ಪೋಕ್ರಾನ್ ಅಣು ಪರೀಕ್ಷೆ ಸಂದರ್ಭದಲ್ಲಿ ಸಿಂಗ್ ಇದ್ದಿದ್ರೆ ಓಡಿಹೋಗುತ್ತಿದ್ದರು: ಮೋದಿ

ಶನಿವಾರ, 30 ನವೆಂಬರ್ 2013 (13:03 IST)
PTI
ಜಗತ್ತಿನ ಬಲಿಷ್ಠ ರಾಷ್ಟ್ರಗಳು ನಿರ್ಬಂಧ ಹೇರುವುದಾಗಿ ಎಚ್ಚರಿಸಿದ್ದರೂ ಅಂದಿನ ಪ್ರಧಾನಿ ವಾಜಪೇಯಿ ಯಶಸ್ವಿಯಾಗಿ ಪೋಕ್ರಾನ್ ಅಣು ಪರೀಕ್ಷೆ ನಡೆಸಿದರು. ಇಂದಿನಂತೆ ದುರ್ಬಲ ಪ್ರಧಾನಿಯಾಗಿದ್ದಲ್ಲಿ ಓಡಿ ಹೋಗುತ್ತಿದ್ದರು ಎಂದು ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಪ್ರಧಾನಿಗೆ ಲೇವಡಿ ಮಾಡಿದ್ದಾರೆ.

ವಿಶ್ವದ ಪ್ರಬಲ ರಾಷ್ಟ್ರಗಳು ಭಾರತಕ್ಕೆ ನಿರ್ಭಂಧ ಹೇರಿದ್ದವು. ವಿಶ್ವ ಒಂದು ಕಡೆಯಾದರೇ ಭಾರತ ಏಕಾಂಗಿಯಾಗಿತ್ತು. ಆದರೂ ವಾಜಪೇಯಿ ಹೆದರದೆ ಪೋಕ್ರಾನ್ ಅಣು ಪರೀಕ್ಷೆ ನಡೆಸಿಯೇ ತೀರಿದರು ಎಂದು

ರಾಜಸ್ಥಾನದಲ್ಲಿ ವಸುಂಧರಾ ರಾಜೇ ನೇತೃತ್ವದ ಬಿಜೆಪಿ ಪಕ್ಷ ಅಧಿಕಾರದ ಗದ್ದುಗೆಗೆ ಏರಲಿದೆ. ದೆಹಲಿಯಲ್ಲೂ ಬಿಜೆಪಿ ಪಕ್ಷ ಅಧಿಕಾರ ಹಿಡಿಯಲಿದೆ ಎಂದು ಭವಿಷ್ಯ ನುಡಿದರು.

ದೇಶದಲ್ಲಿ ಬಿಜೆಪಿ ಪ್ರಬಲ ಅಲೆಯಿರುವುದರಿಂದ ಕಾಂಗ್ರೆಸ್ ಪಕ್ಷ ಮತ್ತೆ ಅಧಿಕಾರ ಹಿಡಿಯುವುದು ತುಂಬಾ ಕಷ್ಟವಾಗಿದೆ ಎಂದರು. ಯುಪಿಎ ಸರಕಾರ ತನ್ನ ಅಧಿಕಾರವಧಿಯಲ್ಲಿ ಅಭಿವೃದ್ಧಿಯನ್ನು ತೊರೆದು ಭ್ರಷ್ಟಾಚಾರದಲ್ಲಿ ಮುಳುಗಿದೆ ಎಂದು ಕಿಡಿಕಾರಿದರು.

ಕಲ್ಲಿದ್ದಲು ಹಗರಣದ ದಾಖಲೆಗಳು ಕಳೆದುಹೋಗಿವೆ ಎಂದು ಕೇಂದ್ರ ಸರಕಾರ ನಾಚಿಕೆಯಿಲ್ಲದೇ ಹೇಳಿಕೆ ನೀಡುತ್ತದೆ. ದಾಖಲೆಗಳಲ್ಲ ಕೇಂದ್ರ ಸರಕಾರವೇ ಕಳೆದುಹೋಗಿದೆ ಕಾಂಗ್ರೆಸ್ ಪಕ್ಷ ಒಡೆದಾಳುವ ನೀತಿಯನ್ನು ಅನುಸರಿಸುತ್ತಿದೆ. ಬಿಜೆಪಿ ಏಕತೆಗೆ ಹೆಸರುವಾಸಿಯಾಗಿದೆ ಎಂದು ನರೇಂದ್ರ ಮೋದಿ ತಿರುಗೇಟು ನೀಡಿದರು.

ವೆಬ್ದುನಿಯಾವನ್ನು ಓದಿ