ಮಹಾರಾಷ್ಟ್ರದಲ್ಲಿ ನಡೆದ ಎನ್ಕೌಂಟರ್ ನಲ್ಲಿ ಏಳು ಮಾವೋವಾದಿಗಳ ಹತ್ಯೆ

ಮಂಗಳವಾರ, 18 ಫೆಬ್ರವರಿ 2014 (16:27 IST)
PTI
ಛತ್ತೀಸ್ ಗಡ ಪಕ್ಕದ ಮಹಾರಾಷ್ಟ್ರದ ಗಡಿಯಲ್ಲಿ ರಾಜ್ಯ ಪೊಲೀಸ್ ರು ನಡೆಸಿದ ಎನ್ಕೌಂಟರ್ ನಲ್ಲಿ ಏಳು ಮಾವೋವಾದಿಗಳು ಕೊಲ್ಲಲ್ಪಟ್ಟಿದ್ದಾರೆ ಎಂದು ಮಹಾರಾಷ್ಟ್ರದ ಉನ್ನತ ಪೊಲೀಸ್ ಅಧಿಕಾರಿಯೊಬ್ಬರು ಮಂಗಳವಾರ ಹೇಳಿದ್ದಾರೆ. ಇದು ವಿದರ್ಭ ಇಲಾಖೆಯ ಗಡ್ಚಿರೋಲಿ ಜಿಲ್ಲೆಯಲ್ಲಿನ ನಕ್ಸಲ್ ವಿರೋಧಿ ಅಭಿಯಾನದಲ್ಲಿ ಮಹಾರಾಷ್ಟ್ರ ಪೊಲೀಸ್ ರಿಗೆ ಸಿಕ್ಕ ದೊಡ್ಡ ಯಶಸ್ಸಾಗಿದೆ. ಅನೇಕ ವರ್ಷಗಳಿಂದ ಇದು ನಕ್ಸಲ್ ರ ಭದ್ರ ಕೋಟೆಯಾಗಿತ್ತು.

ಗಡಚಿರೋಲಿ- ಗೊಂಡಿಯಾ ಗಡಿ ಪ್ರದೇಶದ ಹತ್ತಿರದ ಬೆದಕಟಿ ಇಲಾಖೆಯ ದಟ್ಟವಾದ ಅರಣ್ಯ ದಲ್ಲಿ ಸೋಮವಾರ ರಾತ್ರಿ ಸುಮಾರು 11:30 ಕ್ಕೆ, ಗಂಟೆಗಳ ಕಾಲ ಎನ್ಕೌಂಟರ್ ನಡೆಯಿತು ಎಂದು ಎಸ್ಪಿ ಎಸ್ ಹಕ್ ಹೇಳಿದ್ದಾರೆ.

ಎರಡುವರೆ ಗಂಟೆಗಳ ಕಾಲ ನಡೆದ ಗುಂಡಿನ ಚಕಮಕಿ ನಂತರ ನಮಗೆ ಎರಡು ಮಹಿಳೆಯರ ಶವಗಳು ಸೇರಿದಂತೆ 7 ಶವಗಳು ಸಿಕ್ಕವು. ಅವರೆಲ್ಲರೂ ನಕ್ಸಲ್ ರ ಸಮವಸ್ತ್ರವನ್ನು ಧರಿಸಿದ್ದರು ಎಂದು ಹಕ್ ತಿಳಿಸಿದ್ದಾರೆ.

ತನ್ನ ಭದ್ರತಾ ಪಡೆಗಳು ಭದ್ರತಾ ದಳದವರು ಅವರಿಂದ ಒಂದು ಎಕೆ 47 ರೈಫಲ್, ಮೂರು ಎಸ್ಎಲ್ಆರ್, ಕೈಸಿಡಿಗುಂಡು ಸೇರಿದಂತೆ ದೊಡ್ಡ ಸಂಖ್ಯೆಯಲ್ಲಿ ಶಸ್ತ್ರಾಸ್ತ್ರಗಳನ್ನು ಮತ್ತು ಯುದ್ಧಸಾಮಗ್ರಿಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ಹಕ್ ಹೇಳಿದ್ದಾರೆ. ಗಡಚಿರೋಲಿ ಮತ್ತು ಗೊಂಡಿಯಾ ಪೊಲೀಸ್ ರು ನಡೆಸಿದ ಈ ಜಂಟಿ ಕಾರ್ಯಾಚರಣೆಯಲ್ಲಿ ನಾಲ್ಕು ಪೊಲೀಸ್ ರು ಗಾಯಗೊಂಡಿದ್ದಾರೆ, ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.

ವೆಬ್ದುನಿಯಾವನ್ನು ಓದಿ