ಮುಸ್ಸಂಜೆಯಲ್ಲಿ ಗುಂಡಿನ ಗಮ್ಮತ್ತು: ಪ್ರಯಾಣಿಕರಿಗೆ ಆಪತ್ತು

ಮಂಗಳವಾರ, 30 ಜುಲೈ 2013 (17:44 IST)
PR
PR
ದೆಹಲಿ: ಇದೊಂದು ಅಶಿಸ್ತು ಮತ್ತು ಬೇಜವಾಬ್ದಾರಿಯ ಪರಮಾವಧಿ ಎನ್ನಬಹುದು. ಏರ್‌ಇಂಡಿಯಾ ಪ್ರಯಾಣಿಕರ ಜೀವವನ್ನು ಅಪಾಯಕ್ಕೊಡ್ಡಲು ಸಿದ್ಧವಾಗಿದ್ದನು. ಅದೃಷ್ಟವಶಾತ್ ಅವನನ್ನು ಸರಿಯಾದ ಸಮಯದಲ್ಲೇ ಹಿಡಿಯಲಾಯಿತು. ಏರ್‌ಇಂಡಿಯಾ ವಿಮಾನದಲ್ಲಿ ಭಯೋತ್ಪಾದಕ ಹೊಕ್ಕಿದ್ದಾನೆಂದು ನೀವು ಎಣಿಸಿದ್ದರೆ ಅದು ಸುಳ್ಳು. ಮುಂಬೈನಲ್ಲಿ ಏರ್ ಇಂಡಿಯಾದ ಹಿರಿಯ ಪೈಲಟ್ ಎರಡು ವಾರಗಳ ಹಿಂದೆ ಕುಡಿದ ಮತ್ತಿನಲ್ಲಿದ್ದಾಗ ವಶಪಡಿಸಿಕೊಳ್ಳಲಾಗಿತ್ತು.

ಅವನು ವಿಮಾನದ ಫ್ಲೈಟ್‌ಗೆ ಪೈಲಟ್ ಜವಾಬ್ದಾರಿ ನಿರ್ವಹಿಸಬೇಕಿತ್ತು. ಹಾಗೆ ಮಾಡಿದ್ದರೆ ನೂರಾರು ಜನರ ಜೀವವನ್ನು ಅಪಾಯಕ್ಕೆ ಒಡ್ಡುತ್ತಿದ್ದನೆಂಬುದರಲ್ಲಿ ಸಂಶಯವಿಲ್ಲ. ಏರ್‌ಲೈನ್ ಅಧಿಕಾರಿಗಳನ್ನು ಅಚ್ಚರಿಗೊಳಿಸಿದ ಸಂಗತಿಯೇನೆಂದರೆ ಪೈಲಟ್ ಸಂಜೆಯ ವಿಮಾನದ ಫ್ಲೈಟ್ ನಿರ್ವಹಿಸಬೇಕಿತ್ತು ಎನ್ನುವುದಾಗಿದೆ. ಸಾಮಾನ್ಯವಾಗಿ ಮುಂಜಾನೆಯ ಫ್ಲೈಟ್‌ಗಳಿಗೆ ಪೈಲಟ್‌ಗಳ ಆಲ್ಕೋಹಾಲ್ ಸೇವನೆಯಲ್ಲಿ ಪಾಸಿಟಿವ್ ಸಿಗುತ್ತಿತ್ತು. ಆದರೆ ಸಂಜೆಯ ಫ್ಲೈಟ್‌ನಲ್ಲಿ ಪೈಲಟ್ ಆಲ್ಕೋಹಾಲ್ ಸೇವನೆಗೆ ಸಿಕ್ಕಿಬಿದ್ದಿದ್ದಾನೆಂದರೆ ಬೇಜವಾಬ್ದಾರಿಯ ಪರಮಾವಧಿಯಲ್ಲದೇ ಮತ್ತೇನೂ ಅಲ್ಲ.

ವೆಬ್ದುನಿಯಾವನ್ನು ಓದಿ