ಬೈಕ್ ರೇಸ್‌ ಅವಘಡ; ಅಜರುದ್ದೀನ್ ಪುತ್ರ ಗಂಭೀರ ಗಾಯಾಳು

ಭಾನುವಾರ, 11 ಸೆಪ್ಟಂಬರ್ 2011 (13:15 IST)
ಮಾಜಿ ಕ್ರಿಕೆಟಿಗ ಹಾಗೂ ಕಾಂಗ್ರೆಸ್ ಸಂಸದ ಮೊಹಮ್ಮದ್ ಅಜರುದ್ದೀನ್ ಅವರ ಪುತ್ರ ಬೈಕ್ ರೇಸ್ ಸಂದರ್ಭದಲ್ಲಿ ಅಪಘಾತಕ್ಕೀಡಾಗಿದ್ದು, ಗಂಭೀರ ಗಾಯಗಳೊಂದಿಗೆ ಆಸ್ಪತ್ರೆಗೆ ಸೇರಿಸಲಾಗಿದೆ ಎಂದು ವರದಿಗಳು ಹೇಳಿವೆ.

ತಾಜಾ ಸುದ್ದಿ, ಕನ್ನಡ ಸುದ್ದಿ, ಕನ್ನಡ ಲೇಖನಗಳಿಗಾಗಿ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

ಅಜರುದ್ದೀನ್ ಅವರ ಮೊದಲ ಪತ್ನಿ ನೌರೀನ್ ಪುತ್ರ ಅಯಾಜುದ್ದೀನ್ (18) ಎಂಬವರೇ ಗಾಯಗೊಂಡಿರುವ ವ್ಯಕ್ತಿ. ಭಾನುವಾರ ಬೆಳಗ್ಗೆ ಬೈಕ್ ರೇಸ್‌ ಸಂದರ್ಭದಲ್ಲಿ ಪುಷ್ಪಾಲಗೂಡ ಟೋಲ್‌ಗೇಟ್ ಬಳಿ ಅವಘಡ ಸಂಭವಿಸಿತ್ತು ಎಂದು ಮೂಲಗಳು ತಿಳಿಸಿವೆ.

ಆದರೆ ಭೀಕರ ಅವಘಡದಲ್ಲಿ ಅಯಾಜುದ್ದೀನ್ ಸ್ನೇಹಿತ ಸಾವನ್ನಪ್ಪಿದ್ದಾರೆ. ಗಾಯಾಳುಗಳನ್ನು ತಕ್ಷಣ ಅಪೋಲೊ ಆಸ್ಪತ್ರೆಗೆ ಸಾಗಿಸಲಾಗಿತ್ತಾದರೂ ಅಯಾಜುದ್ದೀನ್ ಸ್ನೇಹಿತನ ಪ್ರಾಣ ಪಕ್ಷಿ ಆವಾಗಲೇ ಹಾರಿ ಹೋಗಿತ್ತು.

ಅಜರುದ್ದೀನ್ ಅವರಿಗೆ ಮೊದಲ ಪತ್ನಿಯಲ್ಲಿ ಇಬ್ಬರು ಮಕ್ಕಳಿದ್ದಾರೆ. ಆನಂತರ ಮೊದಲ ಪತ್ನಿಗೆ ತಲಾಕ್ ಕೊಟ್ಟಿದ್ದ ಭಾರತದ ಮಾಜಿ ನಾಯಕ ಅಜರ್ ಸಂಗೀತಾ ಬಿಜಲಾನಿ ಅವರನ್ನು ಎರಡನೇ ವಿವಾಹವಾಗಿದ್ದರು. ಇದೀಗ ಮಗನ ಅಪಘಾತದ ಆಘಾತಕಾರಿ ಸುದ್ದಿ ತಿಳಿದಿರುವ ಅಜರ್ ಅವರು ಲಂಡನ್ ಪ್ರವಾಸದಿಂದ ತುರಂತ್ ಆಗಿ ಹೈದರಾಬಾದ್‌ಗೆ ದೌಡಾಯಿಸಿದ್ದಾರೆ.

ಅಜರ್ ಪುತ್ರ ಅಯಾಜುದ್ದೀನ್‌ಗೆ ರಜಾ ದಿನಗಳಲ್ಲಿ ಸ್ನೇಹಿತರ ಜತೆಗೂಡಿ ಬೈಕ್ ರೇಸ್ ಮಾಡುವ ಹವ್ಯಾಸವಿದೆ ಎನ್ನಲಾಗಿದೆ. ಎಂದಿನಂತೆ ಇಂದು ಬೆಳಗ್ಗೆ ಕೂಡಾ ಗೆಳೆಯರ ಜತೆ ಬೈಕ್ ರೇಸ್‌ನಲ್ಲಿ ತೊಡಗಿಸಿಕೊಂಡಿದ್ದರು.

ವೆಬ್‌ದುನಿಯಾ ಕನ್ನಡ ಓದುಗರೇ! ಕಾಮೆಂಟ್ ಮಾಡೋ ಮುನ್ನ ಇಲ್ಲೊಮ್ಮೆ ಓದಿ ನೋಡಿ!

ವೆಬ್ದುನಿಯಾವನ್ನು ಓದಿ