ಮಧ್ಯಪ್ರದೇಶ : ಒಂದೇ ಬಾರಿಗೆ 10 ಮಕ್ಕಳನ್ನು ಹೆತ್ತ ಮಹಾತಾಯಿ

ಮಂಗಳವಾರ, 17 ಡಿಸೆಂಬರ್ 2013 (16:47 IST)
PR
ಮಧ್ಯಪ್ರದೇಶದ ಸಾತ್ನಾ ಜಿಲ್ಲೆಯ ನಿವಾಸಿಯಾದ ಮಹಿಳೆಯೊಬ್ಬಳು 10 ಮಕ್ಕಳನ್ನು ಹೆರುವ ಮೂಲಕ ಭಾರತದ ಎಲ್ಲಾ ವೈದ್ಯಕೀಯ ದಾಖಲೆಗಳನ್ನು ಮುರಿದಿದ್ದಾಳೆ. ಆದರೆ, 10 ಮಕ್ಕಳು ಬದುಕುಳಿಯದಿರುವುದು ವಿಷಾದವಾಗಿದೆ.

ಭಾರತದಲ್ಲಿ ಮಹಿಳೆಯೊಬ್ಬಳು 10 ಮಕ್ಕಳನ್ನು ಹೆತ್ತಿರುವುದು ದಾಖಲೆಯಾಗಿದೆ. 1971ರಲ್ಲಿ ಇಟಲಿ ದೇಶದ ರೋಮ್ ನಗರದಲ್ಲಿ 15 ಮಕ್ಕಳನ್ನು ಮಹಿಳೆಯೊಬ್ಬಳು ಹೆತ್ತಿದ್ದಳು ಎಂದು ವೈದ್ಯರೊಬ್ಬರು ತಿಳಿಸಿದ್ದಾರೆ.

ಸಾತ್ನಾ ಜಿಲ್ಲೆಯ ಕೋಟಿ ಗ್ರಾಮದ ನಿವಾಸಿಯಾದ ಅಂಜು ಕುಶಹಾ ಎನ್ನುವ ಮಹಿಳೆಯನ್ನು ರೇವಾ ಜಿಲ್ಲೆಯಲ್ಲಿರುವ ಸಂಜಯ್ ಗಾಂಧಿ ಮೆಮೋರಿಯಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಮಹಿಳೆಯನ್ನು ಆಸ್ಪತ್ರೆಗೆ ತೆರಳುವ ಮಾರ್ಗ ಮಧ್ಯದಲ್ಲಿಯೇ 9 ಮಕ್ಕಳಿಗೆ ಜನ್ಮ ನೀಡಿದ್ದಳು. 10 ನೇ ಮಗು ಆಸ್ಪತ್ರೆಯಲ್ಲಿ ಜನಿಸಿತ್ತು. ಪ್ರತಿಯೊಂದು ಮಗು 12 ವಾರಗಳ ನಂತರ ಜನಿಸಿತ್ತು ಎಂದು ಆಸ್ಪತ್ರೆಯ ವೈದ್ಯರಾದ ಡಾ.ಎಸ್.ಕೆ.ಪಾಠಕ್ ತಿಳಿಸಿದ್ದಾರೆ.

10 ಮಕ್ಕಳನ್ನು ಹೆತ್ತ ತಾಯಿ ಮತ್ತು ಮಕ್ಕಳನ್ನು ನೋಡಲು ಆಸ್ಪತ್ರೆಯಲ್ಲಿ ಜನಸಾಗರವೇ ಸೇರಿತ್ತು. ಇದೊಂದು ವಿಚಿತ್ರ ಪ್ರಕರಣ. ಒಂದೇ ಗರ್ಭದಲ್ಲಿ 10 ಮಕ್ಕಳನ್ನು ಹೊಂದಿರುವ ಬಗ್ಗೆ ಸಂಶೋಧನೆಗಾಗಿ ಶಿಫಾರಸ್ಸು ಮಾಡಲಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

ವೆಬ್ದುನಿಯಾವನ್ನು ಓದಿ