ಪ್ರಾಮಾಣಿಕ ಅಧಿಕಾರಿಗಳೇ ಜನಸೇವೆಗೆ ಬದ್ದರಾಗಿದ್ದೀರಾ ಹಾಗಿದ್ದರೆ ನನಗೆ ಎಸ್‌ಎಂಎಸ್, ಇ-ಮೇಲ್ ಮಾಡಿ: ಕೇಜ್ರಿವಾಲ್

ಗುರುವಾರ, 26 ಡಿಸೆಂಬರ್ 2013 (14:59 IST)
PTI
ಭ್ರಷ್ಟಾಚಾರದ ವಿರುದ್ಧ ಹೋರಾಟ ಆರಂಭವಾಗಿದೆ. ಪ್ರಾಮಾಣಿಕ ಅಧಿಕಾರಿಗಳೇ ಜನಸೇವೆಗೆ ಬದ್ದರಾಗಿದ್ದೀರಾ ಹಾಗಿದ್ದರೆ ನನಗೆ ಎಸ್‌ಎಂಎಸ್, ಇ-ಮೇಲ್ ಮಾಡಿ ಸಂಪರ್ಕಿಸಿ ಎಂದು ಶನಿವಾರದಂದು ದೆಹಲಿಯ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಲಿರುವ ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಕರೆ ನೀಡಿದ್ದಾರೆ.

ಪ್ರಾಮಾಣಿಕ ಅಧಿಕಾರಿಗಳಿಗೆ ನಮ್ಮ ಸರಕಾರ ಹೆಚ್ಚಿನ ಪ್ರೋತ್ಸಾಹ ನೀಡಲಿದೆ. ಜನಪರ ಯೋಜನೆಗಳಿಗಾಗಿ ಅವರ ಸೇವೆಯನ್ನು ಬಳಸಿಕೊಳ್ಳಲು ಉತ್ಸಕವಾಗಿದೆ ಎಂದು ಜನತಾ ದರ್ಬಾರ್‌ನಲ್ಲಿ ಕೇಜ್ರಿವಾಲ್ ತಿಳಿಸಿದ್ದಾರೆ.

ಒಂದು ವೇಳೆ ಪ್ರಾಮಾಣಿಕ ಅಧಿಕಾರಿಗಳು ಅಮಾನತ್ತುಗೊಂಡಿದ್ದಲ್ಲಿ, ಪಂಚಣಿ ಅಥವಾ ವೈದ್ಯಕೀಯ ಮತ್ತು ಇತರ ಭತ್ಯೆಗಳು ಸರಕಾರದಲ್ಲಿ ಬಾಕಿಯಿದ್ದಲ್ಲಿ ಕೂಡಲೇ ತಮ್ಮನ್ನು ಸಂಪರ್ಕಿಸುವಂತೆ ತಿಳಿಸಿದ್ದಾರೆ.

ಕೇಜ್ರಿವಾಲ್ ಕರೆಯಿಂದಾಗಿ ರಾಷ್ಟ್ರದಾದ್ಯಂತ ವಿವಾದಕ್ಕೆ ಗುರಿಯಾಗಿದ್ದ ಉತ್ತರಪ್ರದೇಶದ ಐಎಎಸ್ ಅಧಿಕಾರಿ ದುರ್ಗಾಶಕ್ತಿ ನಾಗ್ಪಾಲ್ ಮತ್ತು ಹರಿಯಾಣಾದಲ್ಲಿರುವ ಐಎಎಸ್ ಅಧಿಕಾರಿ ಅಶೋಕ್ ಖೇಮ್ಕಾ ಮತ್ತು ಮಾಜಿ ಕಲ್ಲಿದ್ದಲು ಇಲಾಖೆ ಕಾರ್ಯದರ್ಶಿ ಪಿ.ಸಿ.ಪ್ರಕಾಶ್‌ರಂತಹ ಪ್ರಾಮಾಣಿಕ ಅಮಾನತ್ತುಗೊಂಡ ಅಧಿಕಾರಿಗಳ ಕುರಿತಂತೆ ಹೇಳಿಕೆ ನೀಡಿರಬಹುದು ಎಂದು ರಾಜಕೀಯ ವಲಯದಲ್ಲಿ ಉಹಾಪೋಹಗಳು ಹರಡಿವೆ.

ವೆಬ್ದುನಿಯಾವನ್ನು ಓದಿ