ಮುಂಬೈ ದಾಳಿಗೆ ಸಿಕ್ಕ ಬ್ರಿಟಿಷ್ ಪ್ರಜೆಯಿಂದ ತಾಜ್ ಮಾಲೀಕರ ವಿರುದ್ಧ ದಾವೆ

ಬುಧವಾರ, 27 ನವೆಂಬರ್ 2013 (11:54 IST)
PR
PR
ಮುಂಬೈ: ಮಾರಕ ಮುಂಬೈ ಭಯೋತ್ಪಾದಕ ದಾಳಿಯಲ್ಲಿ ಸಿಲುಕಿ ಪಾರ್ಶ್ವವಾಯುವಿಗೆ ತುತ್ತಾದ ಬ್ರಿಟಿಷ್ ಪ್ರಜೆಯೊಬ್ಬರು ತಾಜಮಹಲ್ ಪ್ಯಾಲೆಸ್ ಹೊಟೆಲ್ ಮಾಲೀಕರ ವಿರುದ್ಧ ದಾವೆ ಹೂಡಿದ್ದಾರೆ. ಭಯೋತ್ಪಾದನೆ ದಾಳಿ ಸನ್ನಿಹಿತವಾಗಿರುವ ಬಗ್ಗೆ ಎಚ್ಚರಿಕೆಗಳನ್ನು ನೀಡಿದ್ದರೂ ಕಟ್ಟಡಕ್ಕೆ ಸೂಕ್ತ ಭದ್ರತೆ ಕಲ್ಪಿಸಲಿಲ್ಲ ಎಂದು ಅವರು ದಾವೆಯಲ್ಲಿ ಆರೋಪಿಸಿದ್ದಾರೆ. ಇಂಡಿಯನ್ ಹೋಟೆಲ್ಸ್ ಕಂಪನಿ ವಿರುದ್ದ ಲಂಡನ್ ಹೈಕೋರ್ಟ್‌ನಲ್ಲಿ ಹಾನಿ ಪರಿಹಾರಕ್ಕಾಗಿ ದಾವೆ ಹೂಡುತ್ತಿರುವುದಾಗಿ ವಿಲ್ ಪೈಕ್ ಪರ ವಕೀಲರು ಹೇಳಿದರು.

ಹೊಟೆಲ್‌ನೊಳಗೆ ಭಯೋತ್ಪಾದರು ಪ್ರವೇಶಿಸಿದಾಗ ಸಾವಿರಾರು ಅತಿಥಿಗಳು ವಾಸ್ತವ್ಯ ಹೂಡಿದ್ದರು. ಬಂದೂಕುಧಾರಿಗಳು ಮನಬಂದಂತೆ ಗುಂಡು ಹಾರಿಸಿ ಕೋಣೆಗಳಿಗೆ ಬೆಂಕಿ ಹಚ್ಚಿದ್ದರು. 2008ರಲ್ಲಿ ಸಿಎನ್‌ಎನ್ ಸಂದರ್ಶನದಲ್ಲಿ ಹೊಟೆಲ್ ಮೇಲೆ ಭಯೋತ್ಪಾದಕರ ದಾಳಿ ನಡೆಯುವ ಬಗ್ಗೆ ಎಚ್ಚರಿಕೆ ನೀಡಲಾಗಿತ್ತೆಂದು ಟಾಟಾ ಗ್ರೂಪ್ ಅಧ್ಯಕ್ಷರು ಸ್ವತಃ ದೃಢಪಡಿಸಿದ್ದಾಗಿ ಪೈಕ್ ವಕೀಲರು ಹೇಳಿದ್ದರು. ಈ ಮುನ್ನೆಚ್ಚರಿಕೆ ನೀಡಿದ್ದರೂ, ಅವರು ಭದ್ರತಾ ವ್ಯವಸ್ಥೆ ಕಲ್ಪಿಸಲಿಲ್ಲ ಎಂದು ಪೈಕ್ ಪರ ವಕೀಲರು ಆರೋಪಿಸಿದ್ದಾರೆ.
ಮುಂದಿನ ಪುಟದಲ್ಲಿ ಹೆಚ್ಚಿನ ಮಾಹಿತಿ

PR
PR
33 ವರ್ಷ ವಯಸ್ಸಿನ ಪೈಕ್ ಅವರು 2008 ನವೆಂಬರ್ 26ರಂದು ತಮ್ಮ ಸ್ನೇಹಿತೆಯ ಜತೆ ರಾತ್ರಿ ಕಳೆಯುತ್ತಿದ್ದಾಗ, ಇತರೆ ಕೋಣೆಗಳಿಂದ ಗುಂಡಿನ ಸದ್ದು ಕೇಳಿಸಿತು. ಕೆಳಗಿನ ಮಹಡಿಯಿಂದ ಹೊಗೆ ಆವರಿಸಿದ್ದು ಕಂಡುಬಂತು. ಕಿಟಕಿಯ ಮೂಲಕ ತಪ್ಪಿಸಿಕೊಳ್ಳಲು ಪ್ರಯತ್ನಿಸುವಾಗ ಪೈಕ್ ಮೂರನೇ ಮಹಡಿಯಿಂದ ಬಿದ್ದಿದ್ದರಿಂದ ಪಾರ್ಶ್ವವಾಯುವಿಗೆ ಗುರಿಯಾಗಿದ್ದರು.

ವೆಬ್ದುನಿಯಾವನ್ನು ಓದಿ