ಯಾವ ಸರಕಾರಕ್ಕೂ ಸಿಬಿಐಗೆ ಸ್ವಾಯತ್ತತೆ ನೀಡುವುದು ಬೇಕಾಗಿಲ್ಲ: ಸಿಬಿಐ

ಮಂಗಳವಾರ, 29 ಅಕ್ಟೋಬರ್ 2013 (17:03 IST)
PTI
ಕೇಂದ್ರ ತನಿಖಾ ದಳ ಸಂಸ್ಥೆಗೆ ಸ್ವಾಯತ್ತತೆ ನೀಡುವುದು ಯಾವ ಸರಕಾರಕ್ಕೂ ಬೇಕಾಗಿಲ್ಲ ಎಂದು ಸಿಬಿಐ ಪರ ವಕೀಲರು ನ್ಯಾಯಾಲಯದ ಮುಂದೆ ಸತ್ಯವನ್ನು ಬಹಿರಂಗಪಡಿಸಿದ್ದಾರೆ.

ಕೋಲ್ಗೇಟ್ ಹಗರಣದ ವಿಚಾರಣೆ ನಡೆಸುತ್ತಿರುವ ಸುಪ್ರೀಂಕೋರ್ಟ್‌ ಮುಂದೆ ವಾದ ಮಂಡಿಸಿದ ಸಿಬಿಐ ವಕೀಲರು, ಕೇಂದ್ರ ಸರಕಾರಗಳ ವಿರುದ್ಧ ಕಿಡಿಕಾರಿದ್ದಾರೆ.

ಸ್ವಾತಂತ್ರ್ಯ ನಂತರ ಬಂದ ಯಾವುದೇ ಪಕ್ಷದ ಸರಕಾರಗಳು ಸಿಬಿಐ ಸಂಸ್ಥೆಯನ್ನು ಸ್ವತಂತ್ರಗೊಳಿಸುವುದು ಬಯಸಲಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು.

ಇತ್ತೀಚೆಗಷ್ಟೆ, ಸಿಬಿಐ ತನಿಖಾ ಸಂಸ್ಥೆ ಕೇಂದ್ರ ಸರಕಾರದ ಪಂಜರದಲ್ಲಿರುವ ಗಿಳಿಯಂತೆ ಎಂದು ಸುಪ್ರೀಂಕೋರ್ಟ್ ಕಿಡಿಕಾರಿತ್ತು.

ಸುಪ್ರೀಂಕೋರ್ಟ್ ನಿರ್ದೇಶನದ ಮೇರೆಗೆ ಕೇಂದ್ರ ಸರಕಾರ ಸಿಬಿಐ ಸಂಸ್ಥೆಗೆ ಸ್ವಾಯತ್ತತೆ ನೀಡಲು ಚಿಂತನೆ ನಡೆಸಿದೆ ಎಂದು ಸರಕಾರಿ ಪರ ವಕೀಲರು ವಾದ ಮಂಡಿಸಿದ್ದಾರೆ.

ವೆಬ್ದುನಿಯಾವನ್ನು ಓದಿ