ಮುಂಬೈ ಗ್ಯಾಂಗ್‌ ರೇಪ್ ಆರೋಪಿಗಳಿಂದ ಕನಿಷ್ಠ 10 ಮಹಿಳೆಯರ ಮೇಲೆ ಅತ್ಯಾಚಾರ

ಸೋಮವಾರ, 31 ಮಾರ್ಚ್ 2014 (15:57 IST)
PTI
ಮುಂಬೈನ ಶಕ್ತಿ ಮಿಲ್‌ನಲ್ಲಿ ನಡೆದ ಗ್ಯಾಂಗ್‌ರೇಪ್ ಪ್ರಕರಣದ ಆರೋಪಿಗಳು ಕಳೆದ ಐದು ತಿಂಗಳ ಅವಧಿಯಲ್ಲಿ ಕನಿಷ್ಠ 10 ಮಂದಿ ಮಹಿಳೆಯರ ಮೇಲೆ ಅತ್ಯಾಚಾರವೆಸಗಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಇದೀಗ ಮತ್ತೊಬ್ಬ ಮಹಿಳೆ ತನ್ನ ಮೇಲೂ ಆರೋಪಿಗಳು ಅತ್ಯಾಚಾರವೆಸಗಿದ್ದಾರೆ ಎಂದು ಬಹಿರಂಗ ಹೇಳಿಕೆ ನೀಡಿದ್ದರಿಂದ ಮತ್ತೊಬ್ಬ ಆರೋಪಿಯನ್ನು ಬಂಧಿಸಲಾಗಿದೆ. ಇತರ ಅತ್ಯಾಚಾರಕ್ಕೊಳಗಾದ ಮಹಿಳೆಯರು ಹೇಳಿಕೆಗಳನ್ನು ನೀಡಲು ಮುಂದೆಬರುತ್ತಿಲ್ಲ ಎಂದು ಅಪರಾಧ ದಳದ ಪೊಲೀಸ್ ಅಧಿಕಾರಿಗಳು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.

ಪ್ರೇಮಿಗಳು ಎಕಾಂತವನ್ನು ಬಯಸಿ ಶಕ್ತಿ ಮಿಲ್‌ ಪ್ರವೇಶಿಸಿದ್ದಾಗ ಯುವಕನ ಮೇಲೆ ಹಲ್ಲೆ ನಡೆಸಿ ಯುವತಿಯ ಮೇಲೆ ಆರೋಪಿಗಳು ಅತ್ಯಾಚಾರವೆಸಗಿದ್ದಾರೆ. ಆದರೆ, ಅತ್ಯಾಚಾರಕ್ಕೊಳಗಾದ ಯುವತಿ ಪೊಲೀಸರಿಗೆ ದೂರ ನೀಡದಿರುವುದರಿಂದ ಆರೋಪಿಗಳಿಗೆ ಮತ್ತಷ್ಟು ಧೈರ್ಯ ಬಂದಂತಾಗಿದೆ. ಕೆಲ ವಾರಗಳ ನಂತರ ಮತ್ತೊಬ್ಬ ಮಹಿಳೆಯ ಮೇಲೆ ಅತ್ಯಾಚಾರವೆಸಗಿದ್ದಾರೆ. ಪತ್ರಕರ್ತೆಯನ್ನು ಅತ್ಯಾಚಾರವೆಸಗುವ ಮುನ್ನ ಲೈಂಗಿಕ ಕಾರ್ಯಕರ್ತೆಯ ಮೇಲೆ ಅತ್ಯಾಚಾರವೆಸಗಿ ಹಣ ಕೊಡದೆ ಪರಾರಿಯಾಗಿದ್ದಾರೆ.

ಗ್ಯಾಂಗ್‌ರೇಪ್‌ನ ಪ್ರಮುಖ ಆರೋಪಿ ಸಲೀಮ್ ಅನ್ಸಾರಿ ಪ್ರತಿಯೊಂದು ಅತ್ಯಾಚಾರ ಪ್ರಕರಣದಲ್ಲಿ ಬಾಗಿಯಾಗಿದ್ದಾನೆ. ಕಳೆದ ಮಾರ್ಚ್ ತಿಂಗಳಲ್ಲಿ ಮಹಿಳೆಯೊಬ್ಬಳು ಶಕ್ತಿ ಮಿಲ್‌ ಹತ್ತಿರದಲ್ಲಿರುವ ರೈಲ್ವೆ ಹಳಿಯನ್ನು ಪಾರು ಮಾಡುತ್ತಿರುವ ಸಂದರ್ಭದಲ್ಲಿ ಪೊಲೀಸರಂತೆ ನಟಿಸಿ ಆಕೆಯನ್ನು ಶಕ್ತಿ ಮಿಲ್‌ನೊಳಗೆ ಬಲವಂತವಾಗಿ ಕರೆದುಕೊಂಡು ಹೋಗಿ ಅತ್ಯಾಚಾರವೆಸಗಿದ್ದಾರೆ. ಕೆಲ ದಿನಗಳ ನಂತರ ಮತ್ತೊಬ್ಬ ಮಹಿಳೆಯ ಮೇಲೆ ಅತ್ಯಾಚಾರವಸೆಗಿದ್ದಾರೆ. ಎರಡು ಪ್ರಕರಣಗಳಲ್ಲಿ ಮಹಿಳೆಯರು ಪೊಲೀಸರಿಗೆ ದೂರು ನೀಡದಿದ್ದರಿಂದ ಆರೋಪಿಗಳಿಗೆ ವರದಾನವಾಗಿದೆ.

ಆರೋಪಿಗಳು ಪ್ರತಿಬಾರಿ ಪೊಲೀಸ್ ಅಧಿಕಾರಿ ಅಥವಾ ಸಿಐಡಿ ಅಧಿಕಾರಿಯಂತೆ ನಟಿಸಿ ಮಹಿಳೆಯರನ್ನು ಮಿಲ್‌ನಲ್ಲಿ ಕರೆದುಕೊಂಡು ಹೋಗಿ ಅತ್ಯಾಚಾರವೆಸಗುವ ಗುರಿಯನ್ನು ಹೊಂದಿದ್ದರು. ಯುವತಿಯೊಂದಿಗೆ ಯುವಕನಿದ್ದಲ್ಲಿ ಆತನ ಮೇಲೆ ಹಲ್ಲೆ ನಡೆಸಿ ನಂತರ ಕಟ್ಟಿ ಹಾಕುತ್ತಿದ್ದರು. ಅತ್ಯಾಚಾರಕ್ಕೊಳಗಾದ ಮಹಿಳೆಯ ನಗ್ನ ಫೋಟೋಗಳನ್ನು ತೆಗೆದುಕೊಂಡು ಬಾಯಿಬಿಟ್ಟಲ್ಲಿ ಫೋಟೋಗಳನ್ನು ಬಹಿರಂಗಪಡಿಸುವುದಾಗಿ ಬೆದರಿಕೆ ಹಾಕುತ್ತಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ವೆಬ್ದುನಿಯಾವನ್ನು ಓದಿ