ಬಾರ್‌ ಗರ್ಲ್ಸ್ ಜೊತೆ ಸಿಕ್ಕಿಬಿದ್ದ ಶಾಸಕನ ಅಮನತ್ತು.!

ಗುರುವಾರ, 29 ಆಗಸ್ಟ್ 2013 (11:33 IST)
PTI
PTI
ಬಾರ್‌ ಗರ್ಲ್ಸ್ ಜೊತೆ ಚಕ್ಕಂದವಾಡಲು ಹೋಗಿ ರೆಡ್‌ ಹ್ಯಾಂಡಾಗಿ ಸಿಕ್ಕಿಬಿದ್ದ ಶಾಸಕನನ್ನು ಇಂದು ಪಕ್ಷದಿಂದ ಅಮಾನತ್ತು ಮಾಡಲಾಗಿದೆ. ಅವನ ಜೊತೆಗೆ ಇತರೇ ಮೂವರು ಶಾಸಕರನ್ನು "ಪಕ್ಷ ವಿರೋಧಿ ಚಟುವಟಿಕೆ"ಯಲ್ಲಿ ತೊಡಗಿದ್ದಾರೆ ಎಂಬ ಆರೋಪದ ಮೇರೆಗೆ ಅಮಾನತ್ತು ಆದೇಶ ಹೊರಡಿಸಲಾಗಿದೆ.

ಗೋವಾ ಬಾರ್‌ ಗರ್ಲ್ಸ್ ಜೊತೆಯಲ್ಲಿ ಸಿಕ್ಕಿಬಿದ್ದ ಸಿತಪುರ ಕ್ಷೇತ್ರದ ಶಾಸಕ ಮಹೇಂದ್ರ ಸಿಂಗ್‌ ಸೇರಿದಂತೆ ಉತ್ತರ ಪ್ರದೇಶದ ಮೂವರು ಶಾಸಕರನ್ನು ಸಮಾಜವಾದಿ ಪಕ್ಷ ಅಮಾನತ್ತು ಮಾಡಿದೆ. ಪಕ್ಷ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿದ್ದರಿಂದ ಇತರೆ ಶಾಸಕರನ್ನು ಅಮಾನತ್ತು ಮಾಡಲಾಗಿದೆ ಎಂದು ಸಮಾಜವಾದಿ ಪಕ್ಷ ಮೂಲಗಳಿಂದ ತಿಳಿದುಬಂದಿವೆ.

ಮಹೇಂದ್ರ ಸಿಂಗ್‌ ವೇಶ್ಯಾವಾಟಿಕೆ ಅಡ್ಡದಲ್ಲಿ ಸಿಕ್ಕಿಬಿದ್ದಿದ್ದರಿಂದ ಎಸ್‌ಪಿ ಪಕ್ಷಕ್ಕೆ ಇದರಿಂದ ಇರುಸು ಮುರಿಸು ಉಂಟಾಗಿತ್ತು. ಹೀಗಾಗಿ ಪಕ್ಷದ ಶಿಸ್ತು ಕಾಯ್ದುಕೊಳ್ಳುವ ಉದ್ದೇಶದಿಂದ ಪಕ್ಷ ಈ ಕ್ರಮವನ್ನು ಕೈಗೊಂಡಿದೆ.

ವೆಬ್ದುನಿಯಾವನ್ನು ಓದಿ