ಮೊಯ್ಲಿ ಕಾರ್ಪೊರೇಟ್ ಕಪ್ಪುಚುಕ್ಕೆ ಎಂದು ಕರೆದ ಮಹೇಶ್ ಭಟ್

ಶನಿವಾರ, 1 ಮಾರ್ಚ್ 2014 (18:48 IST)
PR
PR
ನವದೆಹಲಿ: ಬಾಲಿವುಡ್ ಚಿತ್ರನಿರ್ಮಾಪಕ ಮಹೇಶ್ ಭಟ್ ಅವರು ಕೇಂದ್ರ ಪರಿಸರ ಮತ್ತು ಅರಣ್ಯ ಸಚಿವ ವೀರಪ್ಪ ಮೊಯ್ಲಿ ಅವರನ್ನು ಕಾರ್ಪೊರೇಟ್ ಕಪ್ಪು ಚುಕ್ಕೆ ಎಂದು ಕರೆದಿದ್ದಾರೆ.ತಮ್ಮ ಪೂರ್ವಾಧಿಕಾರಿ ಜಯಂತಿ ನಟರಾಜನ್ ನಿರ್ಧಾರವನ್ನು ಬದಲಿಸಿ 200 ವಿಧಗಳ ಕುಲಾಂತರಿ ತಳಿ ಬೀಜಗಳ ಕ್ಷೇತ್ರ ಪರೀಕ್ಷೆಗಳಿಗೆ ಮೊಯ್ಲಿ ಅವಕಾಶ ನೀಡಿದ್ದರಿಂದ ಭಟ್ ಟ್ವಿಟರ್‌ನಲ್ಲಿ ಸಚಿವರ ನಿರ್ಧಾರವನ್ನು ಪ್ರಶ್ನಿಸಿದ್ದಾರೆ. ಮೊಯ್ಲಿ ಕಾರ್ಪೊರೇಟ್ ಕಪ್ಪು ಚುಕ್ಕೆ. ಭಾರತ 260 ದಶಲಕ್ಷ ಟನ್ ಆಹಾರ ಧಾನ್ಯಗಳನ್ನು ಉತ್ಪಾದಿಸುವಾಗ ಅದಕ್ಕೆ ಕುಲಾಂತರಿ ತಳಿ ಬೆಳೆಗಳು ಏಕೆ ಬೇಕು ಎಂಬ ಬಗ್ಗೆ ಮೊಯ್ಲಿ ವಿವರಣೆ ನೀಡಬೇಕು ಎಂದು ಭಟ್ ಹೇಳಿದ್ದಾರೆ.

ಕುಲಾಂತರಿ ತಳಿ ಬೆಳೆಯ ವಿರೋಧಿ ನಿಲುವನ್ನು ಹೊಂದಿರುವ ಭಟ್, ಮಾನವ ಆರೋಗ್ಯವನ್ನು ಬಲಿಕೊಟ್ಟು ಕುಲಾಂತರಿ ಬೆಳೆಯ ಉತ್ಪಾದನೆಯನ್ನು ವಾಸ್ತವ ರೂಪಕ್ಕೆ ತರುವ ಬಹುರಾಷ್ಟ್ರೀಯ ಬೀಜ ಕಂಪೆನಿಗಳನ್ನು ಅವರು ಟೀಕಿಸಿದರು. ಲಾಭದ ಹಸಿವಿನಿಂದ ಕೂಡಿರುವ ಉದ್ಯಮಗಳು ಮಾನವಜನಾಂಗದ ವಿರುದ್ಧ ವಿಜ್ಞಾನವನ್ನು ತಿರುಗಿಸುತ್ತಿವೆ ಎಂದು ಆರೋಪಿಸಿದರು.

ವೆಬ್ದುನಿಯಾವನ್ನು ಓದಿ