ಯುವತಿಯರು ಫ್ಯಾಶನ್ ಡ್ರೆಸ್ ಧರಿಸಿ ಮಧ್ಯರಾತ್ರಿ ತಿರುಗಾಡಿದ್ರೆ ರೇಪ್ ಮಾಡದೇ ಬಿಡ್ತಾರಾ? : ಆಶಾ ಮಿರ್ಗೆ

ಮಂಗಳವಾರ, 1 ಏಪ್ರಿಲ್ 2014 (12:30 IST)
ದೇಶಾದ್ಯಂತ ಕುತೂಹಲ ಕೆರಳಿಸಿದ್ದ ದೆಹಲಿಯ ನಿರ್ಭಯಾ ಅತ್ಯಾಚಾರ ಪ್ರಕರಣ ರಾಜಕಾರಣಿಗಳಿಗೆ ತಮಾಷೆಯ ವಸ್ತುವಾಗಿ ಪರಿಣಮಿಸಿದೆ.

ಅತ್ಯಾಚಾರಕ್ಕೊಳಗಾಗಿದ್ದ ನಿರ್ಭಯಾ ಮಧ್ಯ ರಾತ್ರಿಯಲ್ಲಿ ಬಾಯ್‌ಫ್ರೆಂಡ್‌ನೊಂದಿಗೆ ತಿರುಗುವ ಅವಶ್ಯಕತೆ ಏನಿತ್ತು. ಮಧ್ಯರಾತ್ರಿ ಫ್ಯಾಷನ್ ಡ್ರೆಸ್ ಧರಿಸಿ ತಿರುಗಾಡಿದ್ರೆ ಅತ್ಯಾಚಾರ ಮಾಡದೇ ಬಿಡ್ತಾರಾ? ಎಂದು ಎನ್‌ಸಿಪಿ ನಾಯಕಿ ಮತ್ತು ಮಹಾರಾಷ್ಟ್ರ ಮಹಿಳಾ ಹಕ್ಕುಗಳ ಆಯೋಗದ ಸದಸ್ಯೆ ಆಶಾ ಮಿರ್ಗೆ ಹೇಳಿರುವುದು ಇದೀಗ ವಿವಾದಕ್ಕೆ ಕಾರಣವಾಗಿದೆ.

ಶರದ್ ಪವಾರ್ ನೇತೃತ್ವದ ಎನ್‌ಸಿಪಿ ಪಕ್ಷದ ಪದಾಧಿಕಾರಿಯಾದ ಆಶಾ ಮಿರ್ಗೆ ವೃತ್ತಿಯಲ್ಲಿ ವೈದ್ಯರಾಗಿದ್ದಾರೆ.

ಆಶಾ ಮಿರ್ಗೆ ಮಹಿಳೆಯರ ವಿರುದ್ಧ ಹೇಳಿಕೆ ನೀಡುವಾಗ ಎನ್‌ಸಿಪಿ ಮುಖ್ಯಸ್ಥೆ ಶರದ್ ಪವಾರ್ ಪುತ್ರಿ ಸುಪ್ರೀಯಾ ಸುಳೆ ಕೂಡಾ ಉಪಸ್ಥಿತರಿರುವುದು ದುರದೃಷ್ಟಕರ ಸಂಗತಿಯಾಗಿದೆ ಎಂದು ವಿಪಕ್ಷಗಳು ಕಿಡಿಕಾರಿವೆ.

ಮಿರ್ಗೆ ಹೇಳಿಕೆಯನ್ನು ನೀವು ಯಾಕೆ ತಡೆಯಲಿಲ್ಲ ಎಂದು ಮಾಧ್ಯಮದ ವರದಿಗಾರರು ಪವಾರ್ ಪುತ್ರಿ ಸುಪ್ರೀಯ ಸುಳೆಯವರನ್ನು ಪ್ರಶ್ನಿಸಿದಾಗ, ಆಕೆ ಪಕ್ಷದಲ್ಲಿ ಹಿರಿಯರಾಗಿದ್ದರಿಂದ ಅವರ ಭಾಷಣಕ್ಕೆ ಅಡ್ಡಿಪಡಿಸಲಿಲ್ಲ. ನನ್ನ ಭಾಷಣದ ಸರದಿ ಬಂದಾಗ ಅವರ ಹೇಳಿಕೆಯನ್ನು ಖಂಡಿಸಿದ್ದೇನೆ ಎಂದು ಸ್ಪಷ್ಟನೆ ನೀಡಿದ್ದಾರೆ.

ಮತ್ತೊಬ್ಬ ಎನ್‌ಸಿಪಿ ನಾಯಕ ಮಾಜಿ ಕೇಂದ್ರ ಸಚಿವ ಪ್ರಫುಲ್ ಪಟೇಲ್ ಮಾತನಾಡಿ, ಆಶಾ ಮಿರ್ಗೆ ಹೇಳಿಕೆ ದುರದೃಷ್ಟಕರ ಸಂಗತಿ. ಅವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ