ಬಾಲಕಿಯ ಕುತ್ತಿಗೆ ಹಿಸುಕಿ ಕೊಂದು ಆತ್ಮಹತ್ಯೆ ಮಾಡಿಕೊಂಡ ಪ್ರೇಮಿ

ಸೋಮವಾರ, 31 ಮಾರ್ಚ್ 2014 (16:43 IST)
ಮುಂಬೈ/ನಾಗ್ಪುರ: ಬಡೆಗಾಂವ್ ಗ್ರಾಮದಲ್ಲಿ ಕೇವಲ 14 ವರ್ಷ ವಯಸ್ಸಿನ ಶಾಲಾ ವಿದ್ಯಾರ್ಥಿನಿಯ ಜತೆ ಪ್ರೇಮ ವ್ಯವಹಾರ ಇಟ್ಟುಕೊಂಡಿದ್ದ ವ್ಯಕ್ತಿಯೊಬ್ಬ ಅವಳನ್ನು ಉಸಿರುಗಟ್ಟಿಸಿ ಕೊಂದ ನಂತರ ತಾನೂ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ನೀಲೇಶ್ ಎಂಬ ಯುವಕನ ಸೊಸೆಯಾಗಿದ್ದ ಈ ಬಾಲಕಿಯನ್ನು ಬಡೇಗಾಂವ್ ಗ್ರಾಮದಲ್ಲಿ ಉಸಿರುಗಟ್ಟಿಸಿ ಕೊಂದು ತಾನೂ ಅದೇ ಹಗ್ಗದಿಂದ ನೇಣುಹಾಕಿಕೊಂಡು ಆತ್ಮಹತ್ಯೆಗೆ ಶರಣಾದ.ಮೈನಿಂಗ್ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದ ನೀಲೇಶ್ ತನ್ನ ಸೋದರಸಂಬಂಧಿ ಪುತ್ರಿಯ ಜತೆ ಕೆಲವು ವರ್ಷಗಳಿಂದ ಲೈವ್ ಇನ್ ಸಂಬಂಧ ಹೊಂದಿದ್ದ.

ತನ್ನ ಕಸಿನ್ ಪುತ್ರಿ , 9ನೇ ತರಗತಿಯಲ್ಲಿ ಓದುತ್ತಿದ್ದ ತನುಶ್ರೀ ಮಸರಂ ಜತೆ ಲೈಂಗಿಕ ಸಂಬಂಧಕ್ಕೆ ತನುಶ್ರೀ ತಂದೆ, ತಾಯಿಗಳು ತೀವ್ರವಾಗಿ ವಿರೋಧಿಸಿದ್ದರು. ಇದರಿಂದ ನೊಂದಿದ್ದ ನೀಲೇಶ್ ತನುಶ್ರೀಯನ್ನು ಅವಳ ಶಾಲೆಯ ಬಳಿ ಭೇಟಿ ಮಾಡಿ, ತನುಶ್ರೀ ಅಜ್ಜಿ ನೆಲೆಸಿರುವ ಬಡೇಗಾಂವ್‌ಗೆ ಕರೆದೊಯ್ದ. ಬಡೇಗಾಂವ್‌ಗೆ ತೆರಳಿದ ಬಳಿಕ ಅಂಗಡಿಯಿಂದ ನೈಲಾನ್‌ ಹಗ್ಗವೊಂದನ್ನು ಖರೀದಿಸಿದ. ನಂತರ ತನುಶ್ರೀಯನ್ನು ಸಮೀಪದ ಅರಣ್ಯಕ್ಕೆ ಕರೆದುಕೊಂಡು ಹೋಗಿ ನೈಲಾನ್ ಹಗ್ಗದಿಂದ ಕುತ್ತಿಗೆಗೆ ಬಿಗಿದು ಸಾಯಿಸಿದ. ನಂತರ ಸಮೀಪದ ಮರಕ್ಕೆ ಅದೇ ಹಗ್ಗದಿಂದ ನೇಣುಹಾಕಿಕೊಂಡು ಆತ್ಮಹತ್ಯೆಗೆ ಶರಣಾದ.

ವೆಬ್ದುನಿಯಾವನ್ನು ಓದಿ