ಮುಸ್ಲಿಮರನ್ನು ನಾಯಿಕುನ್ನಿಗಳೆಂದು ಕರೆಯುವ ನಿಮ್ಮನ್ನು ನಂಬೋದಾದ್ರೂ ಹೇಗೆ: ಮೋದಿಗೆ ಆಜಂಖಾನ್

ಶುಕ್ರವಾರ, 22 ನವೆಂಬರ್ 2013 (13:29 IST)
PTI
2002ರಲ್ಲಿ ಗುಜರಾತ್‌ನಲ್ಲಿ ನಡೆದ ದಂಗೆಯಲ್ಲಿ ಮುಸ್ಲಿಮರನ್ನು ನಾಯಿ ಕುನ್ನಿಗಳೆಂದು ಕರೆದ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿಗೆ ಇದೀಗ ಮುಸ್ಲಿಮ್ ನಾಯಿಕುನ್ನಿಗಳ ಬೆಂಬಲ ಇದೀಗ ಬೇಕಾಯಿತೇ? ಇಂತಹ ರಾಜಕಾರಣಿಗಳ ವಿರುದ್ಧ ಅಲ್ಪಸಂಖ್ಯಾತರು ಎಚ್ಚರಿಕೆಯಿಂದ ಇರಬೇಕು ಎಂದು ಆಜಂಖಾನ್ ಕರೆ ನೀಡಿದ್ದಾರೆ.

ಮೋದಿ ಮುಸ್ಲಿಮರನ್ನು ನಾಯಿಕುನ್ನಿಗಳೆಂದು ಕರೆದಿದ್ದಾರೆ. ಯಾವುದೇ ಸರ್ವಾಧಿಕಾರಿಗೆ ನಮ್ಮನ್ನು ಅಪಮಾನಗೊಳಿಸುವ ಹಕ್ಕಿಲ್ಲ. ಯಾವ ಸಮುದಾಯವನ್ನು ನೀವು ನಾಯಿಕುನ್ನಿಗಳೆಂದು ಕರೆದಿದ್ದೀರಿ ಅವರು ನಿಮ್ಮ ಸಹೋದರರು. ಭಿನ್ನತೆ ಎಂದರೆ ನಾವು ಅಲ್ಪಸಂಖ್ಯಾತರು ನೀವು ಬಹು ಸಂಖ್ಯಾತರು ಅಷ್ಟೆ. ಮುಸ್ಲಿಮರನ್ನು ನಾಯಿಕುನ್ನಿಗಳೆಂದು ಕರೆಯುವ ನಿಮ್ಮನ್ನು ನಂಬೋದಾದ್ರೂ ಹೇಗೆ ಎಂದು ಪ್ರಶ್ನಿಸಿದ್ದಾರೆ.

ಮುಜಾಫರ್‌ ದಂಗೆಯಲ್ಲಿ ಆರೋಪಿಗಳಾದ ಇಬ್ಬರು ಶಾಸಕರಿಗೆ ಬಿಜೆಪಿ ಸನ್ಮಾನಿಸಿದ ಬೆನ್ನಲ್ಲೆ ಸಮಾಜವಾದಿ ಪಕ್ಷ ಮೋದಿಯವರನ್ನು ಟೀಕಿಸಿಲು ಮುಸ್ಲಿಂ ಮುಖಂಡ ಆಜಂ ಖಾನ್‌ರನ್ನು ಕಣಕ್ಕಿಳಿಸಿದೆ.

ಮಜಾಫರ್ ದಂಗೆಯಲ್ಲಿ ಸಾವಿರಾರು ಮುಸ್ಲಿಂ ಕುಟುಂಬಗಳು ಹತ್ಯೆಯಾಗಿ ಇಲ್ಲವೇ ನಿರಾಶ್ರಿತರಾಗಿ ವಲಸೆಹೋಗಿದ್ದರಿಂದ ರಾಜಕೀಯ ನಷ್ಟವನ್ನು ತುಂಬಿಸಿಕೊಳ್ಳಲು ಸಮಾಜವಾದಿ ಪಕ್ಷ ಆಜಂಖಾನ್‌ರನ್ನು ಮೋದಿ ವಿರುದ್ಧ ಛೂ ಬಿಟ್ಟಿದೆ.

ವೆಬ್ದುನಿಯಾವನ್ನು ಓದಿ