ಮನಮೋಹನ್ ಸಿಂಗ್ ಡಿನ್ನರ್‌ಗೆ ಒಬಾಮಾ ಖರ್ಚು ಮಾಡಿದ್ದು 3.4 ಕೋಟಿ ರೂ.

ಗುರುವಾರ, 13 ಫೆಬ್ರವರಿ 2014 (13:51 IST)
PR
PR
ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮಾ ಗಣ್ಯ ವ್ಯಕ್ತಿಗಳ ಗೌರವಾರ್ಥ 2009ರಿಂದೀಚೆಗೆ ಆಯೋಜಿಸಿದ್ದ 5 ಭೋಜನಕೂಟಗಳಿಗೆ ವೆಚ್ಚ ಮಾಡಿದ ಹಣ ಬರೋಬ್ಬರಿ 1.55 ದಶಲಕ್ಷ ಡಾಲರ್ ಅಥವಾ 9.3 ಕೋಟಿ ರೂ. ಅವುಗಳ ಪೈಕಿ ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಗೌರವಾರ್ಥ ಆಯೋಜಿಸಿದ್ದ ಭೋಜನಕೂಟ ಅತ್ಯಂತ ದುಬಾರಿಯೆಂದು ಹೇಳಲಾಗುತ್ತಿದೆ. ವಿದೇಶಾಂಗ ಇಲಾಖೆ ಶಿಷ್ಟಾಚಾರದ ಕಚೇರಿಯ ದಾಖಲೆಗಳಲ್ಲಿ ಭೋಜನಕೂಟಗಳಿಗೆ ಅರ್ಧ ದಶಲಕ್ಷ ಡಾಲರ್ ಹೆಚ್ಚು ತೆರಿಗೆದಾರರ ಹಣ ಖರ್ಚಾಗಿರುವುದನ್ನು ತೋರಿಸಿದೆ.ಮಾಹಿತಿ ಹಕ್ಕಿಗೆ ಸಂಬಂಧಿಸಿದ ಮನವಿಗೆ ಪ್ರತಿಕ್ರಿಯಿಸಿದ ವಿದೇಶಾಂಗ ಇಲಾಖೆ ಐದುವರ್ಷಗಳ ಭೋಜನಕೂಟಗಳ ವೆಚ್ಚದ ಲೆಕ್ಕಾಚಾರವನ್ನು ಸಿಬಿಎಸ್‌ ನ್ಯೂಸ್‌ಗೆ ಸಲ್ಲಿಸಿದೆ.

ಒಬಾಮಾ ಆಡಳಿತವು 2009ರ ನವೆಂಬರ್ 24ರಂದು ಪ್ರಧಾನಿ ಸಿಂಗ್ ಅವರ ಸ್ಟೇಟ್ ಡಿನ್ನರ್‌ಗೆ ಬರೋಬ್ಬರಿ 3.4 ಕೋಟಿ ರೂ. ಖರ್ಚುಮಾಡಿದೆ.ಮೆಕ್ಸಿಕೊದ ಅಧ್ಯಕ್ಷ ಫೆಲಿಪ್ ಕಾಲ್ಡೆರಾನ್‌ ಅವರಿಗೆ ಆಯೋಜಿಸಿದ ಭೋಜನಕೂಟಕ್ಕೆ 3.3 ಕೋಟಿ ರೂ. ವೆಚ್ಚವಾಗಿತ್ತು. ಚೀನಾದ ಅಧ್ಯಕ್ಷ ಹು ಜಿಂಟಾವೋಗೆ ಆಯೋಜಿಸಿದ ಭೋಜನಕೂಟಕ್ಕೆ 2.4 ಕೋಟಿ ರೂ.ವೆಚ್ಚವಾಗಿತ್ತು.

ವೆಬ್ದುನಿಯಾವನ್ನು ಓದಿ