ಭಾರತ ಗಡಿಯಲ್ಲಿ ಆತಂಕ ಹೆಚ್ಚಿಸುತ್ತಿಲ್ಲ: ಪ್ರಣಬ್

ಶನಿವಾರ, 3 ಜನವರಿ 2009 (20:45 IST)
PTI
ಭಾರತೀಯ ಗಡಿಪ್ರದೇಶದಲ್ಲಿ ಉದ್ನಿಗ್ನತೆ ಹೆಚ್ಚಿದೆ ಎಂಬ ಪಾಕಿಸ್ತಾನದ ಹೇಳಿಕೆಯನ್ನು ತಳ್ಳಿಹಾಕಿರುವ ವಿದೇಶಾಂಗ ಸಚಿವ ಪ್ರಣಬ್ ಮುಖರ್ಜಿ, ಭಾರತದ ಬದಿಯಿಂದ ಯಾವುದೇ ಚಟುವಟಿಕೆಗಳು ಹೆಚ್ಚಾಗಿಲ್ಲ, ಅಲ್ಲಿನ ಸೇನಾ ಚಲನವಲನಗಳು ಏನಿದ್ದರೂ ಚಳಿಗಾಲದ ಎಂದಿನ ಕವಾಯತು ಅಷ್ಟೆ ಎಂದು ಹೇಳಿದ್ದಾರೆ.

ಭಾರತವು ತನ್ನ ಸೇನಾಪಡೆಗಳನ್ನು ಮತ್ತು ವಾಯುಪಡೆಗಳ ನೆಲಗಳನ್ನು ಪಾಕಿಸ್ತಾನದ ಕಡೆಗೆ ಚಲಾಯಿಸುತ್ತಿದೆ ಎಂಬ ಪಾಕಿಸ್ತಾನಿ ವಿದೇಶಾಂಗ ಸಚಿವ ಶಾ ಮೆಹ್ಮೂದ್ ಖುರೇಶಿ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಪ್ರಣಬ್ ಭಾರತದ ಬದಿಯಿಂದ ಅಂತಹ ಯಾವುದೇ ಚಟುವಟಿಕೆಗಳು ನಡೆಯುತ್ತಿಲ್ಲ ಎಂದು ಹೇಳಿದ್ದಾರೆ.

"ನಾವು ಯಾವುದೇ ಆತಂಕ ಸೃಷ್ಟಿಸಿಲ್ಲ. ಆತಂಕ ಹೆಚ್ಚಿಸಲು ಮೊದಲಿಗೆ ಅಲ್ಲಿ ಆತಂಕ ಸೃಷ್ಟಿಯಾಗಬೇಕು. ಹಾಗಾದಲ್ಲಿ ಮಾತ್ರ ಹೆಚ್ಚಳದ ಇಳಿಕೆಯಾಗುತ್ತದೆ. ನಾವು ಇಂತಹ ಯಾವುದನ್ನೂ ಹೆಚ್ಚಿಸಿಲ್ಲ" ಎಂದು ಸಚಿವರು ಸ್ಪಷ್ಟಪಡಿಸಿದರು.

ಗಡಿಪ್ರದೇಶದಲ್ಲಿ ಏನಾದರೂ ನಡೆಯುತ್ತಿದ್ದರೆ ಅದು ಚಳಿಗಾಲದ ಸಾಮಾನ್ಯ ಕವಾಯಿತು. ಇದು ಪ್ರತಿವರ್ಷ ಸಂಭವಿಸುತ್ತಿರುತ್ತದೆ. ಹಾಗಾಗಿ ಯಾವುದೇ ಪ್ರಕ್ಷುಬ್ಧತೆನ್ನು ಹುಟ್ಟುಹಾಕುವ ಇಲ್ಲವೆ ಹೆಚ್ಚಿಸುವ ಪ್ರಶ್ನೆಯೇ ಇಲ್ಲ ಎಂದು ಅವರು ಸ್ಪಷ್ಟಪಡಿಸಿದರು.

ಸಾಕ್ಷ್ಯಾಧಾರದ ಕೊರತೆಯ ಕುರಿತು ಪಾಕಿಸ್ತಾನದ ಪುನರಪಿ ಹೇಳಿಕೆಗಳ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಸಚಿವರು, ಪಾಕಿಸ್ತಾನವು ತನ್ನ ದ್ವಂದ್ವ ಹೇಳಿಕೆಗಳ ಮೂಲಕ ನುಣುಚಿಕೊಳ್ಳುವಂತಿಲ್ಲ ಎಂದು ಹೇಳಿದ್ದಾರೆ.

ಲಷ್ಕರೆ ಮುಖಂಡ ಮೌಲಾನಾ ಮಸೂದ್ ಅಜರ್ ಕುರಿತಂತೆ ಪಾಕಿಸ್ತಾನದ ಹೇಳಿಕೆಗಳನ್ನು ಪ್ರಸ್ತಾಪಿಸಿ, "ಆತ ಕಾಣುತ್ತಿಲ್ಲ ಎಂದಾದರೆ, ಪಾಕಿಸ್ತಾನ ಸರ್ಕಾರ ಮೊದಲಿಗೆ ಆತನನ್ನು ಹೇಗೆ ಗೃಹಬಂಧನದಲ್ಲಿರಿಸಿತ್ತು? ಮತ್ತು ನಂತರದಲ್ಲಿ ಆತ ಎಲ್ಲಿದ್ದಾನೆಂದು ಸ್ಪಷ್ಟವಿಲ್ಲ ಎಂದು ಹೇಗೆ ಹೇಳಿತ್ತು" ಎಂದು ಪ್ರಶ್ನಿಸಿದರು.

ವೆಬ್ದುನಿಯಾವನ್ನು ಓದಿ