ಮುಂಬೈನಲ್ಲಿ ಹೊಂಚುಹಾಕುವ ಬಾಂಬರ್‌ಗಳು

ಶನಿವಾರ, 27 ಅಕ್ಟೋಬರ್ 2007 (14:04 IST)
ಮುಂಬೈನ ಸಬರ್ಬನ್ ರೈಲು ನಿಲ್ದಾಣಗಳಲ್ಲಿ 188 ಜನರನ್ನು ಬಲಿತೆಗೆದುಕೊಂಡ ಸರಣಿ ಸ್ಫೋಟಗಳು ಸಂಭವಿಸಿದ ಬಳಿಕ ಮೂವರು ಆತ್ಮಹತ್ಯೆ ಬಾಂಬರ್‌ಗಳು ಮುಂಬೈನ ಬೀದಿಗಳಲ್ಲಿ ತಿರುಗುತ್ತಿದ್ದು ಹೊಸ ಗುರಿಗಳಿಗಾಗಿ ಹುಡುಕಾಟ ನಡೆಸಿದ್ದಾರೆಂದು ಪೊಲೀಸರು ಎಚ್ಚರಿಸಿದ್ದಾರೆ.

ಪೊಲೀಸರು ಈ ಶಂಕಿತರ ರೇಖಾಚಿತ್ರಗಳನ್ನು ಬಿಡುಗಡೆ ಮಾಡಿದ್ದು, ಅವರ ಬಗ್ಗೆ ಅಥವಾ ವಿಳಾಸದ ಬಗ್ಗೆ ಹೆಚ್ಚು ಸುಳಿವು ನೀಡಿಲ್ಲ. ಮುಂಬೈನ ಎರಡು ಮುಖ್ಯ ಷೇರುಮಾರುಕಟ್ಟೆಗಳಲ್ಲಿ ಈ-ಮೇಲ್ ಬಾಂಬ್ ಬೆದರಿಕೆಗಳು ತಲುಪಿದ ಕೆಲವು ವಾರಗಳ ಬಳಿಕ ಪೊಲೀಸರು ಈ ಎಚ್ಚರಿಕೆ ನೀಡಿದ್ದಾರೆ.

ಶುಕ್ರವಾರ ಬಿಡುಗಡೆ ಮಾಡಿದ ಮುಖಚಹರೆಗಳು ಯಾವುದೇ ಬಲ್ಲ ಉಗ್ರಗಾಮಿ ಗುಂಪಿಗೆ ಸೇರಿದ್ದೆಂದು ಪೋಲೀಸರು ಹೇಳಿಲ್ಲ. ಮುಖಚಹರೆಯಲ್ಲಿ ಇಬ್ಬರು ಶಂಕಿತರು ಮಧ್ಯವಯಸ್ಸಿನವರಾಗಿ ಕಂಡುಬಂದಿದ್ದು, ಒಬ್ಬನಿಗೆ ಮೀಸೆ, ಇನ್ನೊಬ್ಬನಿಗೆ ಗಡ್ಡವಿದೆ. ಮೂರನೇ ವ್ಯಕ್ತಿಗೆ ವಯಸ್ಸಾದವನಂತೆ ಕಾಣಿಸಿದ್ದಾನೆ.

ಟ್ಯಾಕ್ಸಿಯ ಚಾಲಕನೊಬ್ಬ ನೀಡಿದ ಮಾಹಿತಿಯ ಆಧಾರದ ಮೇಲೆ ಈ ಮುಖಚಹರೆಗಳನ್ನು ಪೊಲೀಸರು ಬಿಡುಗಡೆ ಮಾಡಿದ್ದಾರೆ. ಈ ಮೂವರನ್ನು ಚಾಲಕ ಮುಂಬೈನ ಜನಪ್ರಿಯ ಸಿದ್ದಿವಿನಾಯಕ ಮಂದಿರ, ಹಾಜಿ ಅಲಿ ಮತ್ತು ಮಹಿಮ್ ಮಸೀದಿಗೆ ಮತ್ತು ಎರಡು ಐಷಾರಾಮಿ ಹೊಟೆಲ್‌ಗಳಿಗೆ ಕರೆದೊಯ್ದಿದ್ದನೆಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.

ವೆಬ್ದುನಿಯಾವನ್ನು ಓದಿ