ಬಾಬಾ ರಾಮದೇವ್ ಯೋಗಾ ಮಾಡ್ಲಿ ರಾಜಕೀಯ ಬೇಡ: ಚುನಾವಣೆ ಆಯೋಗ

ಗುರುವಾರ, 10 ಅಕ್ಟೋಬರ್ 2013 (16:43 IST)
PR
ಚುನಾವಣೆ ಆಯೋಗದ ಆದೇಶದಿಂದ ಯೋಗ ಗುರು ಬಾಬಾ ರಾಮದೇವ್ ಅವರಿಗೆ ನಿರಾಳತೆ ದೊರೆತಿದೆ. ರಾಜಧಾನಿ ನವದೆಹಲಿಯಲ್ಲಿ ಯೋಗ ಕ್ಯಾಂಪ್ ನಡೆಸಬಹುದು. ಆದರೆ, ರಾಜಕೀಯಕ್ಕಾಗಿ ಬಳಸುವಂತಿಲ್ಲ ಎಂದು ಆಯೋಗ ಆದೇಶ ನೀಡಿದೆ.

ನವದೆಹಲಿಯ ದ್ವಾರಕಾದಲ್ಲಿ ಯೋಗ ಗುರು ಬಾಬಾ ರಾಮದೇವ್ ಯೋಗ ಶಿಬಿರ ನಡೆಸಲು ಅನುಮತಿ ನೀಡಬಾರದು ಎನ್ನುವ ದೂರನ್ನು ತಿರಸ್ಕರಿಸಿದ ಆಯೋಗ, ಯೋಗ ನಡೆಸಲಿ ರಾಜಕೀಯ ಬೇಡ ಎಂದು ತೀರ್ಪು ನೀಡಿದೆ.

ಯೋಗ ಶಿಬಿರದಲ್ಲಿ ಮುಖ್ಯ ಅತಿಥಿಗಳಾಗಿ ಅಥವಾ ಸ್ಪೇಶಲ್ ಅತಿಥಿಗಳನ್ನಾಗಿಸಿದ ವ್ಯಕ್ತಿಗಳು ರಾಜಕಾರಣಿಗಳಿರಬಾರದು. ಯೋಗ ಶಿಬಿರದಲ್ಲಿ ಯಾವುದೇ ರಾಜಕೀಯ ಪಕ್ಷದ ಮಾಧ್ಯಮಗಳಿಗೆ ಅನುಮತಿ ನೀಡಲು ಸಾಧ್ಯವಿಲ್ಲ ಎಂದು ಹೇಳಿಕೆ ನೀಡಿದೆ.

ಒಂದು ವೇಳೆ ಚುನಾವಣೆ ಆಯೋಗದ ನಿಯಮಗಳನ್ನು ಉಲ್ಲಂಘಿಸಿದಲ್ಲಿ ಆಯೋಜಕರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು. ಯೋಗ ಶಿಬಿರವನ್ನು ರದ್ದುಗೊಳಿಸಲಾಗುವುದು ಎಂದು ಚುನಾವಣೆ ಆಯೋಗ ಎಚ್ಚರಿಕೆ ನೀಡಿದೆ.

ವೆಬ್ದುನಿಯಾವನ್ನು ಓದಿ