ಮೋದಿಗಿಂತ ನಿತೀಶ್ ಉತ್ತಮ ಪ್ರಧಾನಿ: ಬಿಜೆಪಿ ಶಾಸಕ

ಬುಧವಾರ, 14 ಆಗಸ್ಟ್ 2013 (18:42 IST)
PTI
ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿಯವರಿಗಿಂತ ಬಿಹಾರ್ ಮುಖ್ಯಮಂತ್ರಿ ನಿತೀಶ್ ಕುಮಾರ್ ಉತ್ತಮ ಪ್ರಧಾನಿಯಾಗಲಿದ್ದಾರೆ. ಬಿಜೆಪಿ ಮತ್ತು ಜೆಡಿಯು ಮೈತ್ರಿ ಕಡಿತಕ್ಕೆ ಬಿಜೆಪಿ ಪಕ್ಷವೇ ಕಾರಣ ಎಂದು ಬಿಜೆಪಿ ಶಾಸಕ ಹೇಳಿಕೆ ನೀಡುವುದರೊಂದಿಗೆ ಪಕ್ಷದಲ್ಲಿನ ಅಂತರಿಕ ಬಿಕ್ಕಟ್ಟು ಬಹಿರಂಗವಾಗಿದೆ.

ಸಮಸ್ಠಿಪುರ ಜಿಲ್ಲೆಯ ಮೊಹಿಉದ್ದಿನಗರ್ ಕ್ಷೇತ್ರದ ಶಾಸಕರಾದ ರಾಣಾ ಗಂಗೇಶ್ವರ್ ಮುಖ್ಯಮಂತ್ರಿ ನಿತೀಶ್ ಕುಮಾರ್ ಅಧ್ಯಕ್ಷತೆವಹಿಸಿದ್ದ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಭಾಗವಹಿಸಿದ್ದರು.

ವೆಬ್ದುನಿಯಾವನ್ನು ಓದಿ