ಭಾರತ ದೇಶದಲ್ಲಿರುವ ಪ್ರತಿಯೊಬ್ಬರು ಭ್ರಷ್ಟರಲ್ಲ: ಪಿ.ಚಿದಂಬರಂ

ಗುರುವಾರ, 13 ಫೆಬ್ರವರಿ 2014 (16:42 IST)
PTI
ದೇಶದಲ್ಲಿ ವಾಸಿಸುವ ಪ್ರತಿಯೊಬ್ಬರು ಭ್ರಷ್ಟರಲ್ಲ. ಆರೋಪಿಗಳು ಭ್ರಷ್ಟಾಚಾರ ಎಸಗಿರುವುದು ಖಚಿತವಾದ ನಂತರ ಸರಕಾರಿ ಇಲಾಖೆಗಳು ಕ್ರಮ ಕೈಗೊಳ್ಳಬೇಕು ಎಂದು ಕೇಂದ್ರ ಹಣಕಾಸು ಖಾತೆ ಸಚಿವ ಪಿ.ಚಿದಂಬರಂ ಹೇಳಿದ್ದಾರೆ.

ನಾನು ಭ್ರಷ್ಟಾಚಾರದ ಪರವಾಗಿ ಮಾತನಾಡುತ್ತಿಲ್ಲ. ಪ್ರತಿಯೊಬ್ಬರು ಭ್ರಷ್ಟರು ಎನ್ನುವುದನ್ನು ನಂಬದಿರಿ ಎಂದು ಮನವಿ ಮಾಡುತ್ತೇನೆ. ನೀವು ಭ್ರಷ್ಟರಾ, ನಿಮ್ಮ ತಂದೆ ಭ್ರಷ್ಟರೆ? ನಿಮ್ಮ ತಾಯಿ ಭ್ರಷ್ಟರೆ, ನಿಮ್ಮ ಗೆಳೆಯರು ಭ್ರಷ್ಟರೆ. ನೀವು ಮಾಡುವ ಪ್ರತಿಯೊಂದು ಕೆಲಸವು ಭ್ರಷ್ಟಾಚಾರವೇ. ದೇಶದಲ್ಲಿನ ಜನತೆ ಇಂತಹ ನಿಲುವು ತಳೆದಿರುವುದು ಹೇಯ ಸಂಗತಿಯಾಗಿದೆ ಎಂದು ಕಿಡಿಕಾರಿದ್ದಾರೆ.

ಭಾರತ ಅತಿ ಭ್ರಷ್ಟ ದೇಶ ಎಂದು ಹೇಳಲಾಗುತ್ತಿದೆ. ಭಾರತೀಯರು ವಿಶ್ವದಲ್ಲಿಯೇ ಅತಿ ಹೆಚ್ಚು ಭ್ರಷ್ಟರು ಎನ್ನುವ ವರದಿಗಳು ಸತ್ಯಕ್ಕೆ ದೂರವಾಗಿವೆ ಎಂದರು.

ಕೇಂದ್ರ ಜಾಗೃತ ದಳ ಆಯೋಗದ ವಜ್ರಮಹೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕಂಪೆನಿಗಳಾಗಲಿ ಅಥವಾ ವ್ಯಕ್ತಿಗಳಾಗಲಿ ಭ್ರಷ್ಟಾಚಾರ ಎಸಗಿದ ಆರೋಪ ಖಚಿತವಾದ ನಂತರವಷ್ಟೆ ಕ್ರಮ ತೆಗೆದುಕೊಳ್ಳಿ. ಇದರಿಂದ ಪ್ರಕರಣಗಳ ತನಿಖೆಯ ಹೊರೆ ಕಡಿಮೆಯಾಗುತ್ತದೆ ಎಂದು ಕೇಂದ್ರ ಹಣಕಾಸು ಖಾತೆ ಸಚಿವ ಪಿ.ಚಿದಂಬರಂ ಅಧಿಕಾರಿಗಳಿಗೆ ಸಲಹೆ ನೀಡಿದ್ದಾರೆ.

ವೆಬ್ದುನಿಯಾವನ್ನು ಓದಿ