ಯಾವುದೇ ತಪ್ಪಿಗೆ ಕ್ಷಮೆಯಾಚಿಸ್ತೇವೆ, ಬಿಜೆಪಿಗೆ ಒಂದು ಚಾನ್ಸ್ ಕೊಡಿ: ರಾಜನಾಥ್ ಸಿಂಗ್

ಬುಧವಾರ, 26 ಫೆಬ್ರವರಿ 2014 (11:55 IST)
PR
PR
ನವದೆಹಲಿ: ಕಳೆದ ವರ್ಷ ನರೇಂದ್ರ ಮೋದಿ 2002ರ ಗುಜರಾತ್ ಗಲಭೆ ನಡೆದ ಬಗ್ಗೆ ವಿಷಾದ ಸೂಚಿಸುವುದಾಗಿ ತಿಳಿಸಿದ್ದರು. ರಾಷ್ಟ್ರೀಯ ಚುನಾವಣೆ ಮೂರು ತಿಂಗಳು ಬಾಕಿಇರುವಾಗ, ಬಿಜೆಪಿ ಪಕ್ಷ ಇನ್ನೊಂದು ಹೆಜ್ಜೆ ಮುಂದೆ ಹೋಗಿ ಯಾವುದೇ ತಪ್ಪಿಗಾಗಿ ಕ್ಷಮೆಯಾಚಿಸುವುದಾಗಿ ತಿಳಿಸಿದ್ದು, ಪಕ್ಷಕ್ಕೆ ಒಂದು ಅವಕಾಶ ನೀಡಿ ಎಂದು ಮುಸ್ಲಿಮರಿಗೆ ಮನವಿ ಮಾಡಿದೆ. ಯಾವುದೇ ತಪ್ಪು ಸಂಭವಿಸಿದ್ದರೆ, ನಾವು ತಲೆಬಾಗಿ ಕ್ಷಮೆ ಯಾಚಿಸುತ್ತೇವೆ. ಕಾಂಗ್ರೆಸ್ ಮತ್ತು ಇತರ ಪಕ್ಷಗಳ ಅಪಪ್ರಚಾರಕ್ಕೆ ಕಿವಿಗೊಡಬೇಡಿ ಎಂದು ಬಿಜೆಪಿ ಅಧ್ಯಕ್ಷ ರಾಜನಾಥ್ ಸಿಂಗ್ ಮುಸ್ಲಿಮರಿಗೆ ಮನವಿ ಮಾಡಿದರು.ನಮಗೆ ಒಂದು ಬಾರಿ ಮತ ನೀಡಿ ಪ್ರಯತ್ನಿಸಿ, ನಿಮ್ಮ ನಿರೀಕ್ಷೆಗೆ ತಕ್ಕಂತೆ ನಾವು ಕಾರ್ಯನಿರ್ವಹಿಸದಿದ್ದರೆ ನಮ್ಮ ಕಡೆ ತಿರುಗಿ ನೋಡಬೇಡಿ ಎಂದು ರಾಜನಾಥ್ ಸಿಂಗ್ ಹೇಳಿದರು.

ಗುಜರಾತಿನ ಕೋಮುಗಲಭೆಯ ಬಗ್ಗೆ ಯಾವುದೇ ಪ್ರಸ್ತಾಪವನ್ನು ಅವರು ಮಾಡಲಿಲ್ಲ.ಅವರ ಪ್ರತಿಕ್ರಿಯೆ ಅಲ್ಪಸಂಖ್ಯಾತ ಮತದಾರರನ್ನು ಸೆಳೆಯಲು ಬಿಜೆಪಿ ಮಾರ್ಗೋಪಾಯಗಳನ್ನು ಶೋಧಿಸುತ್ತಿರುವ ಲಕ್ಷಣವಾಗಿದೆ. ತಮ್ಮ ಪ್ರಚಾರದ ಸಂದರ್ಭದಲ್ಲಿ ಅಭಿವೃದ್ಧಿ ಮಂತ್ರದ ಕಡೆ ಗಮನಹರಿಸಿರುವ ಮೋದಿ ಈ ಸಮಾರಂಭದಲ್ಲಿ ಹಾಜರಿರಲಿಲ್ಲ. ಅಲ್ಪಸಂಖ್ಯಾತರಿಗೆ ಬಿಜೆಪಿ ಬಗ್ಗೆ ಭಯದ ವಾತಾವರಣ ಸೃಷ್ಟಿಸುವುದಕ್ಕೆ ಸಂಘಟಿತ ಪ್ರಚಾರ ನಡೆಯುತ್ತಿದೆ ಎಂದು ಜೇಟ್ಲಿ ತಮ್ಮ ಬ್ಲಾಗ್‌ನಲ್ಲಿ ತಿಳಿಸಿದ್ದಾರೆ.

ವೆಬ್ದುನಿಯಾವನ್ನು ಓದಿ