ಮೂರು ವರ್ಷದಲ್ಲಿ 23 ಮಹಿಳೆಯರ ಮೇಲೆ ಅತ್ಯಾಚಾರವೆಸಗಿದ ಗ್ಯಾಂಗ್‌ ಪೊಲೀಸ್ ವಶಕ್ಕೆ

ಶುಕ್ರವಾರ, 17 ಜನವರಿ 2014 (15:35 IST)
ಕಳೆದ ಮೂರು ವರ್ಷಗಳ ಅವಧಿಯಲ್ಲಿ 23 ಮಹಿಳೆಯರ ಮೇಲೆ ಅತ್ಯಾಚಾರವೆಸಗಿದ್ದ ಅಂತರ್ ರಾಜ್ಯ ಆರೋಪಿಗಳ ಗ್ಯಾಂಗ್‌‌ನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.ಗ್ಯಾಂಗ್‌ನಲ್ಲಿ ಸೇನಾಪಡೆಯ ಯೋಧನೊಬ್ಬನಿದ್ದು, ರಜೆಯ ಮೇಲೆ ಮನೆಗೆ ಬಂದಾಗ ಅತ್ಯಾಚಾರ ಘಟನೆಗಳಲ್ಲಿ ಭಾಗಿಯಾಗುತ್ತಿದ್ದನು ಎಂದು ಪೊಲೀಸರು ತಿಳಿಸಿದ್ದಾರೆ.

ಪಾಲಮ್‌ನೇರ್ ಅರಣ್ಯ ಇಲಾಖೆ ವಿಭಾಗದಲ್ಲಿ ಪೇದೆಗಳಾಗಿ ಕಾರ್ಯನಿರ್ವಹಿಸುತ್ತಿದ್ದ ಜವಾಹರ್‌ಲಾಲ್ ನಾಯಕ್ ಮತ್ತು ಜಿ.ದೇವೇಂದ್ರ ಅವರ ಹತ್ಯೆಗೆ ಸಂಬಂಧಿಸಿದಂತೆ ಶಂಕಿತ ಆರೋಪಿಗಳ ವಿಚಾರಣೆ ನಡೆಸಲು ತೆರಳಿದಾಗ ಪ್ರತ್ಯಕ್ಷದರ್ಶಿಯೊಬ್ಬರು ಕೆಲ ವ್ಯಕ್ತಿಗಳು ಯುವತಿಯನ್ನು ಹೂತುಹಾಕಿರುವುದನ್ನು ನೋಡಿರುವುದಾಗಿ ಮಾಹಿತಿ ನೀಡಿದ್ದರು.

ಘಟನಾ ಸ್ಥಳದ ತಪಾಸಣೆ ನಡೆಸಿದಾಗ ಹತ್ಯೆಗಿಡಾದ ಪೇದೆಯ ದ್ವಿಚಕ್ರ ವಾಹನ ಪತ್ತೆಯಾಗಿತ್ತು. ಇಂದು ಬೆಳಿಗ್ಗೆ ಪೊಲೀಸರು ಸಂಶಯದ ಆರೋಪದ ಮೇಲೆ ವಿ.ಮಣಿಕಂಠ ಅಲಿಯಾಸ್ ಸಂಪತ್‌ನನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದಾಗ ಆಘಾತಕಾರಿ ಅತ್ಯಾಚಾರದ ಘಟನೆಗಳು ಬಹಿರಂಗವಾಗಿವೆ. ಆರೋಪಿ ನೀಡಿದ ಸುಳಿವಿನ ಮೇರೆಗೆ ಗ್ಯಾಂಗ್‌ನ ಇತರ ಸದಸ್ಯರನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದಾಗ ಸಂಪೂರ್ಣ ಮಾಹಿತಿ ಬಹಿರಂಗವಾಗಿದೆ.

ಚಿತ್ತೂರ್ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿ ಎಚ್‌.ರಾಮಕೃಷ್ಣ ಅವರ ಪ್ರಕಾರ, ಆರೋಪಿಗಳ ಗ್ಯಾಂಗ್‌ ಆಂಧ್ರಪ್ರದೇಶದ ಚಿತ್ತೂರ್ ಜಿಲ್ಲೆ, ಕರ್ನಾಟಕ ರಾಜ್ಯದ ಕೋಲಾರ್ ಗೋಲ್ಡ್ ಫೀಲ್ಡ್ ಮತ್ತು ತಮಿಳುನಾಡಿನ ಸೇಲಂ ಜಿಲ್ಲೆಯಲ್ಲಿ ಮಹಿಳೆಯರ ಮೇಲೆ ಅತ್ಯಾಚಾರವೆಸಗುತ್ತಿದ್ದರು ಎಂದು ತಿಳಿಸಿದ್ದಾರೆ.

ವೆಬ್ದುನಿಯಾವನ್ನು ಓದಿ