ಮೋದಿ ಬಗ್ಗೆ ತಮಿಳುನಾಡಿನಲ್ಲಿ ಯಾರಿಗೆ ಗೊತ್ತಿದೆ: ಚಿದಂಬರಂ ಅಪಹಾಸ್ಯ

ಬುಧವಾರ, 19 ಮಾರ್ಚ್ 2014 (13:02 IST)
PR
PR
ಚೆನ್ನೈ: ವಾರಾಣಸಿ ಕ್ಷೇತ್ರದಲ್ಲಿ ಮೋದಿ ವಿರುದ್ಧ ಪ್ರಬಲ ಅಭ್ಯರ್ಥಿಯನ್ನು ನಿಲ್ಲಿಸುವುದಾಗಿ ವಿತ್ತಸಚಿವ ಚಿದಂಬರಂ ಹೇಳಿದರು. ವಾರಾಣಸಿಯಲ್ಲಿ ಎಎಪಿ ಮುಖಂಡ ಕೇಜ್ರಿವಾಲ್ ಕೂಡ ಕಣಕ್ಕಿಳಿಯುವ ನಿರೀಕ್ಷೆಯಿದೆ.ವಾರಾಣಸಿ ಸೇರಿದಂತೆ ಎರಡು ಸೀಟುಗಳಲ್ಲಿ ಕಣಕ್ಕಿಳಿಯಲು ನಿರ್ಧರಿಸಿದ ಮೋದಿಯನ್ನು ಅಪಹಾಸ್ಯ ಮಾಡಿದ ಚಿದಂಬರಂ ಬಹುಶಃ ಅವರಲ್ಲಿ ಅಭ್ಯರ್ಥಿಗಳ ಕೊರತೆ ಇರಬಹುದು ಎಂದು ನುಡಿದರು. ಮೋದಿಯ ಕೃತಕ ಅಲೆಯನ್ನು ಸೃಷ್ಟಿಸಿರುವ ಬಿಜೆಪಿ ವಿರುದ್ಧ ಕೇಂದ್ರ ವಿತ್ತ ಸಚಿವ ಚಿದಂಬರಂ ಟೀಕಾಪ್ರವಾಹ ಮಾಡಿದರು. ಮೋದಿಯ ಬಗ್ಗೆ ತಮಿಳುನಾಡಿನಲ್ಲಿ ಯಾರಿಗೆ ಗೊತ್ತಿದೆ, ಮೋದಿಯನ್ನು ಕುರಿತು ಯಾರಿಗೂ ಭಯವಿಲ್ಲ ಎಂದು ಹೇಳಿದರು.

ಹಿರಿಯ ಕಾಂಗ್ರೆಸ್ ಮುಖಂಡರು ಸ್ಪರ್ಧೆಯಿಂದ ಹಿಂದೆ ಸರಿಯುತ್ತಿದ್ದಾರೆಂಬ ಅರುಣ್ ಜೇಟ್ಲಿ ಹೇಳಿಕೆಯನ್ನು ಚಿದಂಬರಂ ಟೀಕಿಸಿದರು.ಅರುಣ್ ಜೇಟ್ಲಿ ತಮ್ಮ 62ನೇ ವರ್ಷದಲ್ಲಿ ಮೊದಲ ಬಾರಿಗೆ ಚುನಾವಣೆ ಕಣಕ್ಕೆ ಇಳಿದಿದ್ದಾರೆ. ನಾನು ಕಳೆದ 30 ವರ್ಷಗಳಿಂದ ಸ್ಪರ್ಧಿಸಿದ್ದೇನೆ ಎಂದು ಹೇಳಿದರು.ಲೋಕಸಭೆ ಚುನಾವಣೆಯಲ್ಲಿ ಹೋರಾಡಲು ತಮಿಳುನಾಡಿನಲ್ಲಿ ಯಾವುದೇ ಮಿತ್ರಪಕ್ಷ ಸಿಗದೇ ಪಕ್ಷವನ್ನು ಬದಿಗೆ ಸರಿಸಲಾಗುತ್ತಿದೆಯೇ ಎಂಬ ಪ್ರಶ್ನೆಗೆ, ಡಿಎಂಕೆ ಜತೆ ಯಾವುದೇ ರಾಷ್ಟ್ರೀಯ ಪಕ್ಷ ಹೊಂದಾಣಿಕೆ ಮಾಡಿಕೊಂಡಿಲ್ಲ ಎಂದರು.

ವೆಬ್ದುನಿಯಾವನ್ನು ಓದಿ