ಫೇಸ್‌ಬುಕ್ ಮತ್ತು ಟ್ವಿಟರ್‌ ಮೇ 16ರವರೆಗೆ ಬ್ಯಾನ್ ಆಗಲಿದೆಯೇ?

ಮಂಗಳವಾರ, 1 ಏಪ್ರಿಲ್ 2014 (14:09 IST)
PR
PR
ನವದೆಹಲಿ: ಫೇಸ್‌ಬುಕ್ ಮತ್ತು ಟ್ವೀಟ್ ಪ್ರಿಯರೇ, ನಿಮಗೊಂದು ಆಘಾತಕಾರಿ ಸುದ್ದಿ ಕಾದುಕೊಂಡಿದೆ. ಮುಂಬರುವ ಲೋಕಸಭಾ ಚುನಾವಣೆ ದೃಷ್ಟಿಯಿಂದ ಪ್ರಜಾಪ್ರಭುತ್ವಕ್ಕೆ ಬೆದರಿಕೆಯಾದ ನಿಮ್ಮ ನೆಚ್ಚಿನ ಸಾಮಾಜಿಕ ಜಾಲತಾಣಗಳಿಗೆ ನಿಷೇಧ ವಿಧಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆಯೆಂಬ ಸುದ್ದಿ ಹರಿದಾಡುತ್ತಿದೆ. ಚುನಾವಣೆ ಆಯೋಗವು ಸುಪ್ರೀಂಕೋರ್ಟ್‌ನಲ್ಲಿ ಪಿಐಎಲ್ ಸಲ್ಲಿಸಿ ಮೇ 16ರವರೆಗೆ ಸಾಮಾಜಿಕ ಜಾಲತಾಣಗಳನ್ನು ನಿಷೇಧಿಸಬೇಕೆಂದು ಮನವಿ ಸಲ್ಲಿಸಿದೆಂಬ ಸುದ್ದಿ ಕೇಳಿಬರುತ್ತಿದೆ. ಈ ಹಿನ್ನಲೆಯಲ್ಲಿ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವಾಲಯ ಇವುಗಳ ನಿಷೇಧಕ್ಕೆ ನಿರ್ಧರಿಸಿದೆಯೆಂಬ ಊಹಾಪೋಹ ಹರಿದಾಡುತ್ತಿದೆ.

ಮೇ 16 ಚುನಾವಣೆ ಫಲಿತಾಂಶದ ದಿನವಾಗಿದೆ.ಈ ಜಾಲತಾಣಗಳು ಪ್ರಜಾಪ್ರಭುತ್ವಕ್ಕೆ ದೊಡ್ಡ ಬೆದರಿಕೆಯನ್ನು ಒಡ್ಡಿವೆ. ಫೇಸ್‌ಬುಕ್ ಫೇಕ್‌ಬುಕ್ ಆಗಿದ್ದರೆ, ಟ್ವಿಟರ್ ಅನೇಕ ಮಾರ್ಗಗಳಲ್ಲಿ ಜನರನ್ನು ದಾರಿತಪ್ಪಿಸಿದೆ. ಈ ಪ್ರಚಾರವನ್ನು ತಕ್ಷಣಕ್ಕೆ ಜಾರಿಗೆ ಬರುವಂತೆ ನಿಷೇಧಿಸಬೇಕು ಎಂದು ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆಯೆಂದು ವರದಿಯಾಗಿದೆ. ಚುನಾವಣೆ ಮತದಾನಕ್ಕೆ ಮುಂಚೆ ವಿವಿಧ ಪಕ್ಷಗಳು ನಕಲಿ ಪ್ರಚಾರವನ್ನು ಕೈಗೊಂಡಿದ್ದನ್ನು ಚುನಾವಣೆ ಆಯೋಗ ಗಮನಿಸಿದೆ.

PR
PR
ನಾವು ಜಾಲತಾಣಗಳ ಬಗ್ಗೆ ಗಮನವಹಿಸಿ ಅಂತಿಮವಾಗಿ ಅರ್ಜಿ ಸಲ್ಲಿಸಿದ್ದು, ನಾವು ಸುಪ್ರೀಂಕೋರ್ಟ್ ನಿರ್ದಾರವನ್ನು ಸ್ವಾಗತಿಸುತ್ತೇವೆ ಎಂದು ಚುನಾವಣೆ ಆಯೋಗದ ಅಧಿಕಾರಿ ತಿಳಿಸಿದ್ದಾರೆ. ಗೃಹಸಚಿವಾಲಯವು ಈ ಕ್ರಮವನ್ನು ಸಮರ್ಥಿಸಿಕೊಂಡಿದ್ದು, ಉನ್ನತ ನ್ಯಾಯಾಲಯದ ನೀಡಿದ ಐತಿಹಾಸಿಕ ತೀರ್ಪು. ಈ ಸೈಟ್‌ಗಳು ರಾಷ್ಟ್ರೀಯ ಭದ್ರತೆಗೆ ಬೆದರಿಕೆ ಹಾಕಿವೆ ಎಂದು ಹೇಳಿದೆ.

ಈ ತೀರ್ಪು ನಿಜವಾಗಿದ್ದರೆ ಫೇಸ್‌ಬುಕ್ ಹೇಳಿಕೆಯಲ್ಲಿ ತೀವ್ರವಾಗಿ ಖಂಡಿಸುತ್ತದೆ, ಇದೊಂದು ದುರದೃಷ್ಟಕರ ಘಟನೆ ಎಂದು ಹೇಳಿದೆ. ಭಾರತ ಮುಕ್ತ ಸ್ಥಳವಾಗಿದ್ದು, ಪ್ರಜಾಪ್ರಭುತ್ವ ಆದರ್ಶಗಳು ಸಮಾಜದಲ್ಲಿ ದೃಢವಾಗಿ ಬೇರುಬಿಟ್ಟಿದೆ ಎಂದು ನಂಬಿದ್ದೆವು. ಅದನ್ನು ನಾವು ಪುನಃ ಯೋಚಿಸಬೇಕಿದೆ ಎಂದು ಹೇಳಿದೆ.
ಮುಂದಿನ ಪುಟದಲ್ಲಿ ಅಚ್ಚರಿ ಕಾದಿದೆ ನೋಡಿ

ಕ್ಷಮಿಸಿ , ಏಪ್ರಿಲ್ ಮೂರ್ಖರ ದಿನ ಇಂದು
PR
PR

ವೆಬ್ದುನಿಯಾವನ್ನು ಓದಿ