ಮುಜಾಫರ್‌ ನಗರ ದಂಗೆ: ಮುಸ್ಲಿಮರಿಗೆ ಮಾತ್ರ ಯಾಕೆ ಪರಿಹಾರ? ಸರಕಾರದ ವಿರುದ್ಧ ಸುಪ್ರೀಂ ಕಿಡಿ

ಶುಕ್ರವಾರ, 22 ನವೆಂಬರ್ 2013 (13:58 IST)
PTI
ಮುಜಾಫರ್‌ದಂಗೆಯಲ್ಲಿ ಸಂತ್ರಸ್ಥರಾದ ಮುಸ್ಲಿಮ್ ಕುಟುಂಬಗಳಿಗೆ ಮಾತ್ರ ಉತ್ತರಪ್ರದೇಶ ಸರಕಾರ 5 ಲಕ್ಷ ರೂಪಾಯಿ ಪರಿಹಾರ ಘೋಷಿಸಿರುವುದು ಸರಿಯಲ್ಲ. ಗಲಭೆಯಲ್ಲಿ ಸಂತ್ರಸ್ಥರಾದ ಎಲ್ಲಾ ಸಮುದಾಯವರಿಗೂ ಪರಿಹಾರ ನೀಡಬೇಕು ಎಂದು ಅಖಿಲೇಶ್ ಸಿಂಗ್ ಸರಕಾರಕ್ಕೆ ಚಾಟಿ ಬೀಸಿದೆ.

ಸುಪ್ರೀಂಕೋರ್ಟ್‌ನ ಮುಖ್ಯನ್ಯಾಯಮೂರ್ತಿ ಪಿ.ಸದಾಶಿವನ್ ಮತ್ತು ನ್ಯಾಯಮೂರ್ತಿಗಳಾದ ರಂಜನಾ ದೇಸಾಯಿ ಮತ್ತು ರಂಜನ್ ಗಗೋಯಿ ನೇತೃತ್ವದ ಪೀಠ, ಜಾತಿ, ಧರ್ಮದ ಆಧಾರದ ಮೇಲೆ ಸಂತ್ರಸ್ಥರನ್ನು ವಿಭಜಿಸುವ ನಿರ್ಧಾರ ತಪ್ಪು.ಕೂಡಲೇ ಎಲ್ಲಾ ಸಮುದಾಯವರಿಗೆ ಪರಿಹಾರ ನೀಡಿ ಎಂದು ಆಕ್ರೋಶ ವ್ಯಕ್ತಪಡಿಸಿದೆ.

ಉತ್ತರಪ್ರದೇಶ ಸರಕಾರ ಕೇವಲ ಧರ್ಮದ ಆದಾರದ ಮೇಲೆ ಒಂದು ವರ್ಗದವರಿಗೆ ಪರಿಹಾರ ನೀಡಿ ಮತ್ತೊಂದು ಧರ್ಮದವರಿಗೆ ಅನ್ಯಾಯವೆಸಗುವುದರಿಂದ ಸಮುದಾಯವನ್ನು ಇಬ್ಬಾಗ ಮಾಡಿದಂತಾಗುತ್ತದೆ. ಸರಕಾರ ಹಾಗೇ ಮಾಡಲು ಕೋರ್ಟ್ ಬಿಡುವುದಿಲ್ಲ. ಪ್ರತಿಯೊಬ್ಬ ಸಂತ್ರಸ್ಥರಿಗೆ ಪರಿಹಾರ ದೊರೆಯುವವರೆಗೆ ಪ್ರಕರಣ ನೆನೆಗುದಿಯಲ್ಲಿರಲಿದೆ ಎಂದು ಸರಕಾರದ ಪರ ವಕೀಲರಿಗೆ ನ್ಯಾಯಾಧೀಶರು ತರಾಟೆಗೆ ತೆಗೆದುಕೊಂಡಿದ್ದಾರೆ.

ಗಲಭೆಯಲ್ಲಿ ಸಂತ್ರಸ್ಥಪೀಡಿತರಾದ ಮನೋಹರ್ ಲಾಲ್ ಶರ್ಮಾ ಸರಕಾರದ ಅಕ್ಟೋಬರ್ 26ರ ನೋಟಿಫಿಕೇಶನ್‌ ಬಗ್ಗೆ ಸುಪ್ರೀಂಕೋರ್ಟ್‌ನಲ್ಲಿ ಪ್ರಕರಣ ದಾಖಲಿಸಿ, ಮುಸ್ಲಿಮರು ಮತ್ತು ಪೊಲೀಸರು ಜಾಟ್ ಸಮುದಾಯದ ಜನರನ್ನು ಹಿಂಸಿಸುತ್ತಿದ್ದರೂ ಸರಕಾರ ಯಾವುದೇ ಕ್ರಮಕೈಗೊಳ್ಳುತ್ತಿಲ್ಲ. ಸಣ್ಣ ಘಟನೆಯೊಂದು ದಂಗೆಗೆ ಕಾರಣವಾಯಿತು. ಇದೀಗ ಸರಕಾರ ಮುಸ್ಲಿಮರಿಗೆ ಪರಿಹಾರ ನೀಡುತ್ತಿದ್ದು, ಇತರ ಧರ್ಮದವರಿಗೆ ಪರಿಹಾರ ನೀಡಲು ನಿರಾಕರಿಸುತ್ತಿದೆ ಎಂದು ದೂರಿನಲ್ಲಿ ದಾಖಲಿಸಿದ್ದರು.

ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ ಎಲ್ಲಾ ಸಮುದಾಯವರಿಗೆ ಪರಿಹಾರ ನೀಡಿ ನ್ಯಾಯಾಲಯಕ್ಕೆ ಸಂಪೂರ್ಣ ಮಾಹಿತಿ ನೀಡುವಂತೆ ಉತ್ತರಪ್ರದೇಶ ಸರಕಾರಕ್ಕೆ ಸುಪ್ರೀಂ ಕೋರ್ಟ್ ಆದೇಶ ನೀಡಿದೆ.

ವೆಬ್ದುನಿಯಾವನ್ನು ಓದಿ