ಮೊಮ್ಮಗಳ ಮೇಲೆ ಅತ್ಯಾಚಾರವೆಸಗಿದ ಮುದಿ ಕಾಮ ಪಿಶಾಚಿ ಅರೆಸ್ಟ್

ಬುಧವಾರ, 2 ಏಪ್ರಿಲ್ 2014 (15:01 IST)
ಐವರು ಪುತ್ರಿಯರ ಮೇಲೆ ಅತ್ಯಾಚಾರವೆಸಗಿದ್ದಲ್ಲದೇ ಮೊಮ್ಮಗಳ ಮೇಲೂ ಅತ್ಯಾಚಾರವೆಸಗಿದ 65 ವರ್ಷ ವಯಸ್ಸಿನ ಮುದಿ ಕಾಮಪಿಶಾಚಿಯನ್ನು ಪೊಲೀಸರು ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ. ಆತನ ಕೃತ್ಯಕ್ಕೆ ಪತ್ನಿಯೇ ಸಾಥ್ ನೀಡಿರುವುದು ಅಚ್ಚರಿಯ ಸಂಗತಿಯಾಗಿದೆ.

ನಗರದ ಭಯಾನಾ ಪ್ರದೇಶದಲ್ಲಿ ವಾಸಿಸುತ್ತಿರುವ ಆರೋಪಿ ತನ್ನ ಐವರು ಪುತ್ರಿಯರ ಮೇಲೆ ಕಳೆದ ಕೆಲ ವರ್ಷಗಳವರೆಗೆ ನಿರಂತರ ಅತ್ಯಾಚಾರವೆಸಗಿದ್ದ. ಹಲವಾರು ಬಾರಿ ಅಬಾರ್ಷನ್ ಕೂಡಾ ಮಾಡಿಸಿದ್ದನು ಎಂದು ಪುತ್ರಿಯೇ ತಂದೆಯ ಮೇಲೆ ಪೊಲೀಸರಿಗೆ ದೂರು ನೀಡಿದ್ದಾಳೆ.

ಪುತ್ರಿಯರನ್ನು ವಿವಾಹವಾಗುವವರೆಗೆ ಲೈಂಗಿಕ ಕೃತ್ಯಕ್ಕೆ ಬಳಿಸಿಕೊಂಡಿದ್ದಲ್ಲದೇ ಇದೀಗ ಮೊಮ್ಮಗಳನ್ನೇ ಕಾಮತೃಷೆಗೆ ಬಳಿಸಿಕೊಂಡಿರುವುದು ಬಹಿರಂಗವಾಗಿದೆ.

ಅಚ್ಚರಿಯ ವಿಷಯವೆಂದರೆ ಆರೋಪಿಗೆ ಆತನ ಪತ್ನಿಯೇ ಸಾಥ್ ನೀಡಿರುವುದು ಜನತೆಯನ್ನು ತಲ್ಲಣಗೊಳಿಸಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ವೆಬ್ದುನಿಯಾವನ್ನು ಓದಿ