ಮೋದಿ, ರಾಹುಲ್ ಇಬ್ಬರೂ ಪ್ರಧಾನಿ ಹುದ್ದೆಗೆ ಯೋಗ್ಯರಲ್ಲ: ಹಜಾರೆ

ಶುಕ್ರವಾರ, 26 ಜುಲೈ 2013 (17:54 IST)
PTI
PTI
ಫರೂಕಾಬಾದ್: ಪ್ರಧಾನಮಂತ್ರಿ ಹುದ್ದೆಗೆ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಮತ್ತು ರಾಹುಲ್ ಗಾಂಧಿ ಇಬ್ಬರೂ ಅನರ್ಹರು. ಗೌರವಾನ್ವಿತ ಪ್ರಧಾನಿ ಹುದ್ದೆಯನ್ನು ಅಲಂಕರಿಸುವ ಯೋಗ್ಯತೆ ಅವರಿಬ್ಬರಿಗೂ ಇಲ್ಲ ಎಂದು ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ ಶುಕ್ರವಾರ ಪ್ರತಿಕ್ರಿಯಿಸಿದ್ದಾರೆ. ಕಳೆದ 10 ವರ್ಷಗಳಿಂದ ಗುಜರಾತಿನ ಮುಖ್ಯಮಂತ್ರಿಯಾಗಿರುವ ನರೇಂದ್ರ ಮೋದಿ ಗುಜರಾತಿನಲ್ಲಿ ಲೋಕಾಯುಕ್ತ ಸ್ಥಾಪನೆಗೆ ಅಡೆತಡೆಗಳನ್ನು ಉಂಟುಮಾಡಿದರು.

ಇದರಿಂದ ಭ್ರಷ್ಟಾಚಾರ ನಿವಾರಣೆಗೆ ಓಂಬಡ್ಸ್‌ಮನ್ ನೇಮಕ ಅಗತ್ಯವಿಲ್ಲ ಎನ್ನುವ ಅಭಿಪ್ರಾಯಕ್ಕೆ ಅವರು ಒತ್ತು ನೀಡಿದ್ದಕ್ಕೆ ಸಾಕ್ಷಿಯೊದಗಿಸುತ್ತದೆ. ಇನ್ನು ರಾಹುಲ್ ಗಾಂಧಿ ಪ್ರಧಾನಮಂತ್ರಿ ಹುದ್ದೆಗೆ ಸೂಕ್ತ ಅಭ್ಯರ್ಥಿಯಲ್ಲ ಎಂದು ಹಜಾರೆ ಪ್ರತಿಕ್ರಿಯಿಸಿದರು. ಭ್ರಷ್ಟಾಚಾರ ಮತ್ತು ಕುಕೃತ್ಯಗಳು ದೇಶದಲ್ಲಿ ಪಕ್ಷ ರಾಜಕೀಯದ ಫಲವಾಗಿದೆ. ತಮ್ಮ ಜನಕ್ರಾಂತಿ ಮೋರ್ಚಾ 6 ಕೋಟಿ ನಿಷ್ಠ ಕಾರ್ಯಕರ್ತರನ್ನು ಒಟ್ಟುಗೂಡಿಸಿ ಡಿಸೆಂಬರ್‌ನಲ್ಲಿ ದೆಹಲಿಯ ಜಂತರ್‌ಮಂತರ್‌ನಲ್ಲಿ ಜನ ಲೋಕಪಾಲ ಮಸೂದೆ ಜಾರಿಗೆ ಹೋರಾಟದ ಎರಡನೇ ಇನ್ನಿಂಗ್ಸ್ ಆರಂಭಿಸುವುದಾಗಿ ಹಜಾರೆ ತಿಳಿಸಿದರು.

ಬಡತನದ ಮಾನದಂಡಗಳನ್ನು ಕುರಿತು ಪ್ರಶ್ನೆಗೆ ಉತ್ತರಿಸಿದ ಹಜಾರೆ, ಹವಾನಿಯಂತ್ರಿತ ಕೊಠಡಿಗಳಲ್ಲಿ ಕುಳಿತು ಬಡತನವನ್ನು ಸರಿಯಾಗಿ ಮೌಲ್ಯಮಾಪನ ಮಾಡಲು ಸಾಧ್ಯವಿಲ್ಲ. 33 ರೂ.ಗಳಲ್ಲಿ ಒಬ್ಬ ವ್ಯಕ್ತಿಗೆ ಊಟ ಒದಗಿಸುವುದು ಸಾಧ್ಯವಿಲ್ಲ ಎಂದು ಹೇಳಿದರು.

ವೆಬ್ದುನಿಯಾವನ್ನು ಓದಿ