ಮುಂಬೈ ದಾಳಿ ತನಿಖೆಗೆ ದ್ವಿಸದಸ್ಯ ಸಮಿತಿ

ಶನಿವಾರ, 3 ಜನವರಿ 2009 (20:46 IST)
WD
ಕಳೆದ ನವಂಬರ್ 26ರಂದು ಮುಂಬೈಯಲ್ಲಿ ಉಗ್ರರು ನಡೆಸಿರುವ ನರಮೇಧದ ಕುರಿತು ತನಿಖೆ ನಡೆಸಲು ಉನ್ನತಮಟ್ಟದ ದ್ವಿಸದಸ್ಯ ಸಮಿತಿಯನ್ನು ನೇಮಿಸಲಾಗುವುದು ಎಂದು ಮಂಗಳವಾರ ಮಹಾರಾಷ್ಟ್ರ ಸರ್ಕಾರ ಘೋಷಿಸಿದೆ.

ನಾಗಾಲ್ಯಾಂಡ್ ರಾಜ್ಯಪಾಲ ಆರ್.ಡಿ.ಪ್ರಧಾನ್ ಅವರು ಸಮಿತಿಯ ನೇತೃತ್ವ ವಹಿಸಲಿದ್ದಾರೆ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಅಶೋಕ್ ಚೌವಾಣ್ ತಿಳಿಸಿದ್ದಾರೆ. ಅವರು ಈ ವಿಚಾರವನ್ನು ರಾಜ್ಯ ಶಾಸನಸಭೆಯಲ್ಲಿ ಘೋಷಿಸಿದ್ದಾರೆ.

ಮಾಜಿ ಐಪಿಎಸ್ ಅಧಿಕಾರಿ ವಿ.ಬಾಲಚಂದ್ರ ಅವರು ಸಮಿತಿಯ ಇನ್ನೋರ್ವ ಸದಸ್ಯರಾಗಿದ್ದಾರೆ. ಸಮಿತಿಯು ಎರಡು ತಿಂಗಳೊಳಗಾಗಿ ತನ್ನ ವರದಿ ಸಲ್ಲಿಸಬೇಕಿದೆ.

ಸಮಿತಿಯ ಸದಸ್ಯರಾಗಿರುವ ಬಾಲಚಂದ್ರ ಅವರಿಗೆ ರಾಜ್ಯಸಚಿವರ ಸ್ಥಾನಮಾನ ನೀಡಲಾಗುವುದು.

ವೆಬ್ದುನಿಯಾವನ್ನು ಓದಿ