೆಲ್ ಬಗ್ಗೆ ಅನುಮಾನಗೊಂಡ ಉದ್ಯಮಿ ಪೊಲೀಸರಿಗೆ ಕರೆ ಮಾಡಿದ ನಂತರ ಬಾಂಬ್ ನಿಷ್ಕ್ರಿಯ ದಳ ಮತ್ತು ಶ್ವಾನದಳ ಸ್ಥಳಕ್ಕೆ ಆಗಮಿಸಿದವು. ಬಾಂಬ್ ನಿಷ್ಕ್ರಿಯ ದಳವು ಎಚ್ಚರಿಕೆಯಿಂದ ಅರ್ಧಗಂಟೆ ಕಾಲ ಪೆಟ್ಟಿಗೆಯನ್ನು ಪರಿಶೀಲಿಸಿ ಬಾಂಬ್ ಹೊಂದಿಲ್ಲವೆಂದು ಖಚಿತಪಡಿಸಿದರು. ಆದರೆ ಪೆಟ್ಟಿಗೆ ತೆರೆದುನೋಡಿದಾಗ ಜೀವಂತ ಹಾವೊಂದು ಬುಸುಗುಟ್ಟುತ್ತಿರುವುದನ್ನು ನೋಡಿ ಉದ್ಯಮಿ ಹೌಹಾರಿದರು.

ನಂತರ ಪೆಟ್ಟಿಗೆಯನ್ನು ಪುನಃ ಮುಚ್ಚಿ ವನ್ಯಜೀವಿ ಎಸ್‌ಒಎಸ್‌ಗೆ ಕಳಿಸಲಾಯಿತು.ಈ ನಾಟಕೀಯ ವಿದ್ಯಮಾನ ಷುರುವಾಗಿದ್ದು ಮಂಗಳವಾರ ಸಂಜೆ 5.30ಕ್ಕೆ ಉದ್ಯಮಿ ಮಹಮ್ಮದ್ ಕಾಮಿಲ್ ಪತ್ನಿ ಶಾಮಾ ಪರ್ವೀನ್ ಪತಿಯನ್ನು ಕರೆದು ಅಪರಿಚಿತ ವ್ಯಕ್ತಿಯೊಬ್ಬ ಹಳದಿ ಕಾಗದದಿಂದ ಸುತ್ತಿದ್ದ ಪಾರ್ಸೆಲ್ ಕೊಟ್ಟುಹೋದನೆಂದು ಹೇಳಿದರು.ಕಾಮಿಲ್ ಮನೆಯ ಪಕ್ಕದ ಅಂಗಡಿಯಲ್ಲಿ ಈ ಪಾರ್ಸೆಲ್ ಇರಿಸಲಾಗಿದ್ದು, ಡೆಲಿವರಿ ಹುಡುಗನ ಬಳಿ ಕಾಮಿಲ್ ಮನೆಗೆ ಆ ಪಾರ್ಸೆಲ್ ತಲುಪಿಸುವಂತೆ ತಿಳಿಸಲಾಗಿತ್ತು.

ವೆಬ್ದುನಿಯಾವನ್ನು ಓದಿ