ಮಗಳನ್ನು ಗ್ಯಾಂಗ್‌‌ರೇಪ್ ಮಾಡಿದ್ರು. ಹೆಂಡತಿಯನ್ನು ಕೊಂದುಬಿಟ್ರು. ಅಪ್ಪ ಏನಾದ?

ಸೋಮವಾರ, 31 ಮಾರ್ಚ್ 2014 (15:36 IST)
ದೆಹಲಿಯಲ್ಲಿ ನಿರ್ಭಯ ಮೇಲೆ ಸಾಮೂಹಿಕ ಅತ್ಯಾಚಾರವಾಯ್ತು. ಮುಂಬೈನಲ್ಲಿ ಪತ್ರಕರ್ತೆಯ ಮೇಲೆ ಅಮಾನುಷವಾಗಿ ಐವರು ಗ್ಯಾಂಗ್ ರೇಪ್ ಮಾಡಿದ್ರು. ಇದೆಲ್ಲವೂ ಹಸಿರಾಗಿರುವಾಗಲೇ ಇಲ್ಲೊಂದು ದಲಿತ ಕುಟುಂಬದ ಆಕ್ರಂದನ ಮುಗಿಲು ಮುಟ್ಟಿದೆ. ಮಗಳ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿದೆ. ಹೆಂಡತಿಯ ಕೊಲೆಯಾಗಿದೆ. ಆದರೆ ಅಪ್ಪನ ಪಾಡು ಮಾತ್ರ ಹೇಳತೀರದು.

ಕಳೆದ ಆಗಸ್ಟ್‌ ತಿಂಗಳಲ್ಲಿ ಹರ್ಯಾಣದ ಚೋಟಿ ಕಲಾಸಿ ಹಳ್ಳಿಯಲ್ಲಿನ ಪ್ರಭಾವಿ ವ್ಯಕ್ತಿಗಳ ಮಕ್ಕಳು 15 ವರ್ಷದ ಶಾಲಾ ಬಾಲಕಿಯನ್ನು ಅಪಹರಿಸಿ ತಮ್ಮ ಕಾರಿನಲ್ಲೇ ಸಾಮೂಹಿಕವಾಗಿ ಅತ್ಯಾಚಾರ ಎಸಗಿದ್ದಾರೆ. ಅಷ್ಟೇ ಅಲ್ಲ, ಈ ವಿಷಯವನ್ನು ಎಲ್ಲಾದ್ರೂ ಹೊರಗೆ ಹೇಳಿದ್ರೆ ಕುಟುಂಬ ಸಮೇತ ಎಲ್ಲರನ್ನೂ ಕೊಲೆ ಮಾಡುವುದಾಗಿ ಬಾಲಕಿಗೆ ಬೆದರಿಕೆ ಹಾಕಿದ್ದಾರೆ. ಮತ್ತು ಪ್ರತಿ ಹತ್ತು ದಿನಗಳಿಗೊಮ್ಮೆ ಅವರ ಬಳಿಗೆ ಬಂದು ಇದೇ ರೀತಿಯ ಸುಖ ಕೊಟ್ಟು ಹೋಗುವಂತೆ ಸೂಚಿಸಿದ್ದಾರೆ.

ಹಾಗೋ ಹೀಗೋ ಕಾಮುಕರ ಕಪಿಮುಷ್ಟಿಯಿಂದ ತಪ್ಪಿಸಿಕೊಂಡು ಬಂದ ಬಾಲಕಿ ತಾಯಿಯ ಎದುರು ನಡೆದ ಎಲ್ಲಾ ಘಟನೆಯನ್ನು ವಿವರಿಸಿದ್ದಾಳೆ. ತಾಯಿ ಅದನ್ನು ತನ್ನ ಪತಿಗೆ ಹೇಳಿದ್ದಾಳೆ. ಹುಡುಗಿಯ ತಂದೆ ಪೋಲೀಸರಿಗೆ ದೂರು ಸಲ್ಲಿಸಲು ಹೋದರೆ, ದೂರನ್ನು ಸ್ವೀಕರಿಸದೇ ಪೋಲೀಸರು ಆತನನ್ನು ಹೊರಗಟ್ಟಿದ್ದಾರೆ.

PTI
PTI
ಇದರಿಂದ ಕುಪಿತಗೊಂಡ ರೇಪಿಸ್ಟ್‌ಗಳು ಬಾಲಕಿಯ ತಾಯಿಯನ್ನು ಅಪಹರಿಸಿಕೊಂಡು ಹೋಗಿ ಹತ್ಯೆ ಮಾಡಿದ್ದಾರೆ. ಇನ್ನೊಂದೆಡೆ ಬಾಲಕಿ ಅತ್ಯಾಚಾರಕ್ಕೆ ಒಳಗಾಗಿರುವುದರಿಂದ ಶಾಲೆಯ ಸಿಬ್ಬಂಧಿಗಳು ಆಕೆಯನ್ನು ಶಾಲೆಯಿಂದ ಹೊರದೂಡಿದ್ದಾರೆ.

ಮಗಳ ಮೇಲಿನ ಅತ್ಯಾಚಾರ ಮತ್ತು ಹೆಂಡತಿಯ ಹತ್ಯೆಗೆ ಸಂಬಂದಿಸಿದಂತೆ ಭೂತಾನ್‌ ಪೋಲೀಸರಿಗೆ ಹೋಗಿ ಕಂಪ್ಲಂಟ್‌ ಕೊಟ್ಟಿದ್ದಾನೆ. ಆದರೆ ಕಂಪ್ಲೇಂಟ್‌ ವಾಪಸ್‌ ತಗೊಳ್ದೇ ಇದ್ರೆ ಕೊಲ್ಲುವುದಾಗಿ ಆರೋಪಿಗಳು ಬೆದರಿಕೆ ಹಾಕುತ್ತಿದ್ದಾರೆ.

ಬೇರೆ ದಾರಿ ಕಾಣದ ತಂದೆ ಸುಪ್ರೀಂ ಕೋರ್ಟಗೆ ಮೊರೆ ಹೋಗಿದ್ದಾನೆ. ಬದುಕಿರುವ ನಮ್ಮನ್ನಾದರೂ ರಕ್ಷಿಸಿ ಅಂತ ನ್ಯಾಯಾಲಯದ ಮುಂದೆ ಅಳಲುತೋಡಿಕೊಂಡಿದ್ದಾನೆ.

ವಿಚಿತ್ರ ಅಂದ್ರೆ ಪೋಲೀಸರು ದೂರನ್ನು ತಿರುಚಿದ್ದು, ಕಂಪ್ಲೆಂಟ್‌ ಕೊಟ್ಟವನನ್ನೇ ಸಿಲುಕಿಸುವ ಪ್ರಯತ್ನದಲ್ಲಿದ್ದಾರೆ. ಆದರೆ ಇದನ್ನು ಕೇಳಲು ಅಲ್ಲಿ ಯಾವುದೇ ದನಿಗಳಿಲ್ಲ. ಹೋರಾಟದ ಕೈಗಳಿಲ್ಲ, ಕೇವಲ ದೌರ್ಜನ್ಯದ ಅಟ್ಟಹಾಸ ಮಾತ್ರ..

ವೆಬ್ದುನಿಯಾವನ್ನು ಓದಿ