ಪೋಕ್ರಾಣ್‌ನಲ್ಲಿ ಭಾರತೀಯ 'ವಾಯುಶಕ್ತಿ- 2010'

ಭಾನುವಾರ, 28 ಫೆಬ್ರವರಿ 2010 (16:00 IST)
ಭಾರತೀಯ ವಾಯು ಸೇನೆ ಭಾನುವಾರ ಸಂಜೆ ಇಲ್ಲಿ ನಡೆಯಲಿರುವ ವಾಯು ಶಕ್ತಿ- 2010 ಪ್ರದರ್ಶನ ಕಾರ್ಯಕ್ರಮದಲ್ಲಿ ತನ್ನ ಶಕ್ತಿಯ ಪ್ರದರ್ಶನ ನೀಡಲಿದೆ.

ಇಡೀ ಪೋಕ್ರಾಣ್‌ನಲ್ಲಿ ಯುದ್ಧ ವಿಮಾನಗಳು ಹಾರಾಡಲಿದ್ದು, ತಮ್ಮ ಶಕ್ತಿ ಪ್ರದರ್ಶಿಸಲಿವೆ. ಸಾಯಂಕಾಲದ ನಂತರ ನಡೆಯಲಿರುವ ಈ ಪ್ರದರ್ಶನ ಈವರೆಗೆ ನಡೆದುದಕ್ಕಿಂತ ಭಿನ್ನ ಮಾದರಿಯದು. ಹಾಗಾಗಿ ಈವರೆಗೆ ನಡೆಯದಿರುವಂಥ ಭಾರತೀಯ ವಾಯುಸೇನೆಯ ಶಕ್ತಿ ಪ್ರದರ್ಶನ ಇದಾಗಿದೆ.

ಸುಖೋಯ್ 30, ಮಿರಾಜ್ 2000, ಜಾಗೌರ್ಸ್ ಮಿಗ್ 21, ದಾಳಿ ಮಾಡುವ ಹೆಲಿಕಾಪ್ಟರ್‌ಗಳು, ಯುಎವಿಗಳು ಹಾಗೂ ಹೈಟೆಕ್ ಭಾರೀ ಯುದ್ಧ ವಿಮಾನಗಳು ಸೇರಿದಂತೆ ಸುಮಾರು 70 ಯುದ್ಧ ವಿಮಾನಗಳು ತಮ್ಮ ಶಕ್ತಿ ಪ್ರದರ್ಶನದ ಹಾರಾಟದ ಅಭ್ಯಾಸವನ್ನು ರಾತ್ರಿಯ ವೇಳೆ ನಡೆಸಲಿದೆ.

ಯುದ್ಧ ಶಸ್ತ್ರಾಸ್ತ್ರಗಳನ್ನು ಕೊಂಡೊಯ್ಯುವ ಎಎನ್ 32, ಎಂಬ್ರಾರ್ ಹಾಗೂ ಐಎಲ್ 76 ಸೇರಿದಂತೆ ಬಹುತೇಕ ದಾಳಿಕೋರ ಹೆಲಿಕಾಪ್ಟರ್‌ಗಳೂ ಕೂಡಾ ಈ ಪ್ರದರ್ಶನದಲ್ಲಿ ಭಾಗವಹಿಸಲಿದೆ.

ಭಾರತೀಯ ವಾಯುಸೇನೆಯಿಂದ 65 ಯುದ್ಧ ವಿಮಾನಗಳು, 60 ವಾಯುಸೇನೆಯ ಕಮಾಂಡೋಗಳು, 30 ಹೆಚ್ಚುವರಿ ಯುದ್ಧವಿಮಾನಗಳು ಇದರಲ್ಲಿ ಭಾರಗವಹಿಸಲಿವೆ.

ವೆಬ್ದುನಿಯಾವನ್ನು ಓದಿ