ಪ್ರಧಾನಮಂತ್ರಿ ಮೇಲೆ 420 ಕೇಸು ದಾಖಲು.

ಬುಧವಾರ, 20 ನವೆಂಬರ್ 2013 (10:31 IST)
PTI
PTI
ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ಅವರು ಜನರಿಗೆ ಮೋಸ ಮಾಡಿದ್ದಾರೆ ಎಂದು ಆರೋಪಿಸಿ, ಭಾರತದ ಪ್ರಧಾನಮಂತ್ರಿಗಳ ವಿರುದ್ಧವೇ 420 ಕೇಸು ದಾಖಲಿಸಲಾಗಿದೆ. ಪ್ರಧಾನಿಯ ಜೊತೆಗೆ ಕೇಂದ್ರ ಗೃಹ ಸಚಿವರ ಮೇಲೂ ದೂರು ದಾಖಲಾಗಿದ್ದು, ಸಚಿವ ಸುಶೀಲ್ ಕುಮಾರ್ ಶಿಂಧೆಯವರೂ ಕೂಡ ಜನರ ಭಾವನೆಗಳಿಗೆ ಧಕ್ಕೆ ಮಾಡಿದ್ದಾರೆ ಎಂದು ಆರೋಪಿಸಿ ಸ್ಥಳೀಯ ನ್ಯಾಯಾಲಯದಲ್ಲಿ ಮಂಗಳವಾರ ಪ್ರಕರಣ ದಾಖಲಿಸಲಾಗಿದೆ.

ಪ್ರಧಾನಿ ಮತ್ತು ಗೃಹ ಸಚಿವರ ವಿರುದ್ಧ ಭಾರತೀಯ ದಂಡ ಸಂಹಿತೆ 420 ರ ಅನ್ವಯ ಮೋಸ ಹಾಗೂ ಅಪ್ರಾಮಾಣಿಕತೆ, 419 ರ ಅನ್ವಯ ವಂಚನೆ, 417 ಹಾಗೂ 504 ಅನ್ವಯ ಶಾಂತಿ ಕದಡುವ ಉದ್ದೇಶಿದಿಂದ ಪ್ರಜ್ಞಾಪೂರ್ವಕ ಅಗೌರವ ಹಾಗೂ 120(ಬಿ) ಅನ್ವಯ ಕ್ರಿಮಿನಲ್ ಪಿತೂರಿ ಕಲಂಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಅಷ್ಟೇ ಅಲ್ಲ, ಸಚಿನ್ ಅವರ ಹೆಸರನ್ನೂ ಈ ದೂರಿನಲ್ಲಿ ದಾಖಲಿಸಲಾಗಿದೆ ಎಂಬ ಮಾಹಿತಿ ಕೂಡ ಲಭ್ಯವಾಗಿದೆ.

ಭಾರತ ರತ್ನ ಪ್ರಶಸ್ತಿಯನ್ನು ನೀಡುವ ಸಮಯದಲ್ಲಿ ಹಾಕಿ ಮಾಂತ್ರಿಕ ಧ್ಯಾನಚಂದ್ ಅವರ ಹೆಸರನ್ನು ಕೈಬಿಡುವ ಮೂಲಕ ಪ್ರಧಾನಿ, ಗೃಹ ಸಚಿವ ಶಿಂಧೆ, ಕೇಂದ್ರ ಕ್ರೀಡಾ ಸಚಿವ ಜಿತೇಂದ್ರ್ ಸಿಂಗ್ ಹಾಗೂ ಕ್ರೀಡಾ ಇಲಾಖೆ ಕಾರ್ಯದರ್ಶಿಯವರು ಜನರ ಭಾವನೆಗಳಿಗೆ ಧಕ್ಕೆ ಉಂಟು ಮಾಡಿದ್ದಾರೆ ಎಂದು ಸ್ಥಳೀಯ ವಕೀಲ ಸುಧೀರ್ ಕುಮಾರ್ ಓಜಾ ದೂರಿದ್ದಾರೆ.

ಪ್ರಕರಣವನ್ನು ದಾಖಲಿಸಿಕೊಂಡಿರುವ ಮುಖ್ಯನಾಯ್ಯಾಧೀಶ ಎಸ್‌.ಪಿ.ಸಿಂಗ್‌, ಮುಂದಿನ ವಿಚಾರಣೆಯನ್ನು ಡಿಸೆಂಬರ್ 10ಕ್ಕೆ ನಿಗಧಿಗೊಳಿಸಿದ್ದಾರೆ.

ವೆಬ್ದುನಿಯಾವನ್ನು ಓದಿ