ಮದುವೆಯಾಗಲು ನಿರಾಕರಿಸಿದ್ದಕ್ಕೆ 17ರ ಹರೆಯದ ಹುಡುಗಿಯನ್ನು ಕೊಂದ ಗೆಳೆಯ

ಮಂಗಳವಾರ, 1 ಏಪ್ರಿಲ್ 2014 (13:33 IST)
22ರ ಹರೆಯದ ಯುವಕನೊಬ್ಬ ತನ್ನನ್ನು ವಿವಾಹವಾಗಲು ನಿರಾಕರಿಸಿದ ಕಾರಣಕ್ಕೆ 12ನೆ ತರಗತಿಯಲ್ಲಿ ಓದುತ್ತಿದ್ದ 17ರ ಹರೆಯದ ಯುವತಿಯನ್ನು ಕೊಂದ ಘಟನೆ ಚೆನ್ನೈನ ಮನಾಲಿ ನವನಗರದಲ್ಲಿ ನಡೆದಿದೆ.

ಟುಟಿಕೊರ್ನ್‍ನ ನಿವಾಸಿಯಾಗಿದ್ದ ಅನುಭಾರತಿ ಮನಾಲಿಯಲ್ಲಿನ ತನ್ನ ಸಂಬಂಧಿಕರ ಮನೆಯಲ್ಲಿದ್ದುಕೊಂಡು ಖಾಸಗಿ ಶಾಲೆಯಲ್ಲಿ ಓದುತ್ತಿದ್ದಳು ಎಂದು ಪೋಲಿಸರು ತಿಳಿಸಿದ್ದಾರೆ. ತಮ್ಮ ದೂರದ ಸಂಬಂಧಿಯಾದ ಜಯರಾಮನ್ ಮಗಳ ಜತೆ ತುಂಬ ಸಲಿಗೆಯಿಂದ ಇರುವುದನ್ನು ತಿಳಿದ ಮೇಲೆ ಆಕೆಯ ಪಾಲಕರು ಮನೆಯಿಂದ ದೂರದಲ್ಲಿರಿಸುವ ಉದ್ದೇಶದಿಂದ ಚೆನ್ನೈಯಲ್ಲಿಟ್ಟು ಓದಿಸುತ್ತಿದ್ದರು.

ಅವರಿಬ್ಬರು ತುಂಬ ವರ್ಷಗಳಿಂದ ಒಬ್ಬರನೊಬ್ಬರು ಪ್ರೀತಿಸುತ್ತಿದ್ದರು. ಆದರೆ ಹುಡುಗಿಯ ಮನೆಯವರು ಇದನ್ನು ವಿರೋಧಿಸುತ್ತಿದ್ದರು.ಆತ ವಿದ್ಯಾವಂತನಲ್ಲ ಮತ್ತು ಒಳ್ಳೆಯ ಕೆಲಸದಲ್ಲಿ ಇಲ್ಲ ಎಂಬ ಕಾರಣಕ್ಕೆ ಅವನನ್ನು ಮರೆಯುವಂತೆ ಆಕೆಯ ತಂದೆ ಒತ್ತಡ ಹಾಕುತ್ತಿದ್ದರು.

ಆದರೆ ಅವರಿಬ್ಬರು ತಮ್ಮ ಪ್ರೇಮಸಂಬಂಧವನ್ನು ಮುಂದುವರೆಸಿದಾಗ ಆಕೆಯನ್ನು ಸಂಬಂಧಿಕರ ಮನೆಯಲ್ಲಿಟ್ಟು ಓದಿಸಲು ಪ್ರಾರಂಭಿಸಿದರು. ಆದರೆ ಅವರಿಬ್ಬರೂ ಅಲ್ಲಿಯೂ ಪರಷ್ಪರ ಭೇಟಿಯಾಗುವುದನ್ನು ಮುಂದುವರೆಸಿದರು.

ಇತ್ತೀಚಿಗೆ ಆಕೆಯ ತಂದೆ-ತಾಯಿ ಬಳಿ ಗಲಾಟೆ ಮಾಡಿಕೊಂಡಿದ್ದ ಯುವಕ ಭಾನುವಾರ ಚೆನ್ನೈಗೆ ಬಂದು ಆಕೆಯನ್ನು ಭೇಟಿಯಾಗಿದ್ದಾನೆ. ಸಂಬಂಧಿಕರು ಮನೆಯಲಿಲ್ಲ, ಬಾ ಎಂದು ಹುಡುಗಿ ಆತನನ್ನು ಆಹ್ವಾನಿಸಿದ್ದಳು. ಆಕೆ ಉಳಿದುಕೊಂಡಿದ್ದ ಮನೆಗೆ ಬಂದ ಆತ ನನ್ನನ್ನು ಮದುವೆಯಾಗು ಎಂದು ಒತ್ತಾಯಿಸಿದ್ದಾನೆ. ಆದರೆ ಆಕೆ ನನ್ನ ವಿದ್ಯಾಭ್ಯಾಸ ಮುಗಿಯುವವರೆಗೂ ಮದುವೆ ಬೇಡ ಎಂದಿದ್ದಾಳೆ. ಅದರಿಂದ ಸಿಟ್ಟಿಗೆದ್ದ ಆತ ಚಾಕುವಿನಿಂದ ಆತನ ಕತ್ತನ್ನು ಸೀಳಿ ಕೊಲೆಗೈದಿದ್ದಾನೆ ಎಂದು ಪೋಲಿಸ್ ಮೂಲಗಳು ತಿಳಿಸಿವೆ.

ಹುಡುಗಿಯ ಆರ್ತನಾದ ಕೇಳಿ ಓಡಿ ಬಂದ ಪಕ್ಕದ ಮನೆಯವರು ಪಲಾಯನ ಮಾಡುತ್ತಿದ್ದ ಆರೋಪಿಯನ್ನು ಹಿಡಿದು ಪೋಲಿಸರಿಗೆ ಒಪ್ಪಿಸಿದ್ದಾರೆ.

ವೆಬ್ದುನಿಯಾವನ್ನು ಓದಿ