ಮಹಾರಾಷ್ಟ್ರದಲ್ಲಿ ಬಸ್ ಕಣಿವೆಗೆ ಬಿದ್ದು 27 ಜನರ ದುರ್ಮರಣ

ಶುಕ್ರವಾರ, 3 ಜನವರಿ 2014 (09:16 IST)
PR
PR
ಥಾನೆ: ರಾಜ್ಯ ಸಾರಿಗೆ ಬಸ್ ಇಂದು ವಿಠಲ್‌ವಾಡಿ-ಅಹ್ಮದಾನಗರ ಮಾರ್ಗದಲ್ಲಿ ಮಲಶೇಜ್ ಘಾಟ್ ಕಣಿವೆಗೆ ಬಿದ್ದು 27 ಜನರು ಸಾವನ್ನಪ್ಪಿದ ಭೀಕರ ದುರಂತ ಸಂಭವಿಸಿದೆ. ಸುಮಾರು 250 ಮೀಟರ್ ಆಳವಿರುವ ಕಣಿವೆಯಲ್ಲಿ ರಕ್ಷಣಾ ತಂಡ ಪರಿಹಾರ ಕಾರ್ಯ ನಡೆಸುತ್ತಿದ್ದು, ಮೃತರ ಸಂಖ್ಯೆ ಮತ್ತಷ್ಟು ಹೆಚ್ಚಬಹುದೆಂದು ಭಾವಿಸಲಾಗಿದೆ. ಟೆಂಪೋವೊಂದು ಬಸ್ಸಿಗೆ ಡಿಕ್ಕಿ ಹೊಡೆದಿದ್ದರಿಂದ ಚಾಲಕನ ನಿಯಂತ್ರಣ ತಪ್ಪಿದ ಬಸ್ ಕಣಿವೆಗೆ ಬಿತ್ತೆಂದು ತಿಳಿದುಬಂದಿದೆ. ಮೃತರಲ್ಲಿ 19 ಮಹಿಳೆಯರು ಮತ್ತು 8 ಮಂದಿ ಪುರುಷರು ಸೇರಿದ್ದಾರೆ. ರಕ್ಷಿಸಲಾದ ಮೂವರ ಸ್ಥಿತಿ ಗಂಭೀರವಾಗಿದೆ.

ಇದುವರೆಗೆ 17 ಜನರನ್ನು ರಕ್ಷಿಸಲಾಗಿದೆ. ಬಸ್ ಕೆಳಕ್ಕೆ ಬಿದ್ದ ರಭಸಕ್ಕೆ ಎರಡು ಚೂರಾಗಿದೆ. ಅಪಘಾತ ಸ್ಥಳದಲ್ಲಿ ಮೊಬೈಲ್ ಟವರ್ ಕೂಡ ಇಲ್ಲದಿದ್ದರಿಂದ ಮೊಬೈಲ್ ಕೂಡ ಕಾರ್ಯನಿರ್ವಹಿಸುತ್ತಿರಲಿಲ್ಲ. ಮಹಾರಾಷ್ಟ್ರ ಮುಖ್ಯಮಂತ್ರಿ ಪ್ರಥ್ವಿರಾಜ್ ಚವಾಣ್ ಅಪಘಾತದಲ್ಲಿ ಸತ್ತವರಿಗೆ 3 ಲಕ್ಷ ರೂ. ಪರಿಹಾರ ಘೋಷಿಸಿದ್ದಾರೆ.

ವೆಬ್ದುನಿಯಾವನ್ನು ಓದಿ