ಮುಸ್ಲಿಂ ಮಹಿಳೆಯರು ಪತಿ ಕಾಣೆಯಾದ ನಾಲ್ಕು ವರ್ಷಗಳ ನಂತ್ರ ಪುನರ್‌ವಿವಾಹವಾಗಬಹುದಂತೆ

ಶುಕ್ರವಾರ, 27 ಡಿಸೆಂಬರ್ 2013 (17:45 IST)
PTI
ಜಮ್ಮು ಮತ್ತು ಕಾಶ್ಮೀರ ಸಂಘರ್ಷದಲ್ಲಿ ಕಾಣೆಯಾದ ವ್ಯಕ್ತಿಗಳ ಅರೆವಿಧುವೆಯರು ನಾಲ್ಕು ವರ್ಷಗಳ ನಿರೀಕ್ಷೆಯ ನಂತರ ಪುನರ್‌ವಿವಾಹವಾಗಬಹುದು ಎಂದು ಇಸ್ಲಾಮಿಕ್ ಪಂಡಿತರು ಸಲಹೆ ನೀಡಿದ್ದಾರೆ.

ನಾಗರಿಕ ಸಮಿತಿ ಸಂಸ್ಥೆ ಇಸ್ಲಾಮಿಕ್ ಪಂಡಿತರೊಂದಿಗೆ ಕಾಣೆಯಾದವರ ಪತ್ನಿಯರ ಬದುಕಿನ ಬಗ್ಗೆ ಸುದೀರ್ಘವಾಗಿ ನಡೆಸಿದ ಚರ್ಚೆಯಲ್ಲಿ ಸುಮಾರು 20 ವರ್ಷಗಳಿಂದ ನಡೆಯುತ್ತಿರುವ ಜಮ್ಮು ಮತ್ತು ಕಾಶ್ಮಿರದ ಹೋರಾಟದಲ್ಲಿ ನೂರಾರು ವ್ಯಕ್ತಿಗಳು ಕಾಣೆಯಾಗಿದ್ದಾರೆ. ಪತಿಯ ಸುಳಿವು ದೊರೆಯದಿದ್ದಲ್ಲಿ ನಾಲ್ಕು ವರ್ಷಗಳ ನಂತರ ಮಹಿಳೆ ಮತ್ತೊಂದು ಮದುವೆಯಾಗಬಹುದು ಎಂದು ಇಸ್ಲಾಮಿಕ್ ಪಂಡಿತರು ಫರ್ಮಾನ್ ಹೊರಡಿಸಿದ್ದಾರೆ.

ಪತಿ ಕಾಣೆಯಾದಾಗ ಆತನು ಬದುಕಿದ್ದಾನೋ ಅಥವಾ ಇಲ್ಲವೋ ಎನ್ನುವ ಅನುಮಾನದಿಂದಾಗಿ ಅಂತಹ ವ್ಯಕ್ತಿಗಳ ಪತ್ನಿಯರನ್ನು ಅರೆವಿಧುವೆಯರು ಎಂದು ಕರೆಯಲಾಗುತ್ತದೆ.

ಮುಸ್ಲಿಮರ ವಿವಾಹ ಕಾಯ್ದೆ ಪ್ರಕಾರ 1939ರ ಪ್ರಕಾರ, ಪತಿ ಕಾಣೆಯಾಗಿ ನಾಲ್ಕು ವರ್ಷಗಳ ನಂತರವೂ ಸುಳಿವು ದೊರೆಯದಿದ್ದಲ್ಲಿ ನಂತರ ಮಹಿಳೆ ಪುನರ್‌ವಿವಾಹವಾಗಬಹುದು ಎಂದು ಉಲ್ಲೇಖಿಸಲಾಗಿದೆ.

ಪತ್ನಿಗೂ ಕೆಲವೊಂದು ಕಾನೂನುಗಳನ್ನು ಅನ್ವಯಿಸುತ್ತವೆ. ಒಂದು ವೇಳೆ ಪತಿ ಎರಡು ವರ್ಷಗಳಿಂದ ನಿರ್ಲಕ್ಷಿಸುತ್ತಿರುವುದು ವೆಚ್ಚಕ್ಕಾಗಿ ಹಣ ನೀಡದಿರುವುದು ಅಥವಾ ಏಳು ವರ್ಷಗಳ ಜೈಲು ಶಿಕ್ಷೆ ಅನುಭವಿಸಿದಲ್ಲಿ ದಂಪತಿಗಳ ನಡುವಿನ ಮದುವೆ ಒಪ್ಪಂದ ಮೂರು ವರ್ಷಗಳ ನಂತರ ರದ್ದುಗೊಳಿಸಿ ಮತ್ತೊಂದು ವಿವಾಹವಾಗಬಹುದು.

ವೆಬ್ದುನಿಯಾವನ್ನು ಓದಿ