ಭಾರತದ ಗಡಿ ದಾಟಿ ಮರಗಳನ್ನು ಕಡಿದ ಮ್ಯಾನ್ಮಾರ್ ಸೈನಿಕರು

ಬುಧವಾರ, 28 ಆಗಸ್ಟ್ 2013 (18:48 IST)
PR
PR
ನವದೆಹಲಿ: ಚೀನಾ ಸೈನಿಕರು ಗಡಿ ದಾಟಿದ ರಗಳೆ ಮುಗಿಯುತ್ತಿದ್ದಂತೆ ಮ್ಯಾನ್ಮಾರ್ ನುಸುಳುವಿಕೆ ರಗಳೆ ಷುರುವಾಗಿದೆ. ಮಣಿಪುರದ ಮೋರೆಹ್ ವಲಯದಲ್ಲಿ ಶಿಬಿರವನ್ನು ಸ್ಥಾಪಿಸಲು ಸೇನೆಯನ್ನು ಮ್ಯಾನ್ಮಾರ್ ನುಸುಳಿಸಿದೆ. ಮ್ಯಾನ್ಮಾರ್ ಸೈನಿಕರು ಎರಡು-ಮೂರು ದಿನಗಳ ಹಿಂದೆ ಗಡಿಯನ್ನ ದಾಟಿ ಮೋರೆನ ಗಡಿ ಪಟ್ಟಣದ ಹೊಲೇನಪೈ ಗ್ರಾಮದಲ್ಲಿ ತಾತ್ಕಾಲಿಕ ಶಿಬಿರ ನಿರ್ಮಿಸುವುದಕ್ಕಾಗಿ ಮರಗಳನ್ನು ಕಡಿಯಲಾರಂಭಿಸಿದರು.ಈ ಗ್ರಾಮವು ವಿವಾದಿತ ಕಂಬ 76ರ ಪಕ್ಕದಲ್ಲಿದೆ. ಅಲ್ಲಿ 9 ಕಂಬಗಳು ಮ್ಯಾನ್ಮಾರ್ ಮತ್ತು ಭಾರತದ ನಡುವೆ ವಿವಾದಿತವಾಗಿದೆ.

ಭಾರತದ ಪಡೆಗಳು ಮ್ಯಾನ್ಮಾರ್ ಸೈನಿಕರನ್ನು ತಡೆದಿದ್ದಾರೆ ಎಂದು ಗೃಹಸಚಿವಾಲಯ ತಿಳಿಸಿದೆ. ಮ್ಯಾನ್ಮಾರ್ ಸೈನಿಕರು ಈ ಗ್ರಾಮವನ್ನು ತಮ್ಮ ಪ್ರದೇಶಕ್ಕೆ ಸೇರಿದ್ದೆಂದು ಪ್ರತಿಪಾದಿಸಿದ್ದರು. ಆದರೆ ಇದು ಭಾರತದ ಗಡಿಯ ಪಕ್ಕದಲ್ಲಿರುವ ಗುರುತಿಸಲಾಗದ ವಲಯವಾಗಿದೆ ಎಂದು ಭಾರತ ತಿಳಿಸಿದೆ.

ವೆಬ್ದುನಿಯಾವನ್ನು ಓದಿ