ಫ್ಯಾಶನ್ ಡಿಜೈನರ್ ವಿದ್ಯಾರ್ಥಿನಿ ರೇಪ್: ಆರೋಪಿ ಇಂಜಿನಿಯರ್ ಬಂಧನ

ಸೋಮವಾರ, 31 ಮಾರ್ಚ್ 2014 (16:38 IST)
22 ವರ್ಷ ವಯಸ್ಸಿನ ಫ್ಯಾಶನ್ ಡಿಜೈನರ್ ವಿದ್ಯಾರ್ಥಿನಿಯ ಮೇಲೆ ಎರಡು ದಿನಗಳ ಹಿಂದೆ ಅತ್ಯಾಚಾರವೆಸಗಿದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಆರೋಪಿ 27 ವರ್ಷ ವಯಸ್ಸಿನ ವೈಭವ್ ಜೈನ್‌ ಎಂಬಾತನನ್ನು ನವದೆಹಲಿಯ ಕರೋಲ್‌ಬಾಗ್‌ನಲ್ಲಿರುವ ನಿವಾಸದಲ್ಲಿ ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಆರೋಪಿ ಜೈನ್‌ನೊಂದಿಗೆ ನೆಹರು ಪ್ಲೇಸ್‌ಗೆ ತೆರಳಿದ್ದಾಗ ತಂಪು ಪಾನೀಯದಲ್ಲಿ ಮಾದಕ ದೃವ್ಯ ಬೆರಸಿದ್ದಾನೆ.ನಾನು ಎಚ್ಚರತಪ್ಪಿದ್ದಾಗಿ ಹೇಳಿದ್ದಾಳೆ

ದಕ್ಷಿಣ ದೆಹಲಿಯಲ್ಲಿರುವ ಹೋಟೆಲ್‌ಗೆ ಯುವತಿಯನ್ನು ಕರೆದುಕೊಂಡು ಹೋಗಿ ಆರೋಪಿ ಜೈನ್ ಅತ್ಯಾಚಾರವೆಸಗಿದ್ದಾನೆ ಎಂದು ತನಿಖೆ ನಡೆಸಿದ ಪೊಲೀಸರು ಮಾಹಿತಿ ನೀಡಿದ್ದಾರೆ.

ಅತ್ಯಾಚಾರಕ್ಕೊಳಗಾದ ಯುವತಿಯನ್ನು ಆಸ್ಪತ್ರೆಗೆ ವೈದ್ಯಕೀಯ ಪರೀಕ್ಷೆಗಾಗಿ ಕಳುಹಿಸಲಾಗಿದ್ದು, ರೇಪ್‌ಗೊಳಗಾಗಿರುವ ಖಚಿತವಾಗಿದೆ. ತದ ನಂತರವೇ ಆರೋಪಿಯನ್ನು ಬಂಧಿಸಲಾಗಿದೆ.

ಅತ್ಯಾಚಾರವೆಸಗಿದ ಜೈನ್ ದೆಹಲಿಯ ಖಾಸಗಿ ಕಂಪೆನಿಯಲ್ಲಿ ಇಂಜಿನಿಯರ್‌ ಆಗಿ ಸೇವೆ ಸಲ್ಲಿಸುತ್ತಿದ್ದಾನೆ.ಆರೋಪಿಯ ವಿರುದ್ಧ ಅತ್ಯಾಚಾರ , ಅಪಹರಣ ಸೇರಿದಂತೆ ಇತರ ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ವೆಬ್ದುನಿಯಾವನ್ನು ಓದಿ