ಮೋದಿ ಸಭೆಗೆ ಬುರ್ಖಾಧಾರಿ ಮಹಿಳೆಯರು: ಬಿಜೆಪಿ ವಿರುದ್ಧವೇ ಗುಡುಗಿದ ಶಿವಸೇನೆ

ಬುಧವಾರ, 6 ನವೆಂಬರ್ 2013 (18:24 IST)
PTI
ಮುಸ್ಲಿಮರನ್ನು ಓಲೈಸುವಲ್ಲಿ ಆತುರ ತೋರುತ್ತಿರುವುದಲ್ಲದೇ ಬಿಜೆಪಿ ಸಭೆಗಳಿಗೆ ಬರ್ಖಾಧಾರಿ ಮಹಿಳೆಯರನ್ನು ಹೆಚ್ಚಿನ ಸಂಖ್ಯೆಯಲ್ಲಿ ಸೇರ್ಪಡೆಗೊಳಿಸುವ ಬಗ್ಗೆ ಬಿಜೆಪಿ ಫ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಆ ತುರ ತೋರುತ್ತಿದ್ದಾರೆ ಎಂದು ಬಿಜೆಪಿ ಮಿತ್ರಪಕ್ಷ ಶಿವನೇಸೆ ಟೀಕಿಸಿದೆ.

ಕೇವಲ ಅಧಿಕಾರ ಪಡೆಯುವ ಉದ್ದೇಶದಿಂದ ಅಯೋಧ್ಯೆ ರಾಮಮಂದಿರ ನಿರ್ಮಾಣ ಮತ್ತು ನಾಗರಿಕ ಧಿರಿಸು ಸಂಹಿತೆಯಂತಹ ವಿಷಯಗಳನ್ನು ಬಿಜೆಪಿ ಮರೆತಿದೆ ಎಂದು ಶಿವಸೇನೆಯ ಮುಖವಾಣಿ ಸಾಮ್ನಾ ಪತ್ರಿಕೆಯಲ್ಲಿ ತರಾಟೆಗೆ ತೆಗೆದುಕೊಳ್ಳಲಾಗಿದೆ..

ಮೋದಿಯವರ ಸಾರ್ವಜನಿಕ ಸಭೆಯಲ್ಲಿ ಬುರ್ಖಾಧಾರಿ ಮಹಿಳೆಯರನ್ನು ಕರೆತರಲು ವಿಶೇಷ ಪ್ರಯತ್ನ ಮಾಡಲಾಗುತ್ತಿದೆ. ಮೋದಿಯವರು ಕಾಂಗ್ರೆಸ್ ಪಕ್ಷವನ್ನು ವಿರೋಧಿಸುವ ಬದಲು ಅಲ್ಪಸಂಖ್ಯಾತರಿಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.

ಕಳೆದ 2002ರಲ್ಲಿ ಗುಜರಾತ್‌ ದಂಗೆಯಿಂದಾಗಿ ಮುಸ್ಲಿಮರ ವಿರೋಧ ಕಟ್ಟಿಕೊಂಡ ನರೇಂದ್ರ ಮೋದಿ, ಇದೀಗ ಲೋಕಸಭೆ ಚುನಾವಣೆಯಲ್ಲಿ ಮುಸ್ಲಿಮರ ಮತ ಪಡೆಯಲು ಅವರ ಓಲೈಕೆಗೆ ಮುಂದಾಗಿದ್ದಾರೆ ಎಂದು ಶಿವಸೇನೆ ಗುಡುಗಿದೆ.

ವೆಬ್ದುನಿಯಾವನ್ನು ಓದಿ