ಬಾಲಕಿಯರನ್ನು ಓರಲ್ ಸೆಕ್ಸ್‌ಗಾಗಿ ಬಳಸುತ್ತಿದ್ದ ಶಾಲಾ ನಿರ್ದೇಶಕನ ಬಂಧನ

ಮಂಗಳವಾರ, 1 ಏಪ್ರಿಲ್ 2014 (13:47 IST)
ಅಪ್ರಾಪ್ತ ಬಾಲಕಿಯರಿಗೆ ಮುಖಮೈಥುನ ಸೇರಿದಂತೆ ಲೈಂಗಿಕವಾಗಿ ಶೋಷಣೆ ಮಾಡಿದ ಆರೋಪದ ಮೇಲೆ ಹಿಮಾಲಯ ಪಬ್ಲಿಕ್ ಸ್ಕೂಲ್ ನಿರ್ದೇಶಕ ಚಂದ್ರ ಸಿಂಗ್ ಕಾರ್ಕಿಯವರನ್ನು ಪೊಲೀಸರು ಬಂಧಿಸಿದ್ದಾರೆ.

ಆರೋಪಿ ಕಾರ್ಕಿ, ವಸತಿ ನಿಲಯದಲ್ಲಿ ಪ್ರತಿನಿತ್ಯ ಅಪ್ರಾಪ್ತ ಬಾಲಕಿಯರ ಚಲನವಲನ ಗಮನಿಸಲು ಎಲ್ಲಾ ಕೋಣೆಗಳಲ್ಲಿ ಸಿಸಿಟಿವಿಗಳನ್ನು ಅಳವಡಿಸಿದ್ದ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನೈನಿತಾಲ್ ಬಿಮ್ಮಿ ಸಚದೇವ್ ತಿಳಿಸಿದ್ದಾರೆ.

ಮೂಲಗಳ ಪ್ರಕಾರ, ಆರೋಪಿ ಕಾರ್ಕಿ ಪ್ರತಿನಿತ್ಯ ಬಾಲಕಿಯರಿಂದ ದೇಹದ ಖಾಸಗಿ ಭಾಗಗಳನ್ನು ಉದ್ರೇಕಿಸುವುದು ಸೇರಿದಂತೆ ಇತಕ ಭಾಗಗಳಲ್ಲಿ ಮಸಾಜ್ ಮಾಡಿಕೊಳ್ಳುವುದಲ್ಲದೇ ಮುಖಮೈಥುನ ನಡೆಸುವಂತೆ ಬಾಲಕಿಯರಿಗೆ ಒತ್ತಾಯಿಸುತ್ತಿದ್ದ ಎನ್ನಲಾಗಿದೆ.

ವಸತಿ ನಿಲಯದಲ್ಲಿ ವಾಸವಾಗಿದ್ದ ಬಾಲಕಿಯರನ್ನು ತನ್ನ ಕಚೇರಿಗೆ ಕರೆದುಕೊಂಡು ಹೋಗಿ ಬಟ್ಟೆ ಕಳಚುವಂತೆ ಒತ್ತಾಯಿಸಿ ಅವರೊಂದಿಗೆ ಕಚೇರಿಯಲ್ಲಿಯೇ ಸೆಕ್ಸ್ ಸುಖ ಅನುಭವಿಸುತ್ತಿದ್ದನು ಎಂದು ಪೊಲೀಸರು ತಿಳಿಸಿದ್ದಾರೆ.

ಆದರೆ ಬಾಲಕಿಯರ ಆರೋಪಗಳನ್ನು ತಳ್ಳಿಹಾಕದ ಆರೋಪಿ ಕಾರ್ಕಿ, ವಸತಿ ನಿಲಯದಲ್ಲಿ ಬಾಲಕಿಯರ ರಕ್ಷಣೆಗಾಗಿ ಸಿಸಿಟಿವಿಗಳನ್ನು ಅಳವಡಿಸಲಾಗಿದೆಯೇ ಹೊರತು ಅವರ ಚಲನವಲನ ಗಮನಿಸಲು ಅಲ್ಲ ಎಂದು ಆರೋಪವನ್ನು ತಳ್ಳಿಹಾಕಿದ್ದಾನೆ.

ಅಪ್ರಾಪ್ತ ಬಾಲಕಿಯರ ಹೇಳಿಕೆಗಳನ್ನು ವಿಡಿಯೋ ಮಾಡಲಾಗಿದ್ದು, ನ್ಯಾಯಾಲಯಕ್ಕೆ ಸಲ್ಲಿಸಲು ಉತ್ತಮ ಸಾಕ್ಷಿಯಾಗಲಿದೆ ಎಂದು ಪೊಲೀಸ್ ಅಧಿಕಾರಿ ಬಿ.ಎಸ್.ಸಿದ್ದು ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ