ಬಿಜೆಪಿ ಶಾಸಕನ ಸಂಭ್ರಮಾಚರಣೆಯಲ್ಲಿ ನಂಗಾನಾಚ್: ರಾಜಕೀಯ ವಲಯದಲ್ಲಿ ಕೋಲಾಹಲ

ಸೋಮವಾರ, 30 ಡಿಸೆಂಬರ್ 2013 (13:37 IST)
PR
ಮಧ್ಯಪ್ರದೇಶದಲ್ಲಿ ಇತ್ತಿಚೆಗೆ ನಡೆದ ವಿಧಾನಸಭೆ ಚುನಾವಣೆಯಲ್ಲಿ ಜಯಗಳಿಸಿದ ಬಿಜೆಪಿ ಅಭ್ಯರ್ಥಿಯನ್ನು ಸತ್ಕರಿಸಲು ಸಮಾರಂಭ ಆಯೋಜಿಸಲಾಗಿತ್ತು. ಸಮಾರಂಭದಲ್ಲಿ ಉತ್ತರಪ್ರದೇಶದ ಬಾರ್‌ಗರ್ಲ್‌ಗಳನ್ನು ಕರೆಸಿ ನಂಗಾನಾಚ್ ಮಾಡಿಸಿರುವುದು ವಿವಾದಕ್ಕೆ ಕಾರಣವಾಗಿದೆ.

ಬಿಜೆಪಿ ಶಾಸಕ ಕೆ.ಕೆ. ಶ್ರೀವಾಸ್ತವಾ ಅವರನ್ನು ಸತ್ಕರಿಸಲು ಸ್ಥಳೀಯ ಬಿಜೆಪಿ ಕಾರ್ಯಕರ್ತರು ಸಮಾರಂಭ ಆಯೋಜಿಸಿದ್ದರು.

ರಾಜ್ಯದಲ್ಲಿ ಮತ್ತೊಮ್ಮೆ ಅಧಿಕಾರದ ಚುಕ್ಕಾಣಿ ಹಿಡಿಯುವ ಮೂಲಕ ಬಿಜೆಪಿ ಭಾರಿ ಬದಲಾವಣೆ ತರಲಿದೆ ಎನ್ನುವ ಆಶಾಭಾವನೆಯಿಂದಾಗಿ ಸಮಾರಂಭದ ಆರಂಭದಲ್ಲಿ ಶಾಸಕ ಶ್ರೀವಾತ್ಸವ್ ಅವರನ್ನು ಸನ್ಮಾನಿಸಲಾಯಿತು. ನಂತರ ಬಾರ್‌ಗರ್ಲ್‌ಗಳು ಜಾನಪದ ಗೀತೆಗಳ ಮೂಲಕ ಕಾರ್ಯಕ್ರಮ ಆರಂಭಿಸಿದರು,

ಬಿಜೆಪಿ ಕಾರ್ಯಕರ್ತರು ಐಟಂ ಹಾಡುಗಳಿಗೆ ನೃತ್ಯ ಮಾಡುವಂತೆ ಬಾರ್‌ಗರ್ಲ್‌ಗಳಿಗೆ ಕೋರಿದಾಗ ವಾತಾವರಣವೇ ಬದಲಾಗಿ ಹೋಯಿತು. ಬಾರ್‌ಗರ್ಲ್‌ಗಳು ಅಸಹ್ಯ ನೃತ್ಯ ಮಾಡುವುದರ ಜೊತೆಗೆ ಬಟ್ಟೆಗಳನ್ನು ಕಳಚಿ ಅರೆನಗ್ನರಾಗಿ ನರ್ತಿಸಿದರು.

ಇದರಿಂದ ಆಕ್ರೋಶಗೊಂಡ ಸ್ಥಳೀಯರು ಸಮಾರಂಭದ ಆಯೋಜಕರ ವಿರುದ್ಧ ತರಾಟೆಗೆ ತೆಗೆದುಕೊಂಡರು.
ನನ್ನ ಕಿರಿಯ ಸಹೋದರನೊಂದಿಗೆ ಸಂಭ್ರಮಾಚರಣೆಯನ್ನು ವೀಕ್ಷಿಸಲು ತೆರಳಿದ್ದೆ. ಆದರೆ, ನಂಗಾನಾಚ್ ನೋಡಿ ನನಗೆ ಅಸಹ್ಯವಾಯಿತು ಎಂದು ಸ್ಥಳೀಯರು ದೂರಿದ್ದಾರೆ.

ಸುಮಾರು ಮೂರು ಗಂಟೆಗಳ ವರೆಗೆ ನಿರಂತರವಾಗಿ ನಡೆದ ನಂಗಾನಾಚ್, ಕೊನೆಗೆ ಗ್ರಾಮಸ್ಥರ ತೀವ್ರ ಪ್ರತಿಭಟನೆಯಿಂದ ರದ್ದುಗೊಂಡಿತು.

ಟಿಕಾಮ್‌ಗಢ್ ಬಿಜೆಪಿ ಶಾಸಕ ಶ್ರೀವಾಸ್ತಾ ಮಾತನಾಡಿ, ನಂಗಾನಾಚ್ ನಡೆದ ಬಗ್ಗೆ ನನಗೆ ಮಾಹಿತಿಯಿಲ್ಲ. ಆಯೋಜಿಸಿದವರನ್ನು ಕೇಳಿ ಎಂದು ಹಾರಿಕೆ ಉತ್ತರ ನೀಡಿ ಪರಾರಿಯಾದರು.

ವೆಬ್ದುನಿಯಾವನ್ನು ಓದಿ