ಬಿಹಾರದ ಬಿಸಿಯೂಟ ದುರಂತದಲ್ಲಿ ಪಿತೂರಿ: ನಿತೀಶ್ ಶಂಕೆ

ಮಂಗಳವಾರ, 23 ಜುಲೈ 2013 (12:43 IST)
PTI
PTI
ಪಾಟ್ನಾ: ಬಿಹಾರದ ಮಧ್ಯಾಹ್ನದ ಬಿಸಿಯೂಟದ ದುರಂತಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರಿಗೆ ಪಿತೂರಿ ನಡೆದಿರುವ ವಾಸನೆ ಬಡಿದಿದೆ. ಈ ಘಟನೆಯ ರಾಜಕೀಯ ಲಾಭ ಮಾಡಿಕೊಳ್ಳಲು ಬಿಜೆಪಿ ಮತ್ತು ಆರ್‌ಜೆಡಿ ಗೋಪ್ಯ ಒಪ್ಪಂದ ಮಾಡಿಕೊಂಡಿವೆ ಎಂದೂ ನಿತೀಶ್ ಕುಮಾರ್ ಆರೋಪಿಸಿದ್ದಾರೆ.

ಮಧ್ಯಾಹ್ನದ ಬಿಸಿಯೂಟದಲ್ಲಿ ಕೀಟನಾಶಕದ ಉಪಸ್ಥಿತಿಯ ಬಗ್ಗೆ ವಿಧಿ ವಿಜ್ಞಾನ ಪ್ರಯೋಗಾಲಯ ಗಮನಸೆಳೆದಿದೆ. ಇದರಿಂದ ಈ ದುರಂತದ ಹಿಂದೆ ಪಿತೂರಿ ನಡೆದಿರುವ ಶಂಕೆಯನ್ನು ದೃಢಪಡಿಸಿದೆ ಎಂದು ಮಿಷನ್ 2014 ಲೋಕಸಭೆ ಚುನಾವಣೆಯ ಭಾಗವಾಗಿ ಪಕ್ಷದ ಸಂಸದರು, ಶಾಸಕರು ಮತ್ತು ಪದಾಧಿಕಾರಿಗಳ ಸಭೆಯಲ್ಲಿ ನಿತೀಶ್ ತಿಳಿಸಿದ್ದಾರೆ.

ಬೋಧಗಯಾ ಸ್ಫೋಟಗಳು ಮತ್ತು ಚಾಪ್ರಾ ಬಿಸಿಯೂಟ ದುರಂತದ ನಂತರ ಬಿಜೆಪಿ ಮತ್ತು ಆರ್‌ಜೆಡಿ ನಡುವೆ ಒಳಒಪ್ಪಂದ ಸ್ಪಷ್ಟವಾಗಿ ಎದ್ದುಕಾಣುತ್ತಿದೆ ಎಂದು ನಿತೀಶ್ ಆರೋಪಿಸಿದರು. ಎರಡು ಘಟನೆಗಳು ಘಟಿಸಿದ ದಿನವೇ ಆರ್‌ಜೆಡಿ ಮತ್ತು ಬಿಜೆಪಿ ಬಂದ್‌ಗೆ ಕರೆನೀಡಿರುವುದು ಅವುಗಳ ನಡುವೆ ಗೌಪ್ಯ ಒಪ್ಪಂದ ನಡೆದಿರುವ ಶಂಕೆಯನ್ನು ದೃಢಪಡಿಸಿದೆ ಎಂದು ನಿತೀಶ್ ಕುಮಾರ್ ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ