ಪ್ರಧಾನಮಂತ್ರಿಯಾಗುವ ಕನಸು ಕೈ ಬಿಟ್ಟ ನರೇಂದ್ರ ಮೋದಿ

ಗುರುವಾರ, 5 ಸೆಪ್ಟಂಬರ್ 2013 (17:04 IST)
PTI
ದೇಶದ ಪ್ರಧಾನಿಯಾಗುವ ಕನಸು ಕಂಡವರು ಸರ್ವನಾಶವಾಗಿ ಹೋಗ್ತಾರೆ. ನಾನಂತೂ ಪ್ರಧಾನಿಯಾಗುವ ಕನಸು ಕಾಣುತ್ತಿಲ್ಲ. ಮುಂಬರುವ 2017ರವರೆಗೆ ರಾಜ್ಯದ ಜನತೆಯ ಸೇವೆ ಸಲ್ಲಿಸುತ್ತೇನೆ ಎಂದು ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ.

ಶಿಕ್ಷಕರ ದಿನಾಚರಣೆ ಅಂಗವಾಗಿ ಆಯೋಜಿಸಿದ ಸಮಾರಂಭದಲ್ಲಿ ಮುಂದಿನ ವರ್ಷ ಪ್ರಧಾನಿಯಾದ ನಂತರ ನಮ್ಮೊಂದಿಗೆ ಚರ್ಚೆ ನಡುತ್ತೀರಾ ಎನ್ನುವ ವಿದ್ಯಾರ್ಥಿಯೊಬ್ಬನ ಪ್ರಶ್ನೆಗೆ ಉತ್ತರಿಸಿದ ಮೋದಿ, ಪ್ರಧಾನಿಯಾಗುವಂತಹ ಕನಸು ಕಾಣೋಲ್ಲ. ಮುಂಬರುವ ದಿನಗಳಲ್ಲೂ ಅಂತಹ ಕಾಣುತ್ತಿಲ್ಲ. ರಾಜ್ಯದ ಜನತೆ 2017ರವರೆಗೆ ಸೇವೆ ಸಲ್ಲಿಸುವಂತೆ ಆದೇಶ ನೀಡಿದ್ದಾರೆ. ಅದರಂತೆ ನಾನು ಏಕಾಗ್ರತೆಯಿಂದ ಕಾರ್ಯನಿರ್ವಹಿಸುತ್ತೇನೆ ಎಂದು ತಿಳಿಸಿದ್ದಾರೆ.

ಅತ್ಯುನ್ನತ ಹುದ್ದೆಯನ್ನು ಅಲಂಕರಿಸುವ ಕನಸು ಕಾಣುವ ವ್ಯಕ್ತಿಗಳು ತಮ್ಮನ್ನು ತಾವೇ ಸರ್ವನಾಶದತ್ತ ಸಾಗಿಸುತ್ತಾರೆ. ಉನ್ನತ ಹುದ್ದೆಗೆ ಎರುವ ಕನಸು ಕಾಣುವುದು ಸರಿಯಲ್ಲ. ಆದರೆ, ದೇಶಕ್ಕಾಗಿ ಉತ್ತಮ ಕೆಲಸ ಮಾಡಬೇಕು ಎನ್ನುವ ಕನಸು ಕಾಣಬೇಕು ಎಂದು ಅಭಿಪ್ರಾಯಪಟ್ಟರು.

ಬಿಜೆಪಿ ಹೈಕಮಾಂಡ್ ಈ ಹಿಂದೆ 1999ರಲ್ಲಿ ಆಡ್ವಾಣಿಯವರಿಗೆ ಭರವಸೆ ನೀಡಿದಂತೆ ನಾನು ಪ್ರಧಾನಿ ಹುದ್ದೆಗಾಗಿ ನಿರೀಕ್ಷಿಸುವ ಅಭ್ಯರ್ಥಿಯಾಗುವುದಿಲ್ಲ ಎಂದು ಪರೋಕ್ಷವಾಗಿ ಒತ್ತಡ ಹೇರುತ್ತಿದ್ದಾರೆ ಎನ್ನುತ್ತವೆ ಪಕ್ಷದ ಮೂಲಗಳು.

ವೆಬ್ದುನಿಯಾವನ್ನು ಓದಿ