ಬೇಲಿಯೇ ಎದ್ದು ಹೊಲ ಮೇಯ್ತು: ಬಾಲಕಿ ಮೇಲೆ ನಾಲ್ವರು ಪೊಲೀಸರ ಗ್ಯಾಂಗ್‌ರೇಪ್

ಶುಕ್ರವಾರ, 20 ಡಿಸೆಂಬರ್ 2013 (14:27 IST)
PR
PR
ಚಂಡೀಗಢ: ಚಂದೀಗಢದಲ್ಲಿ ಶಾಲಾ ವಿದ್ಯಾರ್ಥಿನಿಯೊಬ್ಬಳ ಮೇಲೆ ಅನೇಕ ವಾರಗಳ ಕಾಲ ಗ್ಯಾಂಗ್ ರೇಪ್ ಮಾಡಿದ ಐವರು ಪೊಲೀಸ್ ಪೇದೆಗಳನ್ನು ಪ್ರತಿಭಟನೆಕಾರರು ಹಿಗ್ಗಾಮುಗ್ಗಾ ಥಳಿಸಿದ ಘಟನೆ ನಡೆಸಿದೆ. ಪೊಲೀಸ್ ಪೇದೆಗಳನ್ನು ವೈದ್ಯಕೀಯ ಪರೀಕ್ಷೆಗೆ ಕರೆದುಕೊಂಡು ಹೋಗುವಾಗ ಆಸ್ಪತ್ರೆಯ ಹೊರಗೆ ಅಡ್ಡಗಟ್ಟಿದ ಪ್ರತಿಭಟನೆಕಾರರು ಪೇದೆಗಳಿಗೆ ಸಿಕ್ಕಾಪಟ್ಟೆ ಥಳಿಸಿದರು. ಇವರಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಕಾರ್ಯಕರ್ತರು ಸೇರಿದ್ದು, ಆರೋಪಿ ಪೊಲೀಸ್ ಪೇದೆಗಳ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿದರು. ಪೊಲೀಸ್ ನಿಯಂತ್ರಣ ಕೊಠಡಿ ವ್ಯಾನ್‌ನಲ್ಲಿ ಐವರು ಪೇದೆಗಳು ತನ್ನ ಮೇಲೆ ಮೇಲಿಂದ ಮೇಲೆ ಅತ್ಯಾಚಾರ ಮಾಡಿದರು ಎಂದು 17 ವರ್ಷ ವಯಸ್ಸಿನ ವಿದ್ಯಾರ್ಥಿನಿ ಆರೋಪಿಸಿದ್ದಾಳೆ.

ನಾಲ್ವರು ಪೊಲೀಸ್ ಪೇದೆಗಳು ಪೊಲೀಸ್ ಕಂಟ್ರೋಲ್ ರೂಂ ಕರ್ತವ್ಯದಲ್ಲಿದ್ದರು ಮತ್ತು ಐದನೆಯವರು ಕ್ರೈಂ ಬ್ರಾಂಚ್‌ಗೆ ಸೇರಿದ್ದರು.ಪೇದೆಗಳಲ್ಲಿ ಒಬ್ಬನು ಬಾಲಕಿಯ ದೂರವಾಣಿ ಸಂಖ್ಯೆಗೆ ಕರೆ ಮಾಡಿ ಕುಟುಂಬದ ವಿವಾದಕ್ಕೆ ಸಂಬಂಧಿಸಿದಂತೆ ಬರುವಂತೆ ಪದೇ ಪದೇ ಕರೆ ಮಾಡತೊಡಗಿದ.ನಂತರ ಶಾಲೆಗೆ ಹೋಗುತ್ತಿದ್ದ ಅವಳನ್ನು ಬಲವಂತವಾಗಿ ಎಳೆದುಕೊಂಡು ಬಂದು ಪಿಸಿಆರ್‌ ವ್ಯಾನ್‌ನಲ್ಲಿ ಕೂರಿಸಿಕೊಂಡರು.

ನಂತರ ಅವಳಿಗೆ ಬಂದೂಕಿನ ಮೊನೆ ತೋರಿಸಿ ಬೆದರಿಸಿ ಗಲಾಟೆ ಮಾಡಿದರೆ ಕೊಲ್ಲುವುದಾಗಿ ಎಚ್ಚರಿಸಿದರು ಮತ್ತು ವಾರಗಳ ಕಾಲ ತನ್ನ ಮೇಲೆ ನಾಲ್ವರು ಕಾಮುಕರು ಅತ್ಯಾಚಾರ ನಡೆಸಿದರು ಎಂದು ದೂರಿದ್ದಾಳೆ. ನಂತರ ಬಾಲಕಿಯನ್ನು ಹೊರಕ್ಕೆ ಬಿಟ್ಟ ಮೇಲೆ ತೀವ್ರ ನೊಂದಿದ್ದ ಬಾಲಕಿ ಆತ್ಮಹತ್ಯೆ ಯತ್ನಿಸಿದಳು. ಕುಟುಂಬದವರಿಗೆ ವಿಷಯ ತಿಳಿದು ಹಿರಿಯ ಪೊಲೀಸ್ ಅಧಿಕಾರಿಗಳಿಗೆ ದೂರು ನೀಡಿದ ಬಳಿಕ ಅವರು ಎಫ್‌ಐಆರ್ ದಾಖಲು ಮಾಡಿದ್ದಾರೆ.

ವೆಬ್ದುನಿಯಾವನ್ನು ಓದಿ