ಪ್ರವಾಸಿಗಳಿಗೆ 'ನರಕ' ಆಗುತ್ತಿದೆ ಗೋವಾ?

ಶನಿವಾರ, 15 ಮಾರ್ಚ್ 2008 (14:28 IST)
ಗೋವಾದ ಕಡಲ ಕಿನಾರೆಗಳಲ್ಲಿ ಸೂರ್ಯ ಸ್ನಾನ, ಕಡಲಲ್ಲಿ ಸರ್ಫಿಂಗ್ ಪ್ರವಾಸಿಗಳು ಪ್ರಮುಖ ಆಕರ್ಷಣೆ. ಆದರೆ ಇತ್ತೀಚಿನ ದಿನಗಳಲ್ಲಿ ಅಲ್ಲಿ ವಿದೇಶಿಯರ ಮೇಲೆ ನಡೆಯುತ್ತಿರುವ ಅನಾಚಾರಗಳು, ಪ್ರವಾಸಿಗಳ ಸ್ವರ್ಗವಾಗಿದ್ದ ಗೋವಾವನ್ನು ನರಕದಂತೆ ಭಾಸವಾಗಿಸುತ್ತದೆಯೆ?

ಬ್ರಿಟನ್ ಹುಡಿಗಿ ಸ್ಕಾರ್ಲೆಟ್ ಕೀಲಿಂಗ್ ಕೊಲೆ ಪ್ರಕರಣವು ಗೋವಾದ ಒಟ್ಟಾರೆ ಇಮೇಜಿಗೆ ಧಕ್ಕೆ ತಂದಿಟ್ಟಿದೆ. ಗೋವಾ ಪ್ರವಾಸದಲ್ಲಿರುವ ಪ್ರವಾಸಿಗಳ ಮಾತುಗಳನ್ನು ಕೇಳುವುದಾದರೆ, ಈ ಪ್ರಕರಣ ಅವರಲ್ಲಿ ಭೀತಿ ಮೂಡಿಸಿರುವುದು ಹೌದು. ಗೋವಾ ಭೇಟಿಯಲ್ಲಿರುವ ವಿದೇಶಿ ಪ್ರವಾಸಿಗರು ಈ ಕುರಿತಂತೆ ಮಿಶ್ರ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.

ಇಲ್ಲಿ ಎಲ್ಲವೂ ಚೆನ್ನಾಗಿದೆ. ಆದರೆ ಈ ದುರ್ಘಟನೆ ಅಭದ್ರತಾ ಭಾವ ಮೂಡಿಸಿದೆ ಎಂಬುದಾಗಿ ಬ್ರಿಟಿಷ್ ಪ್ರಜೆಯೊಬ್ಬರು ಅನ್ನುತ್ತಾರೆ.

ಇಲ್ಲಿ ಎಲ್ಲವೂ ಚೆನ್ನಾಗಿದೆ. ಇಲ್ಲಿನ ಜನತೆ ತುಂಬ ಒಳ್ಳೆಯವರು. ಇದೇ ಜಾಗ ಸುರಕ್ಷಿತವೆನಿಸುತ್ತದೆ ಎಂದು ಬ್ರಿಟನ್ನಿನ ಜೇಮ್ಸ್ ಹೇಳುತ್ತಾರೆ.

ಏನು ಸಂಭವಿಸಿದೆಯೋ ಅದು ದುರದೃಷ್ಟಕರ. ಇದು ಜಗತ್ತಿನ ಎಲ್ಲೇ ಆದರೂ ಸಂಭವಿಸಬಹದು. ಆದರೆ, ಇದು ಗೋವಾದ ಘನತೆಗೆ ಧಕ್ಕೆ ಒಡ್ಡಲಾರದು. ಯಾಕೆಂದರೆ ಗೋವಾ ಒಂದು ಸುಂದರ ತಾಣ. ಇದೊಂದು ಪ್ರತ್ಯೇಕ ಘಟನೆ ಎಂದು ಸ್ವೀಡಿಶ್ ಪ್ರವಾಸಿಗರೊಬ್ಬರು ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ