ಬಾತರೂಮ್ ಪ್ರವೇಶಿಸಿ ವಿವಾಹಿತೆಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಕಾಮುಕ

ಸೋಮವಾರ, 31 ಮಾರ್ಚ್ 2014 (18:53 IST)
ಆಘಾತಕಾರಿ ಘಟನೆಯೊಂದರಲ್ಲಿ ಮನೆಯ ಬಾತರೂಮ್‌ನಲ್ಲಿ ಸ್ಥಾನ ಮಾಡುತ್ತಿದ್ದ ಮಹಿಳೆಯ ಮೇಲೆ ಅತ್ಯಾಚಾರವೆಸಗಲು ಪ್ರಯತ್ನಿಸಿದ ಯುವಕನನ್ನು ಪೊಲೀಸರು ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ.

ಮಹಿಳೆಯ ಪತಿ ಪ್ರಕಾರ, ಆರೋಪಿ ಸೋನು ಮನೆಯ ಕಂಪೌಂಡಿನ ಗೋಡೆಯನ್ನು ಹಾರಿ ರಹಸ್ಯವಾಗಿ ಪತ್ನಿ ಸ್ಥಾನ ಮಾಡುತ್ತಿದ್ದ ಬಾತ್‌ರೂಮ್ ಪ್ರವೇಶಿಸಿ ಅತ್ಯಾಚಾರವೆಸಗಲು ಪ್ರಯತ್ನಿಸಿದ್ದಾನೆ. ಆದರೆ, ನನ್ನ ಪತ್ನಿ ಜೋರಾಗಿ ಕೂಗಿ ಕೊಂಡಿದ್ದರಿಂದ ಬಚಾವ್ ಆಗಿದ್ದಾಳೆ ಎಂದು ತಿಳಿಸಿದ್ದಾನೆ.

ಅದೃಷ್ಠವಶಾತ್ ಅಂದು ರಜೆಯಿದ್ದುದರಿಂದ ನಾನು ಮನೆಯಲ್ಲಿದ್ದೆ. ಒಂದು ವೇಳೆ ನಾನು ಮನೆಯಲ್ಲಿರದಿದ್ರೆ ಪತ್ನಿಯನ್ನು ರಕ್ಷಿಸಲು ಯಾರು ಬರುತ್ತಿರಲಿಲ್ಲ ಎಂದು ನೊಂದ ಮಹಿಳೆಯ ಪತಿ ತಿಳಿಸಿದ್ದಾರೆ.

ಸ್ಥಳೀಯರು ಬಲವಾಗಿ ಥಳಿಸಿ ಆರೋಪಿ ಸೋನುನನ್ನು ಪೊಲೀಸ್ ವಶಕ್ಕೆ ನೀಡಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ವೆಬ್ದುನಿಯಾವನ್ನು ಓದಿ