ಬಿಜೆಪಿಯ ವಿರುದ್ಧ ಸೋನಿಯಾ ವಾಗ್ದಾಳಿ

ಶುಕ್ರವಾರ, 21 ಜೂನ್ 2013 (13:34 IST)
PR
PR
ಆಹಾರ ಸುರಕ್ಷಾ ಮಸೂದೆಯ ಅಂಗೀಕಾರಕ್ಕೆ ವಿರೋಧ ಪಕ್ಷಗಳು ಅಡಚಣೆಯನ್ನುಂಟು ಮಾಡುತ್ತಿದೆ ಎಂದು ಆರೋಪಿಸಿರುವ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, ಶತಾಯಗತಾಯ ಅಧಿಕಾರಕ್ಕೇರಬೇಕು ಎನ್ನುವ ಉದ್ದೇಶದಿಂದ ಅದು ದೇಶದಲ್ಲಿ ಅಸ್ಥಿರತೆ ಸೃಷ್ಟಿಸುತ್ತಿದೆ ಎಂದರು.

ಕೆಲವು ರಾಜಕೀಯ ಪಕ್ಷಗಳು ಅಸ್ಥಿರತೆಯನ್ನು ಸೃಷ್ಟಿಸುವ ಪಿತೂರಿಯಲ್ಲಿ ತೊಡಗಿದೆ ಎಂದು ಹೇಳಲು ನಾನು ಇಷ್ಟಪಡುತ್ತಿದ್ದೇನೆ. ಇಂತಹ ರಾಜಕೀಯ ಪಕ್ಷಗಳಿಂದ ಅಭಿವೃದ್ಧಿ ಯೋಜನೆ ಗಳನ್ನು ನಿರೀಕ್ಷಿಸುವುದು ಅರ್ಥಹೀನ. ಅವರು ಕುರ್ಚಿಯ ಮೇಲೆ ಕಣ್ಣಿಟ್ಟಿದ್ದು, ಅದನ್ನು ಹೇಗಾದರೂ ಮಾಡಿ ಪಡೆಯುವ ಯತ್ನದಲ್ಲಿ ದ್ದಾರೆ.
ಇಂತಹ ಶಕ್ತಿಗಳ ವಿರುದ್ಧ ಎಚ್ಚರಿಕೆಯಿಂದಿರ ಬೇಕಾದದ್ದು ಅನಿವಾರ್ಯ’’ ಎಂದು ಅವರು ಹೇಳಿದರು.

ಬಿಜೆಪಿಯ ವಿರುದ್ಧ ಟೀಕೆಯ ಸುರಿಮಳೆಗೈದ ಸೋನಿಯಾ, ಆಹಾರ ಸುರಕ್ಷಾ ಮಸೂದೆ ಅಂಗೀಕಾರಕ್ಕೆ ಆ ಪಕ್ಷ ಅಡಚಣೆಯುಂಟು ಮಾಡುತ್ತಿದೆ ಎಂದರು. ‘‘ನಾವು, (ಯುಪಿಎ) ದೇಶದ ಯಾವುದೇ ಪ್ರಜೆಯೂ ಹಸಿವಿನಿಂದಿರಬಾರದು ಎಂಬುದನ್ನು ಬಯಸುತ್ತೇವೆ.

PR
PR
ಇದಕ್ಕಾಗಿ ಆಹಾರ ಸುರಕ್ಷಾ ಮಸೂದೆಯನ್ನು ಅಂಗೀಕರಿಸುವ ಸಿದ್ದತೆಯಲ್ಲಿ ನಾವಿದ್ದೇವೆ. ಆದರೆ ನಮ್ಮ ವಿರೋಧ ಪಕ್ಷವು ಇದಕ್ಕೆ ಅಡಚಣೆಯುಂಟುಮಾಡುತ್ತಿದೆ. ವಿರೋಧ ಪಕ್ಷ ಸಹಕರಿಸಿದಲ್ಲಿ ಬಹಳ ಹಿಂದೆಯೇ ನಾವು ಇದನ್ನು ಅಂಗೀಕರಿಸಿ ರುತ್ತಿದ್ದೆವು’’ ಎಂದು ಅವರು ಹೇಳಿದರು.

‘‘ನಮ್ಮ ವಿರೋಧಿಗಳು ನಾವು ರೂಪಿಸಿರುವ ಜನೋಪಯೋಗಿ ಯೋಜನೆಗಳನ್ನು ವಿರೋಧಿಸು ತ್ತಿದ್ದಾರೆ. ಇದು ನನಗೆ ಬೇಸರವನ್ನುಂಟುಮಾಡಿದೆ. ಕಾಂಗ್ರೆಸ್ ಪಕ್ಷವು ಆರಂಭಿಸುವ ಪ್ರತಿ ಯೋಜನೆಗಳನ್ನು ವಿರೋಧಿಸುವುದನ್ನು ಅವರು ಹವ್ಯಾಸವನ್ನಾಗಿಸಿಕೊಂಡಿದ್ದಾರೆ’’ ಎಂದು ಸೋನಿಯಾ ಹೇಳಿದರು.

ದೇಶದಲ್ಲಿ ಅಸ್ಥಿರತೆಯನ್ನು ಸ್ಥಾಪಿಸಲು ಯತ್ನಿಸು ತ್ತಿರುವ ಕೆಲವು ವಿರೋಧ ಪಕ್ಷಗಳ ಪಿತೂರಿಗಳ ಕುರಿತು ಮಾತನಾಡಿದ ಅವರು, ಇದು ಅಭಿವೃದ್ಧಿಯ ಮೇಲೆ ಪ್ರಭಾವ ಬೀರಿ ಪರೋಕ್ಷ ವಾಗಿ ಬಡತನದ ವೃದ್ಧಿಗೆ ಕಾರಣವಾಗಲಿದೆ ಎಂದರು. ‘‘ಅಭಿವೃದ್ಧಿ ಹಾದಿಯಲ್ಲಿ ಮುಂದುವರಿಯುವ ಲಕ್ಷವನ್ನು ನಾವು ಹೊಂದಿದ್ದು, ಭಾರೀ ಉತ್ಸಾಹ ಹಾಗೂ ಚುರುಕಿನಿಂದ ಈ ಮಾರ್ಗದಲ್ಲಿ ಸಾಗುತ್ತಿದ್ದೇವೆ.

ತನ್ಮೂಲಕ ಅಭಿವೃದ್ಧಿ ಯೋಜನೆಗೆ ಅಡ್ಡಿಪಡಿಸುವ ಎಲ್ಲಾ ಶಕ್ತಿಗಳಿಗೂ ಉತ್ತರ ನೀಡಲಿದ್ದೇವೆ.’’ ಎಂದರು. ಸೂರತ್‌ಗರ್ ವಿದ್ಯುತ್ ಸ್ಥಾವರದಲ್ಲಿ 660ಮೆ.ವ್ಯಾಟಿನ ಎರಡು ವಿಶೇಷ ವಿದ್ಯುತ್ ಘಟಕಗಳಿಗೆ ಅಡಿಗಲ್ಲು ಹಾಕಿದ ಬಳಿಕ ಅವರು ಸಭಿಕರನ್ನುದ್ದೇಶಿಸಿ ಮಾತನಾಡಿದರು.

ವೆಬ್ದುನಿಯಾವನ್ನು ಓದಿ