ಭಾರತ-ಇಯು ನಡುವೆ ಸಹಕಾರ ವೃದ್ಧಿ

ಶುಕ್ರವಾರ, 30 ನವೆಂಬರ್ 2007 (15:50 IST)
ಶುಕ್ರವಾರ ನಡೆಯುವ ಭಾರತ-ಯೂರೋಪಿಯನ್ ಒಕ್ಕೂಟದ ಶೃಂಗಸಭೆಯಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಸಹಕಾರವನ್ನು ಬಲಪಡಿಸುವ ಮೂಲಕ ಬಾಂಧವ್ಯವನ್ನು ಹೊಸ ಮಟ್ಟಕ್ಕೆ ಒಯ್ಯುಲಾಗುವುದು ಮತ್ತು ವ್ಯೂಹಾತ್ಮಕ ಸಹಭಾಗಿತ್ವಕ್ಕೆ ಹೊಸ ಪ್ರದೇಶಗಳನ್ನು ಗುರುತಿಸುವುದೆಂದು ನಿರೀಕ್ಷಿಸಲಾಗಿದೆ.

ಶೃಂಗಸಭೆಯ 8ನೇ ಅಧ್ಯಾಯದಲ್ಲಿ ಭಾರತದ ತಂಡಕ್ಕೆ ಪ್ರಧಾನಮಂತ್ರಿ ಮನಮೋಹನ ಸಿಂಗ್ ನೇತೃತ್ವ ವಹಿಸಲಿದ್ದು, ಹವಾಮಾನ ಬದಲಾವಣೆ, ಭಯೋತ್ಪಾದನೆಯ ಸವಾಲುಗಳು ಮತ್ತು ದ್ವಿಪಕ್ಷೀಯ ವ್ಯಾಪಾರ ಮತ್ತು ಬಂಡವಾಳ ಸುಧಾರಣೆಗೆ ಮಾರ್ಗಗಳು ಮುಂತಾದ ಜಾಗತಿಕ ವಿಷಯಗಳು ಚರ್ಚೆಯಾಗಲಿದೆ.

27 ಸದಸ್ಯರ ಗುಂಪಿನ ನೇತೃತ್ವ ವಹಿಸಿರುವ ಪೋರ್ಚುಗಲ್ ಪ್ರಧಾನಮಂತ್ರಿ ಜೋಸ್ ಸಾಕ್ರೇಟ್ಸ್ ಜತೆ ಸಿಂಗ್ ನಡೆಸುವ ಚರ್ಚೆಯಲ್ಲಿ ನಾಗರಿಕ ಪರಮಾಣು ಒಪ್ಪಂದದ ವಿಷಯ ಕೂಡ ಪ್ರಸ್ತಾಪವಾಗುವುದೆಂದು ನಿರೀಕ್ಷಿಸಲಾಗಿದೆ. ಐಎಇಎ ಜತೆ ಸುರಕ್ಷತೆ ಒಪ್ಪಂದ ಕುರಿತ ಮಾತುಕತೆ ಪ್ರಗತಿಯ ಬಗ್ಗೆ ಸೊಕ್ರೇಟ್ಸ್ ಅವರಿಗೆ ಸಿಂಗ್ ಮನದಟ್ಟು ಮಾಡುವರೆಂದು ನಿರೀಕ್ಷಿಸಲಾಗಿದೆ.

ವಿಜ್ಞಾನ ಮತ್ತು ತಂತ್ರಜ್ಞಾನ ಸಹಕಾರ ಮೇಲ್ದರ್ಜೆಗೇರಿಸುವ ಒಪ್ಪಂದ ಮತ್ತು 2007-2010ರ ಸಾಲಿನಲ್ಲಿ ಅಭಿವೃದ್ಧಿ ಸಹಕಾರಕ್ಕೆ ಬಹು ವಾರ್ಷಿಕ ಸೂಚಿತ ಕಾರ್ಯಕ್ರಮದ ಬಗ್ಗೆ ಒಡಂಬಡಿಕೆಗೆ ಉಭಯ ಕಡೆಗಳು ಸಹಿ ಹಾಕುವುವೆಂದು ನಿರೀಕ್ಷಿಸಲಾಗಿದೆ. ಇಯು ರಾಷ್ಟ್ರಗಳು ಮತ್ತು ಭಾರತದ ನಡುವೆ ವ್ಯಾಪಾರ ಮತ್ತು ಬಂಡವಾಳ ಬಾಂಧವ್ಯ ಸುಧಾರಣೆಯು ಶೃಂಗಸಭೆಯಲ್ಲಿ ಮುಖ್ಯವಾಗಿ ಪ್ರಸ್ತಾಪವಾಗುವುದೆಂದು ನಿರೀಕ್ಷಿಸಲಾಗಿದೆ.

ವೆಬ್ದುನಿಯಾವನ್ನು ಓದಿ