ಬಿಸಿಯೂಟ ದುರಂತ: ಪ್ರಾಂಶುಪಾಲರ ಶರಣಾಗತಿ

ಬುಧವಾರ, 24 ಜುಲೈ 2013 (18:56 IST)
PTI
PTI
ಚಾಪ್ರಾ: ಕೀಟನಾಶಕದಿಂದ ವಿಷಯುಕ್ತವಾದ ಮಧ್ಯಾಹ್ನದ ಬಿಸಿಯೂಟ ಸೇವಿಸಿ ಬಿಹಾರ ಪ್ರಾಥಮಿಕ ಶಾಲೆಯಲ್ಲಿ 23 ಶಾಲಾಮಕ್ಕಳು ಕಳೆದ ವಾರ ಮೃತಪಟ್ಟ ಬಳಿಕ ತಲೆತಪ್ಪಿಸಿಕೊಂಡಿದ್ದ ಶಾಲೆಯ ಪ್ರಾಂಶುಪಾಲರು ಬುಧವಾರ ಶರಣಾಗತಿಯಾಗಿದ್ದು, ಪೊಲೀಸ್ ಕಸ್ಟಡಿಯಲ್ಲಿದ್ದಾರೆ.

ಛಾಪ್ರಾದಲ್ಲಿ ಕಳೆದ ಜುಲೈ 16ರಂದು ದುರಂತ ಸಂಭವಿಸಿದ ನಂತರ ಪ್ರಾಂಶುಪಾಲೆ ಮೀನಾಕುಮಾರಿ ನಾಪತ್ತೆಯಾಗಿದ್ದರು. ಪೊಲೀಸ್ ಎಫ್‌ಐಆರ್‌ನಲ್ಲಿ ಅವರ ವಿರುದ್ಧ ಹತ್ಯೆ ಮತ್ತು ಕ್ರಿಮಿನಲ್ ಒಳಸಂಚು ಆರೋಪಗಳನ್ನು ಹೊರಿಸಲಾಗಿತ್ತು. ಪ್ರಾಂಶುಪಾಲರ ತನಿಖೆಯಿಂದ ನಿರ್ಣಾಯಕ ಉತ್ತರಗಳನ್ನು ನಿರೀಕ್ಷಿಸಿರುವುದಾಗಿ ತನಿಖೆದಾರರು ಹೇಳಿದ್ದಾರೆ.

ಮಧ್ಯಾಹ್ನದ ಊಟಕ್ಕೆ ಮೀನಾಕುಮಾರಿ ಪತಿ ನಡೆಸುತ್ತಿದ್ದ ಅಂಗಡಿಯಿಂದ ಧವಸಧಾನ್ಯಗಳನ್ನು ಖರೀದಿಸಲಾಗಿತ್ತು ಎಂದು ರಾಜ್ಯದ ಶಿಕ್ಷಣ ಸಚಿವ ಪಿ.ಕೆ.ಶಾಹಿ ಕಳೆದ ವಾರ ಆರೋಪಿಸಿದ್ದರು. ಪತಿಯು ವಿರೋಧಪಕ್ಷಕ್ಕೆ ಸೇರಿದ್ದು, ಜೆಡಿಯು ಸರ್ಕಾರವನ್ನು ಅಸ್ಥಿರಗೊಳಿಸಲು ಉದ್ದೇಶಪೂರ್ವಕವಾಗಿ ಊಟಕ್ಕೆ ವಿಷ ಬೆರಸಲಾಗಿದೆ ಎಂದು ಆರೋಪಿಸಿದ್ದರು. ಪ್ರಾಂಶುಪಾಲದ ಪತಿ ಇನ್ನೂ ತಲೆತಪ್ಪಿಸಿಕೊಂಡಿದ್ದಾರೆ.

ವೆಬ್ದುನಿಯಾವನ್ನು ಓದಿ